
ಕರ್ನಾಟಕ ಕಂದಾಯ ಇಲಾಖೆ ಅಧಿಕೃತ ಕಿರು ಅಧಿಸೂಚನೆಯ ಮೂಲಕ 500 ಗ್ರಾಮ ಲೆಕ್ಕಿಗ(Village Accountant) ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಕರ್ನಾಟಕ ಕಂದಾಯ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ, 12ನೇ, ಪದವಿ , ಬಿ.ಕಾಂ. ಪೂರ್ಣಗೊಳಿಸಿರಬೇಕು .
ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷ ವಯಸ್ಸಿನವರಾಗಿರಬೇಕು. ಆದರೆ 2A, 2B, 3A, 3B ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಇದನ್ನೂ ಓದಿ: ಸರ್ಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಸುವರ್ಣವಕಾಶ; ಡಿಗ್ರಿ ಪಾಸಾಗಿದ್ರೆ ಸಾಕು
ಲಿಖಿತ ಪರೀಕ್ಷೆ (ಕಡ್ಡಾಯ ಕನ್ನಡ ಪತ್ರಿಕೆಯ ಹೊರತಾಗಿ, ತಲಾ 100 ಅಂಕಗಳ 2 ಪತ್ರಿಕೆಗಳು ಇರುತ್ತವೆ ಮತ್ತು ಋಣಾತ್ಮಕ ಅಂಕಗಳು ಇರುತ್ತವೆ.)ಜೊತೆಗೆ ದಾಖಲೆಗಳ ಪರಿಶೀಲನೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Wed, 15 October 25