ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಕಾಲೇಜುಗಳು ಅತಿ ಹೆಚ್ಚು MBBS ವೈದ್ಯರನ್ನು ಉತ್ಪಾದಿಸುತ್ತದೆ ಎಂಬುದು ವರದಿಯಾಗಿದೆ. MBBS ಸೀಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸಭೆಯಲ್ಲಿ ದತ್ತಾಂಶ ಮಂಡಿಸಿತ್ತು. ಇದರ ಪ್ರಕಾರ ಕರ್ನಾಟಕ ಅತಿ ಹೆಚ್ಚು MBBS ಸೀಟುಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ತಮಿಳುನಾಡು ಎರಡನೇ ಸ್ಥಾನದಲ್ಲಿದೆ.
MBBS ಸೀಟುಗಳ ಸಂಖ್ಯೆಯಲ್ಲಿ ತಮಿಳುನಾಡು 111650 ಸೀಟುಗಳನ್ನು ಹೊಂದಿದ್ದು, ಎರಡೇ ಸ್ಥಾನದಲ್ಲಿದೆ. ಅದರಂತೆ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಜೊತೆಗೆ MBBS ಸೀಟುಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1322 ಸೀಟುಗಳನ್ನು ಹೆಚ್ಚಿಸಲಾಗಿದ್ದು, ಒಟ್ಟು ಸೀಟುಗಳ ಸಂಖ್ಯೆ 11200ರಕ್ಕೆ ಏರಿಕೆಯಾಗಿದೆ.
ದೇಶದ ಅರ್ಧದಷ್ಟು ವೈದ್ಯರು ನೊಂದಾಯಿಸಲ್ಪಟ್ಟಿರುವ ನಾಲ್ಕು ರಾಜ್ಯಗಳೆಂದರೆ ಆಂಧ್ರಪ್ರದೇಶ(1,00,587), ಕರ್ನಾಟಕ(1,22,875), ಮಹಾರಾಷ್ಟ್ರ (1,73,384) ಮತ್ತು ತಮಿಳುನಾಡು (1,33,918).
ಸಾಮಾನ್ಯವಾಗಿ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ತಂತ್ರಜ್ಞಾನದ ಕೇಂದ್ರ ಮಾತ್ರವಲ್ಲದೆ ವೈದ್ಯಕೀಯ ಕ್ಷೇತ್ರದಲ್ಲೂ ಹೆಚ್ಚಿನ ಖ್ಯಾತಿಯನ್ನು ಹೊಂದಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜುಗಳಂತಹ ಹೆಸರಾಂತ ಸಂಸ್ಥೆಗಳೊಂದಿಗೆ ಕರ್ನಾಟಕವು ಗಮನಾರ್ಹ ಸಂಖ್ಯೆಯ ವೈದ್ಯರನ್ನು ಉತ್ಪಾದಿಸುತ್ತದೆ. ರಾಜ್ಯದ ವೈದ್ಯಕೀಯ ಶಿಕ್ಷಣ ಮೂಲಸೌಕರ್ಯ ಮತ್ತು ಬೆಂಬಲ ನೀತಿಗಳು ವೈದ್ಯಕೀಯ ವೃತ್ತಿಪರರ ಹೆಚ್ಚಿನ ಉತ್ಪಾದನೆಗೆ ಕೊಡುಗೆ ನೀಡುತ್ತಿದೆ.
ಇದನ್ನೂ ಓದಿ: 39 ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ನೇರ ಸಂದರ್ಶನ
ಇದಲ್ಲದೇ ಕರ್ನಾಟಕದಲ್ಲಿ BMCRI ಎಂದೂ ಕರೆಯಲ್ಪಡುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಳಗಾವಿಯ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ, ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ & ಆಸ್ಪತ್ರೆ ಹೀಗೆ ಸಾಕಷ್ಟು ಪ್ರತಿಷ್ಠಿತ ಕಾಲೇಜಿಗಳು ಪ್ರತೀ ವರ್ಷ ಲಕ್ಷಾಂತರ ವೈದ್ಯರನ್ನು ಉತ್ಪಾದಿಸುತ್ತಿದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Wed, 22 January 25