MSIL Recruitment 2023: ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (MSIL) ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಹಿಂದೆ ಜುಲೈ 22 ಕೊನೆಯ ದಿನಾಂಕ ಎಂದು ತಿಳಿಸಲಾಗಿದ್ದು, ಇದೀಗ ಈ ತಿಂಗಳಾಂತ್ಯದವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಸಹಾಯಕ ವ್ಯವಸ್ಥಾಪಕರು, ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಸಂಸ್ಥೆಯ ಹೆಸರು : ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (MSIL)
ಹುದ್ದೆಗಳ ಸಂಖ್ಯೆ: 72
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕರು, ಕ್ಲರ್ಕ್
ಹುದ್ದೆಗಳ ವಿಭಾಗ:
ಸಹಾಯಕ ವ್ಯವಸ್ಥಾಪಕರು- 23 ಹುದ್ದೆಗಳು
ಮಾರಾಟ ಮೇಲ್ವಿಚಾರಕ- 19 ಹುದ್ದೆಗಳು
ಸೇಲ್ಸ್ ಇಂಜಿನಿಯರ್- 4 ಹುದ್ದೆಗಳು
ಅಕೌಂಟ್ಸ್ ಕ್ಲರ್ಕ್- 6 ಹುದ್ದೆಗಳು
ಕ್ಲರ್ಕ್- 14 ಹುದ್ದೆಗಳು
ಮಾರಾಟ ಪ್ರತಿನಿಧಿ- 6 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಸಹಾಯಕ ವ್ಯವಸ್ಥಾಪಕರು- ಪದವಿ , M.Sc, MBA, ಸ್ನಾತಕೋತ್ತರ ಪದವಿ, CA ಅಥವಾ ICWA ಮಾಡಿರಬೇಕು.