KSET Exams: ಮಹಾಮಳೆಯಿಂದ ಕೆಸೆಟ್ ಪರೀಕ್ಷಾರ್ಥಿಗಳಿಗೆ ಸಂಕಷ್ಟ; ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಲು ಮನವಿ

Karnataka Rains: ಭಾರಿ ಮಳೆಯಿಂದ ಎಲ್ಲ ರಸ್ತೆಗಳು ಬಂದ್ ಆಗಿದೆ. ಪರೀಕ್ಷಾ ಕೇಂದ್ರಕ್ಕೆ ಹೋಗುವುದಕ್ಕೆ ಆಗುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮ ಜಲಾವೃತವಾಗಿವೆ. ಪರೀಕ್ಷಾರ್ಥಿಗಳ ಪಠ್ಯಪುಸ್ತಕ, ಪ್ರವೇಶ ಪ್ರತಿ ನೀರುಪಾಲಾಗಿದೆ. ಹೀಗಾಗಿ ಕೆ-ಸೆಟ್ ಪರೀಕ್ಷೆ ಮುಂದೂಡಲು ರಾಜ್ಯ ಸರ್ಕಾರಕ್ಕೆ ಪರೀಕ್ಷಾರ್ಥಿಗಳು ಮನವಿ ಮಾಡಿದ್ದಾರೆ.

KSET Exams: ಮಹಾಮಳೆಯಿಂದ ಕೆಸೆಟ್ ಪರೀಕ್ಷಾರ್ಥಿಗಳಿಗೆ ಸಂಕಷ್ಟ; ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಲು ಮನವಿ
ಪ್ರಾತಿನಿಧಿಕ ಚಿತ್ರ
Edited By:

Updated on: Jul 24, 2021 | 6:13 PM

ಕಾರವಾರ: ಕೆ-ಸೆಟ್ ಪರೀಕ್ಷೆಗೆ ತೆರಳಲಾಗದೆ ಪರೀಕ್ಷಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ತೀವ್ರ ಮಳೆಯಿಂದ ಹೆದ್ದಾರಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಲಾಗದೆ ಪರೀಕ್ಷಾರ್ಥಿಗಳು ಪರದಾಡುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪರೀಕ್ಷಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಧಾರವಾಡ, ಶಿವಮೊಗ್ಗ ಪರೀಕ್ಷಾ ಕೇಂದ್ರಕ್ಕೆ ಹೋಗಲು ಆಗ್ತಿಲ್ಲ ಎಂದು ಕೆಸೆಟ್ ಪರೀಕ್ಷೆ ಎದುರಿಸಲು ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.

ಭಾರಿ ಮಳೆಯಿಂದ ಎಲ್ಲ ರಸ್ತೆಗಳು ಬಂದ್ ಆಗಿದೆ. ಪರೀಕ್ಷಾ ಕೇಂದ್ರಕ್ಕೆ ಹೋಗುವುದಕ್ಕೆ ಆಗುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮ ಜಲಾವೃತವಾಗಿವೆ. ಪರೀಕ್ಷಾರ್ಥಿಗಳ ಪಠ್ಯಪುಸ್ತಕ, ಪ್ರವೇಶ ಪ್ರತಿ ನೀರುಪಾಲಾಗಿದೆ. ಹೀಗಾಗಿ ಕೆ-ಸೆಟ್ ಪರೀಕ್ಷೆ ಮುಂದೂಡಲು ರಾಜ್ಯ ಸರ್ಕಾರಕ್ಕೆ ಪರೀಕ್ಷಾರ್ಥಿಗಳು ಮನವಿ ಮಾಡಿದ್ದಾರೆ.

ನಾಳೆ (ಜುಲೈ 25) ರಾಜ್ಯದಾದ್ಯಂತ ಪೂರ್ವನಿರ್ಧರಿತ ಕೆ- ಸೆಟ್(K-SET) ಪರೀಕ್ಷೆ ನಡೆಯಲಿದೆ. ಈ ನಡುವೆ, ತೀವ್ರ ಮಳೆಯಿಂದಾಗಿ ಹೆದ್ದಾರಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಳಾಗದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ಗ್ರಾಮೀಣ ಪ್ರದೇಶಗಳ ಪರೀಕ್ಷಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಪರೀಕ್ಷಾ ಕೇಂದ್ರವನ್ನು ತಲುಪಲಾಗದೇ, ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕೇವಲ 10 ಪರೀಕ್ಷಾ ಕೇಂದ್ರಗಳಿದ್ದು, ಉತ್ತರ ಕನ್ನಡದ ಪರೀಕ್ಷಾರ್ಥಿಗಳಿಗೆ ಹತ್ತಿರದ ಪರೀಕ್ಷಾ ಕೇಂದ್ರ ಧಾರವಾಡ ಮತ್ತು ಮಂಗಳೂರು ಮಾತ್ರ ಇದೆ.

ಉತ್ತರ ಕನ್ನಡದಲ್ಲಿ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ, ಮನೆಯ ಸಾಮಾನುಗಳ ಜೊತೆಗೆ ವಿದ್ಯಾರ್ಥಿಗಳ, ಪರೀಕ್ಷಾರ್ಥಿಗಳ ಪಠ್ಯ ಪುಸ್ತಕ, ಹಾಲ್ ಟಿಕೆಟ್ ಗಳು, ನಗದುಗಳು, ಬಟ್ಟೆ, ಬರೆಗಳು, ಕೂಡ ನೀರಿನಲ್ಲಿ ಹಾನಿಯಾಗಿ ಅನಾನುಕೂಲ ಉಂಟಾಗಿದೆ. ಹೀಗಾಗಿ ಕೆ- ಸೆಟ್(K-SET) ಪರೀಕ್ಷೆಗಳನ್ನು ಮೂಂದೂಡುವಂತೆ ಪರೀಕ್ಷಾರ್ಥಿಗಳು ಟಿವಿ9 ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕಾರ್ಯಾಲಯ, ಸಚಿವರು, ಸಂಸದರನ್ನೂ ವಿದ್ಯಾರ್ಥಿಗಳು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಅತಿವೃಷ್ಟಿ ಹಿನ್ನೆಲೆ; ತಕ್ಷಣಕ್ಕೆ ಬೇಕಾದ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡಲಿದೆ: ಪ್ರಲ್ಹಾದ್ ಜೋಶಿ

ಕರ್ನಾಟಕದಲ್ಲಿ ಮಹಾಮಳೆ: ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ; ಸಂಪೂರ್ಣ ವಿವರ ಇಲ್ಲಿದೆ

(Karnataka Various Places face Heavy Rainfall People demand to Postpone KSET Exams Scheduled on July 25)