ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ NHPC ಅಪ್ರೆಂಟಿಸ್‌ಶಿಪ್ ಟ್ರೈನಿ (Apprenticeship Trainees) ಪೋಸ್ಟ್‌ಗಳ ಅಧಿಸೂಚನೆಯನ್ನು 10/04/2023 ರಂದು ಬಿಡುಗಡೆ ಮಾಡಿದೆ. 45 ಹುದ್ದೆಗಳಿಗೆ ಅಧಿಸೂಚನೆ ಹೊರಬಿದ್ದಿದೆ. ಅಭ್ಯರ್ಥಿಗಳನ್ನು ಉತ್ತರಾಖಂಡದ (Uttarakhand) ಯೋಜನೆಗಳು / ವಿದ್ಯುತ್ ಕೇಂದ್ರಗಳು / NHPC ಕಚೇರಿಗಳಲ್ಲಿ ಇರಿಸಲಾಗುತ್ತದೆ. ತರಬೇತಿಯ ಅವಧಿ ಒಂದು ವರ್ಷ ಇರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 13/04/2023 ರಿಂದ 03/05/2023 ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕೆಳಗಿನ ವಿಷಯಗಳಲ್ಲಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಯನ್ನು ಸಲ್ಲಿಸಬಹುದು
ಕೆಳಗಿನ ಕೋಷ್ಟಕವು ಹುದ್ದೆಗಳ ಹೆಸರು ಮತ್ತು ನಿರ್ದಿಷ್ಟ ಹುದ್ದೆಗೆ ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಒಳಗೊಂಡಿದೆ.
ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಯ ಸಂಬಳದ ವಿವರಗಳನ್ನು ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಇನ್ನು ಬಹಿರಂಗಪಡಿಸಿಲ್ಲ.
ಅಭ್ಯರ್ಥಿಗಳು ನೀಡಿರುವ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಬಾರದು. ಹುದ್ದೆಗಳಿಗೆ ಅರ್ಹರಾಗಲು ಅಭ್ಯರ್ಥಿಗಳು 18 ರಿಂದ 25 ವರ್ಷದ ಒಳಗಿನವರಾಗಿರಬೇಕು.
ಅಭ್ಯರ್ಥಿಗಳು ಸಂಬಂಧಿತ ಟ್ರೇಡ್‌ಗಳಲ್ಲಿ 10 ನೇ ಮತ್ತು ಐಟಿಐ ಉತ್ತೀರ್ಣರಾಗಿರಬೇಕು.
Dy. Manager (HR), Tanakpur Power Station, NHPC Limited, Banbasa, District Champawat, Pin-262310
ಇದನ್ನೂ ಓದಿ: 500 ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ; ತಿಂಗಳ ಸಂಬಳ ರೂ. 151100
Published On - 4:14 pm, Wed, 12 April 23