KVS Recruitment 2022: ಶಿಕ್ಷಕ, ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.2 ಕೊನೆಯ ದಿನ

| Updated By: Digi Tech Desk

Updated on: Jan 02, 2023 | 2:35 PM

ಕೇಂದ್ರೀಯ ವಿದ್ಯಾಲಯ ಸಂಘಟನೆ ಇಂದು ಜನವರಿ 2 ರಂದು TGT, PGT ಮತ್ತು ಪ್ರಾಥಮಿಕ ಶಿಕ್ಷಕರು ಸೇರಿದಂತೆ 13,000 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇಂದು ಕೊನೆಗೊಳ್ಳಲಿದೆ.

KVS Recruitment 2022: ಶಿಕ್ಷಕ, ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.2 ಕೊನೆಯ ದಿನ
KVS Recruitment 2022
Follow us on

ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) ಇಂದು ಜನವರಿ 2 ರಂದು TGT, PGT ಮತ್ತು ಪ್ರಾಥಮಿಕ ಶಿಕ್ಷಕರು ಸೇರಿದಂತೆ 13,000 ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇಂದು ಕೊನೆಗೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ನಮೂನೆಗಳನ್ನು kvsangathan.nic.in ನಲ್ಲಿ ಸಲ್ಲಿಸಬಹುದು. ಈ ಹಿಂದೆ ಅರ್ಜಿ ಸಲ್ಲಿಸಲು ಡಿಸೆಂಬರ್ 26 ಕೊನೆಯ ದಿನಾಂಕವಾಗಿದ್ದು, ಅದನ್ನು ವಿಸ್ತರಿಸಲಾಗಿತ್ತು.

ಕೆವಿಎಸ್‌ನಲ್ಲಿನ ಅಧಿಕಾರಿಗಳ ಹುದ್ದೆಗಳು, ಬೋಧನೆ ಮತ್ತು ಬೋಧಕೇತರ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 26.12.2022 ರಿಂದ 02.01.2023 ಇಂದು ಸಂಜೆಯವರೆಗೆ ವಿಸ್ತರಿಸಲು KVS ನ ಸಕ್ಷಮ ಪ್ರಾಧಿಕಾರವು ನಿರ್ಧರಿಸಿದೆ. ವಯಸ್ಸು, ವಿದ್ಯಾರ್ಹತೆ, ಅನುಭವ ಇತ್ಯಾದಿಗಳಿಗೆ ಸಂಬಂಧಿಸಿದ ಇತರ ನಿಯಮಗಳು ಮತ್ತು ಷರತ್ತುಗಳು ಜಾಹೀರಾತು ಸಂಖ್ಯೆ 15 ಮತ್ತು 16 ರಲ್ಲಿ ಉಲ್ಲೇಖಿಸಿರುವಂತೆ (ಅಂದರೆ 26.12.2022) ಹಾಗೆಯೇ ಇರುತ್ತವೆ ಎಂದು ಇತ್ತೀಚಿನ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನು ಓದಿ:ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ, ದೇಶದಲ್ಲಿ ಹೆಚ್ಚುತ್ತಿದೆ ನೇಮಕಾತಿ; ವರದಿ

ಅಭ್ಯರ್ಥಿಗಳು ಅರ್ಹತಾ ಮಾನದಂಡಗಳು ಮತ್ತು ಇತರ ಮಾಹಿತಿಗಾಗಿ ವಿವರವಾದ ಅಧಿಸೂಚನೆಗಳನ್ನು ಪರಿಶೀಲಿಸಬಹುದು.

ಖಾಲಿ ಹುದ್ದೆಗಳ ವಿವರ:

ಪ್ರಾಥಮಿಕ ಶಿಕ್ಷಕ: 6414

ಸಹಾಯಕ ಆಯುಕ್ತರು: 52

ಪ್ರಿನ್ಸಿಪಾಲ್: 239

ವೈಸ್ ಪ್ರಿನ್ಸಿಪಾಲ್: 203

ಸ್ನಾತಕೋತ್ತರ ಶಿಕ್ಷಕರು: 1409

ತರಬೇತಿ ಪಡೆದ ಪದವೀಧರ ಶಿಕ್ಷಕರು: 3176

ಗ್ರಂಥಪಾಲಕರು: 355

ಪ್ರಾಥಮಿಕ ಶಿಕ್ಷಕ (ಸಂಗೀತ): 303

ಹಣಕಾಸು ಅಧಿಕಾರಿ: 6

ಸಹಾಯಕ ಇಂಜಿನಿಯರ್ (ಸಿವಿಲ್): 2

ಸಹಾಯಕ ವಿಭಾಗ ಅಧಿಕಾರಿ: 156

ಹಿಂದಿ ಅನುವಾದಕ: 11

ಹಿರಿಯ ಸೆಕ್ರೆಟರಿಯೇಟ್ ಸಹಾಯಕ: 322

ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ: 702

ಸ್ಟೆನೋಗ್ರಾಫರ್ ಗ್ರೇಡ್ 2: 54

ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Mon, 2 January 23