Indian Bank Recruitment: ಇಂಡಿಯನ್ ಬ್ಯಾಂಕ್​ನ ಕ್ಲರ್ಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: May 02, 2022 | 9:16 PM

Indian bank recruitment 2022: ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಕ್ರಿಕೆಟ್, ಹಾಕಿ, ವಾಲಿಬಾಲ್‌ನಂತಹ ಕ್ರೀಡೆಗಳಲ್ಲಿ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

Indian Bank Recruitment: ಇಂಡಿಯನ್ ಬ್ಯಾಂಕ್​ನ ಕ್ಲರ್ಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Bank Recruitment
Follow us on

Indian Bank Recruitment: ಇಂಡಿಯನ್ ಬ್ಯಾಂಕ್​ನ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಯು ಕ್ರೀಡಾ ಕೋಟಾದಲ್ಲಿ ನಡೆಯಲಿದ್ದು, ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ನೇಮಕಾತಿಯ ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವುದು ಹೇಗೆ? ವಿದ್ಯಾರ್ಹತೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.

* ಅಧಿಸೂಚನೆಯ ಪ್ರಕಾರ ಒಟ್ಟು 12 ಕ್ಲರ್ಕ್/ಜೆಜಿಎಂ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

* ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಕ್ರಿಕೆಟ್, ಹಾಕಿ, ವಾಲಿಬಾಲ್‌ನಂತಹ ಕ್ರೀಡೆಗಳಲ್ಲಿ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

* ಅಭ್ಯರ್ಥಿಗಳು ಪಿಯುಸಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಸಂಬಂಧಿತ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟ / ಜೂನಿಯರ್ / ಹಿರಿಯರ ತಂಡಗಳನ್ನು ಪ್ರತಿನಿಧಿಸಿರಬೇಕು.

* ಈ ಹುದ್ದೆಗಳಿಗೆ 18 ರಿಂದ 26 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.

ಪ್ರಮುಖ ವಿಷಯಗಳು..
* ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

* ಅಪ್ಲಿಕೇಶನ್ ಸ್ಕ್ರೀನಿಂಗ್ ಮತ್ತು ಪ್ರಯೋಗಗಳಲ್ಲಿ ತೋರಿದ ಪ್ರತಿಭೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಮೊದಲು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಸಂದರ್ಶನದ ಆಧಾರದ ಮೇಲೆ ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-05-2022.

* ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

_______________________________________________________

ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ:

Army recruitment 2022: ಭಾರತೀಯ ಸೇನೆಯ ಸದರ್ನ್ ಕಮಾಂಡ್ ಹೆಡ್​ ಕ್ವಾಟರ್ಸ್​ (BOO-V) ನಲ್ಲಿ 10 ನೇ ಮತ್ತು 12 ನೇ ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವಿದೆ. ಭಾರತೀಯ ಸೇನೆಯು ಸಫಾಯಿವಾಲಿ, ಡ್ರೈವರ್ ಆರ್ಡಿನರಿ ಗ್ರೇಡ್, ಲೋವರ್ ಡಿವಿಷನ್ ಕ್ಲರ್ಕ್ ಮುಂತಾದ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಈ ನೇಮಕಾತಿಗಾಗಿ ಅರ್ಜಿಯನ್ನು ಅಂಚೆಯ ಮೂಲಕ ಮಾಡಬೇಕು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಯ ವಿವರಗಳು:
ಸಫಾಯಿವಾಲಿ – 46 ಹುದ್ದೆಗಳು
ಸಫಾಯಿವಾಲಾ – 1 ಹುದ್ದೆ
ಡ್ರೈವರ್ – 2 ಹುದ್ದೆಗಳು
ಲೋವರ್ ಡಿವಿಷನ್ ಕ್ಲರ್ಕ್ – 9 ಹುದ್ದೆಗಳು

ಶೈಕ್ಷಣಿಕ ಅರ್ಹತೆ:
ಸಫಾಯಿವಾಲಾ, ಸಫಾಯಿವಾಲಿ ಮತ್ತು ಚಾಲಕ – 10 ನೇ ತೇರ್ಗಡೆಯಾಗಿರಬೇಕು. ಚಾಲಕ ಹುದ್ದೆಗೆ ಮಾನ್ಯ ಚಾಲನಾ ಪರವಾನಗಿ ಕೂಡ ಅಗತ್ಯ.
ಲೋವರ್ ಡಿವಿಷನ್ ಕ್ಲರ್ಕ್ – 12ನೇ ತೇರ್ಗಡೆಯಾಗಿರಬೇಕು. ಜೊತೆಗೆ ಇಂಗ್ಲಿಷ್ ನಲ್ಲಿ ನಿಮಿಷಕ್ಕೆ 35 ಪದಗಳು ಮತ್ತು ಹಿಂದಿಯಲ್ಲಿ 30 ಪದಗಳನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಬರಬೇಕು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.