AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Army recruitment 2022: 10ನೇ ತರಗತಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ

Army recruitment 2022: ಈ ಹುದ್ದೆಗಳಿಗೆ 18 ರಿಂದ 25 ವರ್ಷಗಳೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳು ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

Army recruitment 2022: 10ನೇ ತರಗತಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ
Army recruitment 2022
TV9 Web
| Updated By: ಝಾಹಿರ್ ಯೂಸುಫ್|

Updated on: May 01, 2022 | 8:39 PM

Share

Army recruitment 2022: ಭಾರತೀಯ ಸೇನೆಯ ಸದರ್ನ್ ಕಮಾಂಡ್ ಹೆಡ್​ ಕ್ವಾಟರ್ಸ್​ (BOO-V) ನಲ್ಲಿ 10 ನೇ ಮತ್ತು 12 ನೇ ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವಿದೆ. ಭಾರತೀಯ ಸೇನೆಯು ಸಫಾಯಿವಾಲಿ, ಡ್ರೈವರ್ ಆರ್ಡಿನರಿ ಗ್ರೇಡ್, ಲೋವರ್ ಡಿವಿಷನ್ ಕ್ಲರ್ಕ್ ಮುಂತಾದ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಈ ನೇಮಕಾತಿಗಾಗಿ ಅರ್ಜಿಯನ್ನು ಅಂಚೆಯ ಮೂಲಕ ಮಾಡಬೇಕು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಯ ವಿವರಗಳು: ಸಫಾಯಿವಾಲಿ – 46 ಹುದ್ದೆಗಳು ಸಫಾಯಿವಾಲಾ – 1 ಹುದ್ದೆ ಡ್ರೈವರ್ – 2 ಹುದ್ದೆಗಳು ಲೋವರ್ ಡಿವಿಷನ್ ಕ್ಲರ್ಕ್ – 9 ಹುದ್ದೆಗಳು

ಶೈಕ್ಷಣಿಕ ಅರ್ಹತೆ: ಸಫಾಯಿವಾಲಾ, ಸಫಾಯಿವಾಲಿ ಮತ್ತು ಚಾಲಕ – 10 ನೇ ತೇರ್ಗಡೆಯಾಗಿರಬೇಕು. ಚಾಲಕ ಹುದ್ದೆಗೆ ಮಾನ್ಯ ಚಾಲನಾ ಪರವಾನಗಿ ಕೂಡ ಅಗತ್ಯ. ಲೋವರ್ ಡಿವಿಷನ್ ಕ್ಲರ್ಕ್ – 12ನೇ ತೇರ್ಗಡೆಯಾಗಿರಬೇಕು. ಜೊತೆಗೆ ಇಂಗ್ಲಿಷ್ ನಲ್ಲಿ ನಿಮಿಷಕ್ಕೆ 35 ಪದಗಳು ಮತ್ತು ಹಿಂದಿಯಲ್ಲಿ 30 ಪದಗಳನ್ನು ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಬರಬೇಕು.

ವಯೋಮಿತಿ: ಈ ಹುದ್ದೆಗಳಿಗೆ 18 ರಿಂದ 25 ವರ್ಷಗಳೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳು ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಂಚೆ ಮೂಲಕ ಕಳುಹಿಸಬೇಕು. ಅರ್ಜಿ ಶುಲ್ಕ 100 ರೂ. ಅದನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ: The Commandant, Command Hospital (EC) Alipore, Kolkata 700027

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.