ದೆಹಲಿ: ಭಾರತೀಯ ಸೇನೆಯು ಎನ್‌ಸಿಸಿ ವಿಶೇಷ ಪ್ರವೇಶ ಸ್ಕೀಮ್ನ 50 ನೇ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ. ಭಾರತೀಯ ಸೇನೆಯಲ್ಲಿ ಸಣ್ಣ ಸೇವಾ ಆಯೋಗದ ಅನುದಾನಕ್ಕಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಭಾರತೀಯ ಸೇನೆ ತಿಳಿಸಿದೆ. ಅಕ್ಟೋಬರ್ 2021 ರಲ್ಲಿ ಈ ಕೋರ್ಸ್ ಪ್ರಾರಂಭವಾಗಲಿದೆ.
ಎನ್‌ಸಿಸಿ ಮಾಡಿರುವ ಪುರುಷರಿಗೆ ಒಟ್ಟು 50 ಹುದ್ದೆಗಳು ಲಭ್ಯವಿದ್ದು, ಎನ್‌ಸಿಸಿ ಮಾಡಿರುವ ಮಹಿಳೆಯರಿಗೆ ಒಟ್ಟು 5 ಹುದ್ದೆಗಳು ಲಭ್ಯವಿದೆ. ಆನ್‌ಲೈನ್‌ನ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನಾಂಕ. ಎನ್‌ಸಿಸಿಯ ಹಿರಿಯ ವಿಭಾಗ (ಸೀನಿಯರ್ ಡಿವಿಷನ್ ವಿಂಗ್) ಕನಿಷ್ಠ ಎರಡು ಅಥವಾ ಮೂರು ವರ್ಷ ಸೇವೆ ಸಲ್ಲಿಸಿ ಎನ್‌ಸಿಸಿ ‘ಸಿ’ ಸರ್ಟಿಫಿಕೇಟ್ ಹೊಂದಿರುವ ಪದವೀಧರರು ಅರ್ಜಿ ಸಲ್ಲಿಸಬಹುದು. ಹಾಗೂ ಎನ್‌ಸಿಸಿ ‘ಸಿ’ ಸರ್ಟಿಫಿಕೇಟ್ನಲ್ಲಿ ಕನಿಷ್ಠ ‘ಬಿ’ ಗ್ರೇಡ್ ಪಡೆದಿರಬೇಕು.
19 ರಿಂದ 25 ವರ್ಷದೊಳಗಿನ “ಎನ್‌ಸಿಸಿ ಅಭ್ಯರ್ಥಿಗಳಿಗೆ (ಬ್ಯಾಟಲ್ ಅಪಘಾತಗಳ ವಾರ್ಡ್‌ಗಳು ಸೇರಿದಂತೆ) ಜುಲೈ 1, 2021 ಕ್ಕೆ 19 ರಿಂದ 25 ವರ್ಷಗಳ (ಜನನ 02 ಜುಲೈ 1996 ಕ್ಕಿಂತ ಮುಂಚೆಯೇ ಇರಬಾರದು ಮತ್ತು 01 ಜುಲೈ 2002 ರ ನಂತರವೂ ಇರಬಾರದು)ವಯೋಮಿತಿಯವರು ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳನ್ನು ಚೆನ್ನೈನ ಒಟಿಎನಲ್ಲಿ ಪೂರ್ವ ತರಬೇತಿ ನೀಡಲಾಗುತ್ತದೆ. ಅಲಹಾಬಾದ್, ಭೋಪಾಲ್, ಬೆಂಗಳೂರು ಮತ್ತು ಕಪುರ್ಥಾಲಾದಲ್ಲಿ ಎಸ್‌ಎಸ್‌ಬಿಗೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅಭ್ಯರ್ಥಿಗಳನ್ನು ಎರಡು ಹಂತದ ಆಯ್ಕೆ ವಿಧಾನದ ಮೂಲಕ ಸೇರಿಸಲಾಗುವುದು. ಮೊದಲ ಹಂತವನ್ನು ಪಾಸ್ ಮಾಡಿದವರು ಎರಡನೇ ಹಂತಕ್ಕೆ ಹೀಗುತ್ತಾರೆ. ಹಾಗೂ ರಿಜೆಕ್ಟ್ ಆದವರನ್ನು ಅದೇ ದಿನ ತಮ್ಮ ಊರುಗಳಿಗೆ ಕಳಿಸಲಾಗುತ್ತದೆ. ಎಸ್ಎಸ್ಬಿ ಸಂದರ್ಶನದ ಅವಧಿ 5 ದಿನಗಳು ಎಂದು ಭಾರತೀಯ ಸೇನೆ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ www.joinindianarmy.nic.in ಗೆ ಭೇಟಿ ನೀಡಬಹುದು.
ಇದನ್ನೂ ಓದಿ: NCC RDC: ರೈಫಲ್ ನನ್ನ ಬೆಸ್ಟ್ ಫ್ರೆಂಡ್, ನಿದ್ದೆಗಿಲ್ಲ ಸಮಯ; ಇದು ಆರ್ಡಿಸಿ ಸಾಧಕನ ಮಾತು