KMF VIMUL Recruitment 2023: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಆಯ್ಕೆಯಾದರೆ ಸಿಗುವ ಮಾಸಿಕ ವೇತನ ಎಷ್ಟು? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಈ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
KMF VIMUL Recruitment 2023: ಕರ್ನಾಟಕ ಹಾಲು ಒಕ್ಕೂಟದ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ನ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಜೂನಿಯರ್ ಟೆಕ್ನಿಷಿಯನ್, ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಅಧಿಕೃತ ವೆಬ್ಸೈಟ್ bimul.deltainfo.in ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಆಯ್ಕೆಯಾದರೆ ಸಿಗುವ ಮಾಸಿಕ ವೇತನ ಎಷ್ಟು? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಈ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಸಂಸ್ಥೆಯ ಹೆಸರು : KMF ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF VIMUL)
ಹುದ್ದೆಗಳ ಸಂಖ್ಯೆ: 40
ಉದ್ಯೋಗ ಸ್ಥಳ: ವಿಜಯಪುರ – ಬಾಗಲಕೋಟ
ಹುದ್ದೆಗಳ ಹೆಸರು: ಜೂನಿಯರ್ ಟೆಕ್ನಿಷಿಯನ್, ವಿಸ್ತರಣಾ ಅಧಿಕಾರಿ
ಹುದ್ದೆಗಳ ವಿಭಾಗವಾರು ಮಾಹಿತಿ:
ಸಹಾಯಕ ವ್ಯವಸ್ಥಾಪಕ- 6 ಹುದ್ದೆಗಳು
ತಾಂತ್ರಿಕ ಅಧಿಕಾರಿ- 2 ಹುದ್ದೆಗಳು
ವಿಸ್ತರಣಾಧಿಕಾರಿ ಗ್ರೇಡ್3- 8 ಹುದ್ದೆಗಳು
ರಸಾಯನಶಾಸ್ತ್ರಜ್ಞ ಗ್ರೇಡ್2- 3 ಹುದ್ದೆಗಳು
ಜೂನಿಯರ್ ಸಿಸ್ಟಮ್ ಆಪರೇಟರ್- 3 ಹುದ್ದೆಗಳು
ಆಡಳಿತ ಸಹಾಯಕ ಗ್ರೇಡ್2- 2 ಹುದ್ದೆಗಳು
ಮಾರ್ಕೆಟಿಂಗ್ ಸಹಾಯಕ ಗ್ರೇಡ್2- 2 ಹುದ್ದೆಗಳು
ಜೂನಿಯರ್ ತಂತ್ರಜ್ಞ- 8 ಹುದ್ದೆಗಳು
ಮಿಲ್ಕ್ ಕೊರಿಯರ್ಸ್- 6 ಹುದ್ದೆಗಳು
ಶೈಕ್ಷಣಿಕ ಅರ್ಹತೆಗಳು:
ಸಹಾಯಕ ವ್ಯವಸ್ಥಾಪಕ – B.V.Sc
ತಾಂತ್ರಿಕ ಅಧಿಕಾರಿ- B.Sc , B.Tech (DT)
ವಿಸ್ತರಣಾಧಿಕಾರಿ ಗ್ರೇಡ್3- ಯಾವುದೇ ಪದವಿ
ರಸಾಯನಶಾಸ್ತ್ರಜ್ಞ ಗ್ರೇಡ್2- B.Sc
ಜೂನಿಯರ್ ಸಿಸ್ಟಮ್ ಆಪರೇಟರ್- B.Sc, BCA
ಆಡಳಿತ ಸಹಾಯಕ ಗ್ರೇಡ್2- ಯಾವುದೇ ಪದವಿ
ಮಾರ್ಕೆಟಿಂಗ್ ಸಹಾಯಕ ಗ್ರೇಡ್2- ಬಿ.ಕಾಂ, ಬಿ.ಬಿ.ಎ
ಜೂನಿಯರ್ ತಂತ್ರಜ್ಞ- ಎಸ್.ಎಸ್.ಎಲ್.ಸಿ., ಐ.ಟಿ.ಐ
ಮಿಲ್ಕ್ ಕೊರಿಯರ್ಸ್- ಎಸ್.ಎಸ್.ಎಲ್.ಸಿ
ವಯೋಮಿತಿ:
KMF ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷಗಳು
ಅರ್ಜಿ ಶುಲ್ಕ:
SC/ST/Cat-I/PH ಅಭ್ಯರ್ಥಿಗಳಿಗೆ: ರೂ.500/-
ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.1000/-
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.