MSIL Recruitment 2023: ಎಂಎಸ್​ಐಎಲ್​ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ

| Updated By: ಝಾಹಿರ್ ಯೂಸುಫ್

Updated on: Jul 31, 2023 | 2:29 PM

MSIL Recruitment 2023: ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

MSIL Recruitment 2023: ಎಂಎಸ್​ಐಎಲ್​ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ
MSIL Recruitment 2023
Follow us on

MSIL Recruitment 2023: ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್​ನ ಸಹಾಯಕ ವ್ಯವಸ್ಥಾಪಕರು, ಕ್ಲರ್ಕ್ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಹಿಂದೆ ಜುಲೈ 31 ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಇದೀಗ ಅಂತಿಮ ದಿನಾಂಕವನ್ನು ಆಗಸ್ಟ್​ 7ರವರೆಗೆ ರವರೆಗೆ ಮುಂದೂಡಲಾಗಿದೆ. ಅದರಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಸಂಸ್ಥೆಯ ಹೆಸರು : ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (MSIL)
  • ಹುದ್ದೆಗಳ ಸಂಖ್ಯೆ: 72
  • ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
  • ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು, ಕ್ಲರ್ಕ್

ಹುದ್ದೆಗಳ ಸಂಖ್ಯಾ ವಿವರಗಳು:

  • ಸಹಾಯಕ ವ್ಯವಸ್ಥಾಪಕರು- 23 ಹುದ್ದೆಗಳು
  • ಮಾರಾಟ ಮೇಲ್ವಿಚಾರಕ- 19 ಹುದ್ದೆಗಳು
  • ಸೇಲ್ಸ್ ಇಂಜಿನಿಯರ್- 4 ಹುದ್ದೆಗಳು
  • ಅಕೌಂಟ್ಸ್ ಕ್ಲರ್ಕ್- 6 ಹುದ್ದೆಗಳು
  • ಕ್ಲರ್ಕ್​​- 14 ಹುದ್ದೆಗಳು
  • ಮಾರಾಟ ಪ್ರತಿನಿಧಿ- 6 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಸಹಾಯಕ ವ್ಯವಸ್ಥಾಪಕರು- ಪದವಿ , M.Sc, MBA, ಸ್ನಾತಕೋತ್ತರ ಪದವಿ, CA ಅಥವಾ ICWA ಮಾಡಿರಬೇಕು.
  • ಮಾರಾಟ ಮೇಲ್ವಿಚಾರಕ- ಪದವೀಧರರಾಗಿರಬೇಕು.
  • ಸೇಲ್ಸ್ ಇಂಜಿನಿಯರ್- ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.
  • ಅಕೌಂಟ್ಸ್ ಕ್ಲರ್ಕ್- ಅರ್ಥಶಾಸ್ತ್ರ/ಗಣಿತದಲ್ಲಿ ಬಿ.ಕಾಂ, ಬಿಬಿಎ ಮಾಡಿರಬೇಕು.
  • ಕ್ಲರ್ಕ್​- ಪದವೀಧರರಾಗಿರಬೇಕು.
  • ಮಾರಾಟ ಪ್ರತಿನಿಧಿ- ಪದವೀಧರರಾಗಿರಬೇಕು.

ವಯೋಮಿತಿ:

ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:

  • SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
  • Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಶುಲ್ಕ:

  • PWD & ಎಕ್ಸ್​-ಸರ್ವೀಸ್​ಮ್ಯಾನ್ ಅಭ್ಯರ್ಥಿಗಳು: ರೂ.250/-
  • SC/ST ಮತ್ತು Cat-I ಅಭ್ಯರ್ಥಿಗಳು: ರೂ.750/-
  • ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳು: ರೂ.1000/-

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-ಆಗಸ್ಟ್-2023

ಅರ್ಜಿ ಸಲ್ಲಿಸುವುದು ಹೇಗೆ?

ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್‌ಸೈಟ್: msilonline.com