IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: May 08, 2022 | 8:43 PM

IOCL recruitment 2022: ಈ ಹುದ್ದೆಗಳಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಅಧಿಕೃತ ವೆಬ್‌ಸೈಟ್ www.iocl.com ಅಥವಾ www.iocrefrecruit.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
IOCL recruitment 2022
Follow us on

IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಜೂನಿಯರ್ ಇಂಜಿನಿಯರಿಂಗ್ ಸಹಾಯಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಅಧಿಕೃತ ವೆಬ್‌ಸೈಟ್ www.iocl.com ಅಥವಾ www.iocrefrecruit.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:
ಜೂನಿಯರ್ ಇಂಜಿನಿಯರಿಂಗ್ ಸಹಾಯಕ IV (ಉತ್ಪಾದನೆ) – 18 ಹುದ್ದೆಗಳು
ಜೂನಿಯರ್ ಎಂಜಿನಿಯರಿಂಗ್ ಸಹಾಯಕ IV (ಇನ್‌ಸ್ಟ್ರುಮೆಂಟೇಶನ್) – 1 ಹುದ್ದೆಗಳು

ವಿದ್ಯಾರ್ಹತೆ:
ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ IV (ಪ್ರೊಡಕ್ಷನ್)- ಕೆಮಿಕಲ್/ ರಿಫೈನರಿ & ಪೆಟ್ರೋಕೆಮಿಕಲ್ ಇಂಜಿನಿಯರಿಂಗ್ ಅಥವಾ B.Sc (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಕೈಗಾರಿಕಾ ರಸಾಯನಶಾಸ್ತ್ರ) ಕನಿಷ್ಠ 50% (SC/ST 45%) ಅಂಕಗಳೊಂದಿಗೆ ಪಾಸಾಗಿರಬೇಕು. ಅಲ್ಲದೆ, ಕನಿಷ್ಟ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.

ಜೂನಿಯರ್ ಇಂಜಿನಿಯರಿಂಗ್ ಸಹಾಯಕ IV (ಇನ್‌ಸ್ಟ್ರುಮೆಂಟೇಶನ್)-ಕೆಮಿಕಲ್/ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಇಂಜಿನಿಯರಿಂಗ್ ಅಥವಾ B.Sc (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಕೈಗಾರಿಕಾ ರಸಾಯನಶಾಸ್ತ್ರ) ಕನಿಷ್ಠ 50% (SC/ST 45%) ಅಂಕಗಳೊಂದಿಗೆ ಪಾಸಾಗಿರಬೇಕು. ಜೊತೆಗೆ ಕನಿಷ್ಟ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.

ವೇತನ:
ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿಯ ನಂತರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರತಿ ತಿಂಗಳು 25,000 ರಿಂದ 1,05,000/ರೂ. ವೇತನ ನೀಡಲಾಗುತ್ತದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.