IPPB Recruitment 2024 : ಅಂಚೆ ಪೇಮೆಂಟ್ ಬ್ಯಾಂಕ್​​ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 24, 2024 | 5:33 PM

ಅಂಚೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿಯಿರುವರು ಉದ್ಯೋಗ ಪಡೆಯಲು ಪ್ರಯತ್ನ ಪಡುತ್ತಿದ್ದೀರಾ. ಆದರೆ ಇದೀಗ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ) ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಅಂಚೆ ಇಲಾಖೆಯಿಂದ ಐಪಿಪಿಬಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭರ್ತಿ ಮಾಡಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಹತೆ, ವೇತನ, ಆಯ್ಕೆ ವಿಧಾನ, ಇನ್ನಿತ್ತರ ಮಾಹಿತಿಯನ್ನು ಓದಿ, ನಿಗದಿತ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

IPPB Recruitment 2024 : ಅಂಚೆ ಪೇಮೆಂಟ್ ಬ್ಯಾಂಕ್​​ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ) ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಅಂಚೆ ಇಲಾಖೆಯಿಂದ ಐಪಿಪಿಬಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭರ್ತಿ ಮಾಡಲು ಆನ್ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ 344 ಕಾರ್ಯನಿರ್ವಾಹಕ ಹುದ್ದೆಗಳು ಖಾಲಿಯಿದ್ದು, ಐಪಿಪಿಬಿ ನೇಮಕಾತಿ 2024 ಗಾಗಿ ಆನ್ಲೈನ್ ನೋಂದಣಿ ಲಿಂಕ್ ಅನ್ನು https://www.ippbonline.com/ ಅಕ್ಟೋಬರ್ 11, 2024 ರಿಂದ ಸಕ್ರಿಯಗೊಳಿಸಲಾಗಿದೆ.

ಹುದ್ದೆಗಳ ವಿವರ

* ಹುದ್ದೆಗಳು : ಎಕ್ಸಿಕ್ಯೂಟಿವ್

* ಒಟ್ಟು ಹುದ್ದೆಗಳು : 344

* ವರ್ಗ : ಸರ್ಕಾರಿ ಉದ್ಯೋಗಗಳು

* ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 11 ರಿಂದ 31, 2024

* ಸಂಬಳ : ತಿಂಗಳಿಗೆ 30,000 ರೂ.

* ಅರ್ಜಿ ಶುಲ್ಕ : 750 ರೂ

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು

* ಅಭ್ಯರ್ಥಿಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆ / ಮಂಡಳಿಯಿಂದ ಯಾವುದೇ ವಿಷಯದಲ್ಲಿ (ನಿಯಮಿತ / ದೂರಶಿಕ್ಷಣ) ಪದವಿ ಪಡೆದಿರಬೇಕು. (ಅಥವಾ) ಸರ್ಕಾರಿ ನಿಯಂತ್ರಣ ಸಂಸ್ಥೆಯಿಂದ ಅನುಮೋದಿಸಲ್ಪಟ್ಟಿರಬೇಕು.

* ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 2 ವರ್ಷಗಳ ಕಾಲ ಗ್ರಾಮೀಣ ಡಾಕ್ ಸೇವಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು..
* ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು.

* ಒಬಿಸಿ ಅಭ್ಯರ್ಥಿಗಳು 38 ವರ್ಷದವರೆಗೆ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು 40 ವರ್ಷದವರೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಇದನ್ನೂ ಓದಿ: ಬ್ಯಾಂಕ್ ನೇಮಕಾತಿ 2024: 1500 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ ಹೇಗೆ ಮಾಡಲಾಗುತ್ತದೆ?

* ಆಯ್ಕೆ ಪ್ರಕ್ರಿಯೆಯು ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಆಧರಿಸಿರುತ್ತದೆ.

* ಆನ್‌ಲೈನ್ ಪರೀಕ್ಷೆಯನ್ನು ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

* ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ (ಐಪಿಪಿಬಿ) ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

* ಮುಖಪುಟದ ಕೆಳಭಾಗದಲ್ಲಿರುವ ಕ್ಯಾರೆರ್ ವಿಭಾಗದ ಮೇಲೆ ಕ್ಲಿಕ್ ಮಾಡಿ.

* “344 ಎಕ್ಸಿಕ್ಯೂಟಿವ್ ನೇಮಕಾತಿ – ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ

* ಅಪ್ಲಿಕೇಶನ್ ಅನ್ನು ನೋಂದಾಯಿಸಲು, “ಹೊಸ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ” ಟ್ಯಾಬ್ ಅನ್ನು ಆರಿಸಿಕೊಳ್ಳಿ.

* ಇಲ್ಲಿ ನಿಮ್ಮ ಹೆಸರು, ಸಂಪರ್ಕ ವಿವರಗಳು ಮತ್ತು ಇಮೇಲ್ ಅನ್ನು ನಮೂದಿಸಿ. ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ಪಾಸ್ ವರ್ಡ್ ಅನ್ನು ಸಿಸ್ಟಂ ರಚಿಸುತ್ತದೆ ಮತ್ತು ಪರದೆಯ ಮೇಲೆ ತೋರಿಸುತ್ತದೆ.

* ಮಾರ್ಗಸೂಚಿಗಳಲ್ಲಿ ನೀಡಲಾದ ವಿಶೇಷಣಗಳ ಪ್ರಕಾರ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.

* ಕೊನೆಗೆ ಅಲ್ಲಿ ಯಾವುದೇ ಆನ್ಲೈನ್ ಪೇಮೆಂಟ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ