ಬೆಂಗಳೂರಿನಲ್ಲಿ ನೂತನವಾಗಿ ಆರಂಭಗೊಂಡಿರುವ ಸ್ಪೀಡನ್ ಮೂಲದ ಪಿಠೋಪಕರಣಗಳ ಮಳಿಗೆ ಐಕಿಯ (IKEA Bengaluru) ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರಂತೆ 1000 ನೌಕರರಲ್ಲಿ ಶೆ.72 ರಷ್ಟು ಸ್ಥಳೀಯ ಉದ್ಯೋಗಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ. ಇದೀಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯುತ್ತಿದೆ. ಹೀಗಾಗಿ ಆಯ್ಕೆ ಪ್ರಕ್ರಿಯೆಯು ಯಾವಾಗ ಬೇಕಿದ್ದರೂ ಕೊನೆಗೊಳ್ಳಬಹುದು. ಏಕೆಂದರೆ ನಿರ್ದಿಷ್ಟ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದ್ದು, ಸಂಪೂರ್ಣ ಭರ್ತಿ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಂದರ್ಶನವನ್ನು ಕೊನೆಗೊಳಿಸಲಾಗುತ್ತಿದೆ. ಹೀಗಾಗಿ ಇಂದೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ಹೆಸರು:
ವಿದ್ಯಾರ್ಹತೆ:
ಆಯಾ ಹುದ್ದೆಗಳಿಗೆ ಅನುಸಾರವಾಗಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಹಾಗೆಯೇ ಇಂಗ್ಲಿಷ್ನಲ್ಲಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯವನ್ನು ಹೊಂದಿರಬೇಕು. ಇದರ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕಾಗುತ್ತದೆ ಎಂದು ತಿಳಿಸಲಾಗಿದೆ. ವಿದ್ಯಾರ್ಹತೆ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಅಧಿಸೂಚನೆ ಪರಿಶೀಲಿಸಿ.
ಅರ್ಜಿ ಸಲ್ಲಿಸುವುದು ಹೇಗೆ:
ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆಯಾ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 15, 2022.
ಈ ನೇಮಕಾತಿ ಕುರಿತಾದ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ. ಹಾಗೆಯೇ ಕಂಪೆನಿಯ ವೆಬ್ಸೈಟ್ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.