NLC Recruitment 2022: ಎನ್​ಎಲ್​ಸಿ ನೇಮಕಾತಿ: ಆರಂಭಿಕ ವೇತನ 31 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Dec 04, 2022 | 2:45 PM

NLC Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NLC ಯ ಅಧಿಕೃತ ವೆಬ್‌ಸೈಟ್‌ nlcindia.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

NLC Recruitment 2022: ಎನ್​ಎಲ್​ಸಿ ನೇಮಕಾತಿ: ಆರಂಭಿಕ ವೇತನ 31 ಸಾವಿರ ರೂ.
NLC Recruitment 2022
Follow us on

NLC Recruitment 2022: NLC ಇಂಡಿಯಾ ಲಿಮಿಟೆಡ್​ನಲ್ಲಿನ ಜೂನಿಯರ್ ಓವರ್‌ಮ್ಯಾನ್ (ಟ್ರೇನಿ), ಜೂನಿಯರ್ ಸರ್ವೇಯರ್ (ಟ್ರೇನಿ) ಮತ್ತು ಸರ್ದಾರ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NLC ಯ ಅಧಿಕೃತ ವೆಬ್‌ಸೈಟ್‌ nlcindia.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳ ಸಂಖ್ಯೆ- 213
  • ಜೂನಿಯರ್ ಓವರ್‌ಮ್ಯಾನ್ (ಟ್ರೇನಿ) ನೆಯ್ವೇಲಿ ಮೈನ್ಸ್, ತಮಿಳುನಾಡು – 46 ಹುದ್ದೆಗಳು
  • ಬಾರ್ಸಿಂಗ್‌ಸರ್ ಮೈನ್ಸ್, ರಾಜಸ್ಥಾನ – 03 ಹುದ್ದೆಗಳು
  • ತಲಬಿರಾ ಮೈನ್ಸ್, ಒಡಿಶಾ – 02 ಹುದ್ದೆಗಳು
  • ಜೂನಿಯರ್ ಸರ್ವೇಯರ್ (ಟ್ರೇನಿ) ನೇವೇಲಿ ಮೈನ್ಸ್,
  • ತಮಿಳುನಾಡು – 13 ಹುದ್ದೆಗಳು
  • ಬಾರ್ಸಿಂಗ್‌ಸರ್ ಮೈನ್ಸ್, ರಾಜಸ್ಥಾನ – 01 ಹುದ್ದೆ
  • ತಲಾಬಿರಾ ಮೈನ್ಸ್, ಒಡಿಶಾ- 01 ಹುದ್ದೆ
  • ದರ್ಜೆ-1, ನೇವೇಲಿ ಮೈನ್ಸ್, ತಮಿಳುನಾಡು – 133 ಹುದ್ದೆಗಳು
  • ಬಾರ್ಸಿಂಗ್ಸರ್ ಮೈನ್ಸ್, ರಾಜಸ್ಥಾನ – 14 ಹುದ್ದೆಗಳು

ಅರ್ಹತಾ ಮಾನದಂಡಗಳು:
ಇಲ್ಲಿ ಆಯಾ ವಿಭಾಗಗಳಿಗೂ ವಿಭಿನ್ನ ವಿದ್ಯಾರ್ಹತೆಯನ್ನು ಕೇಳಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಿದ್ಯಾರ್ಹತೆಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ
IOCL Recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನಲ್ಲಿದೆ ಉದ್ಯೋಗಾವಕಾಶ
Indian Navy SSR Recruitment 2022: ನೌಕಾಪಡೆಯ ಅಗ್ನಿವೀರರ ನೇಮಕಾತಿ: PUC ಪಾಸಾದವರಿಗೆ ಉದ್ಯೋಗಾವಕಾಶ
Indian Railway Recruitment 2022: ರೈಲ್ವೆ ನೇಮಕಾತಿ: 596 ಹುದ್ದೆಗಳಿಗೆ ಅರ್ಜಿ ಆಹ್ವಾನ
ECIL Recruitment 2022: ECIL ನೇಮಕಾತಿ: ಮಾಸಿಕ ವೇತನ 31 ಸಾವಿರ ರೂ.

ಇದನ್ನೂ ಓದಿ: Indian Navy SSR Recruitment 2022: ನೌಕಾಪಡೆಯ ಅಗ್ನಿವೀರರ ನೇಮಕಾತಿ: PUC ಪಾಸಾದವರಿಗೆ ಉದ್ಯೋಗಾವಕಾಶ

ವಯೋಮಿತಿ:
ಈ ಹುದ್ದೆಗಳಿಗೆ 30 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಎಸ್​1 ಗ್ರೇಡ್ ಅಭ್ಯರ್ಥಿಗಳಿಗೆ 31 ಸಾವಿರದಿಂದ 1 ಲಕ್ಷದವರೆಗೆ ವೇತನ ಸಿಗಲಿದೆ. ಹಾಗೆಯೇ ಎಸ್​2 ಗ್ರೇಡ್ ಅಭ್ಯರ್ಥಿಗಳಿಗೆ 26 ಸಾವಿರದಿಂದ 1 ಲಕ್ಷದ 10 ಸಾವಿರದವರೆಗೆ ವೇತನ ನೀಡಲಾಗುತ್ತದೆ.

ಇದನ್ನೂ ಓದಿ:CRIS Recruitment 2022: ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ: ವೇತನ 35 ಸಾವಿರ ರೂ.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 30, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.