NCB Recruitment 2024 : ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಲಾಖೆಯಲ್ಲಿ ಕೆಳದರ್ಜೆ ಕ್ಲರ್ಕ್ ಹುದ್ದೆಗಳು ಖಾಲಿ , ಇಂದೇ ಅರ್ಜಿ ಸಲ್ಲಿಸಿ

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗಾಗಿ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಇಲಾಖೆಯಲ್ಲಿ ಕೆಳದರ್ಜೆ ಕ್ಲರ್ಕ್ ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಿಳಿದುಕೊಳ್ಳಲೇಬೇಕಾದ ವಿದ್ಯಾರ್ಹತೆ, ವಯೋಮಿತಿ ಹಾಗೂ ವೇತನ ಶ್ರೇಣಿ, ಆಯ್ಕೆ ವಿಧಾನ ಸೇರಿದಂತೆ ಇನ್ನಿತರ ಮಾಹಿತಿಗಳು ಇಲ್ಲಿದೆ.

NCB Recruitment 2024 : ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಲಾಖೆಯಲ್ಲಿ ಕೆಳದರ್ಜೆ ಕ್ಲರ್ಕ್ ಹುದ್ದೆಗಳು ಖಾಲಿ , ಇಂದೇ ಅರ್ಜಿ ಸಲ್ಲಿಸಿ
ಸಾಂದರ್ಭಿಕ ಚಿತ್ರ
Edited By:

Updated on: Dec 16, 2024 | 5:46 PM

ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಇಲ್ಲೊಂದು ಅವಕಾಶವಿದ್ದು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಯೂ ಆರಂಭಗೊಂಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಈ ಕೆಳಗೆ ತಿಳಿಸಲಾದ ದಿನಾಂಕದೊಳಗೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಬಹುದು.

ಉದ್ಯೋಗದ ವಿವರಗಳು

* ಇಲಾಖೆ ಹೆಸರು : ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)

* ಹುದ್ದೆಗಳ ಹೆಸರು : ಕೆಳದರ್ಜೆ ಕ್ಲರ್ಕ್ ಹುದ್ದೆಗಳು

* ಒಟ್ಟು ಹುದ್ದೆಗಳು : 4

* ಅರ್ಜಿ ಸಲ್ಲಿಸುವುದು : ಆಫ್ ಲೈನ್

* ಉದ್ಯೋಗ ಸ್ಥಳ : ಭಾರತ

ವಿದ್ಯಾರ್ಹತೆ ಹಾಗೂ ವಯೋಮಿತಿ

* ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎನ್ ಸಿ ಬಿ ಮಾನದಂಡಗಳ ಪ್ರಕಾರ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.

* ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೇಮಕಾತಿ ಅಧಿಸೂಚನೆಯ ಪ್ರಕಾರವಾಗಿ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷ ದಾಟಿರಬಾರದು.

ಮಾಸಿಕ ವೇತನ ಹಾಗೂ ಆಯ್ಕೆ ವಿಧಾನ

* ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 5,200 – 20,200/- ವೇತನವನ್ನು ನಿಗದಿಪಡಿಸಲಾಗಿದೆ.

* ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ

ಹೆಚ್ಚುವರಿ ನಿರ್ದೇಶಕರ ಕಚೇರಿ (P&A), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (HQ), 2ನೇ ಮಹಡಿ, ಆಗಸ್ಟ್ ಕ್ರಾಂತಿ ಭವನ, ಭಿಕಾಜಿ ಕಾಮಾ ಪ್ಲೇಸ್, ನವದೆಹಲಿ-110066.

ಪ್ರಮುಖ ದಿನಾಂಕಗಳು

* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10-ಡಿಸೆಂಬರ್-2024

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-ಫೆಬ್ರವರಿ-2025

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ