ITBP Recruitment: ಬಾರ್ಡರ್ ಪೋಲೀಸ್ ಫೋರ್ಸ್​ ಉದ್ಯೋಗಾವಕಾಶ: ವೇತನ 81 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: May 27, 2022 | 8:40 PM

ITBP Recruitment 2022: ಅಭ್ಯರ್ಥಿಗಳನ್ನು ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟದ ಪರೀಕ್ಷೆ (ಪಿಎಸ್‌ಟಿ), ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ITBP Recruitment: ಬಾರ್ಡರ್ ಪೋಲೀಸ್ ಫೋರ್ಸ್​ ಉದ್ಯೋಗಾವಕಾಶ: ವೇತನ 81 ಸಾವಿರ ರೂ.
ITBP Recruitment 2022
Follow us on

ITBP Recruitment: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ (ITBP) ನಲ್ಲಿನ ಹಲವು ಹುದ್ದೆಗಳ ನೇಮಕಾತಿ ಪಕ್ರಟಣೆ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಈ ಪೋಲೀಸ್ ಫೋರ್ಸ್‌ನಲ್ಲಿ ಗ್ರೂಪ್ ಸಿ ನಾನ್-ಗೆಜೆಟೆಡ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಕೆಳಗಿನಂತಿದೆ.

ಭರ್ತಿ ಮಾಡಬೇಕಾದ ಹುದ್ದೆಗಳು, ವಿದ್ಯಾರ್ಹತೆಗಳು

* ಈ ನೇಮಕಾತಿ ಅಡಿಯಲ್ಲಿ ಒಟ್ಟು 158 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ

* ಇವುಗಳಲ್ಲಿ ಪುರುಷ-135 ಹುದ್ದೆಗಳು, ಮಹಿಳೆ-23 ಹುದ್ದೆಗಳು ಸೇರಿವೆ.

* ಮೇಲಿನ ಹುದ್ದೆಗಳಿಗೆ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಜೊತೆಗೆ ಟೈಪಿಂಗ್ ಸಹ ವೇಗವಾಗಿರಬೇಕು.

* ಅಭ್ಯರ್ಥಿಗಳು 18 ರಿಂದ 25 ವರ್ಷದೊಳಗಿನವರಾಗಿರಬೇಕು.

ಪ್ರಮುಖ ವಿಷಯಗಳು..

* ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

* ಅಭ್ಯರ್ಥಿಗಳನ್ನು ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟದ ಪರೀಕ್ಷೆ (ಪಿಎಸ್‌ಟಿ), ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

* ಮಹಿಳೆಯರು / SC / ST / ಮಾಜಿ ಸೈನಿಕರು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಇತರೆ ಅಭ್ಯರ್ಥಿಗಳು ರೂ. 100 ಅರ್ಜಿ ಶುಲ್ಕ ಪಾವತಿಸಬೇಕು.

* ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 25,500 ರಿಂದ ರೂ. 81,100 ವರೆಗೆ ವೇತನ ಪಾವತಿಸಲಾಗುವುದು.

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-07-2022

* ಈ ನೇಮಕಾತಿ ಕುರಿತಾದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

* ಈ ನೇಮಕಾತಿ ಕುರಿತಾದ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.