PM Internship Scheme 2025: PM ಇಂಟರ್ನ್‌ಶಿಪ್ ಯೋಜನೆಯ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಏಪ್ರಿಲ್ 15ಕ್ಕೆ ವಿಸ್ತರಿಸಿದೆ. 21-24 ವಯಸ್ಸಿನ, ಕನಿಷ್ಠ 10ನೇ ತರಗತಿ ಉತ್ತೀರ್ಣರಾದ ಮತ್ತು ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಂಟರ್ನ್‌ಶಿಪ್‌ಗೆ ಭಾರತದ ಪ್ರಮುಖ ಕಂಪನಿಗಳಲ್ಲಿ 12 ತಿಂಗಳ ಅವಕಾಶ, ಮಾಸಿಕ ಸಹಾಯಧನ ಮತ್ತು ವಿಮಾ ರಕ್ಷಣೆ ಸೌಲಭ್ಯಗಳಿವೆ.

PM Internship Scheme 2025: PM ಇಂಟರ್ನ್‌ಶಿಪ್ ಯೋಜನೆಯ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ
Pm Internship Scheme

Updated on: Apr 09, 2025 | 2:57 PM

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಎರಡನೇ ಹಂತದ PM ಇಂಟರ್ನ್‌ಶಿಪ್ ಯೋಜನೆಯ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈಗ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯ ಸಿಕ್ಕಿದೆ. ಈ ಮೊದಲು ಇದರ ಗಡುವನ್ನು ಮಾರ್ಚ್ 31 ಎಂದು ನಿಗದಿಪಡಿಸಲಾಗಿತ್ತು, ಈಗ ಅದನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲಾಗಿದೆ.

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ ಎಂದರೇನು?

ಈ ಯೋಜನೆಯನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಪ್ರಾರಂಭಿಸಿದ್ದು, 2024 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಯಿತು. ಮುಂದಿನ ಐದು ವರ್ಷಗಳಲ್ಲಿ ಯುವಕರಿಗೆ 1 ಕೋಟಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.

PM ಇಂಟರ್ನ್‌ಶಿಪ್ ಯೋಜನೆಯ ಪ್ರಯೋಜನಗಳು:

  • ಭಾರತದ ಪ್ರಮುಖ ಕಂಪನಿಗಳಲ್ಲಿ 12 ತಿಂಗಳ ಇಂಟರ್ನ್‌ಶಿಪ್
  • ಭಾರತ ಸರ್ಕಾರದಿಂದ ಮಾಸಿಕ 4500 ರೂ. ಮತ್ತು ಕಂಪನಿಯಿಂದ 500 ರೂ. ಸಹಾಯಧನ.
  • ಆಕಸ್ಮಿಕ ವೆಚ್ಚಗಳಿಗಾಗಿ 6000 ರೂ.ಗಳ ಒಂದು ಬಾರಿಯ ಅನುದಾನ.
  • ಭಾರತ ಸರ್ಕಾರವು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಪ್ರತಿ ಇಂಟರ್ನ್‌ಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  • ವಯಸ್ಸು: 21- 24 ವರ್ಷಗಳು
  • ಶಿಕ್ಷಣ: ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಪ್ರಮುಖ ಸಂಸ್ಥೆಗಳಿಂದ (ಐಐಟಿಗಳು ಮತ್ತು ಐಐಎಂಎಸ್) ಪದವಿ
  • ಉದ್ಯೋಗ ಸ್ಥಿತಿ: ಪೂರ್ಣ ಸಮಯದ ಉದ್ಯೋಗದಲ್ಲಿರಬಾರದು.
  • ಆದಾಯ ನಿರ್ಬಂಧ: ಕುಟುಂಬದ ಆದಾಯವು ವಾರ್ಷಿಕ 8 ಲಕ್ಷ ರೂ. ಮೀರಬಾರದು. ಸರ್ಕಾರಿ ನೌಕರರ ಕುಟುಂಬಗಳು ಇದಕ್ಕೆ ಅರ್ಹರಲ್ಲ.

ಇದನ್ನೂ ಓದಿ: ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಕೂಡಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ
ಕೃಷಿ ಎಂಜಿನಿಯರಿಂಗ್‌ನಲ್ಲಿ ಹಲವು ಉದ್ಯೋಗವಕಾಶ; ತಿಂಗಳಿಗೆ ಲಕ್ಷ ಲಕ್ಷ ಸಂಬಳ!
ಪಿಯುಸಿ ಪಾಸ್ ಆದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗಾವಕಾಶ
ಇಸ್ರೋದಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ನೇಮಕಾತಿ
ನಾಸಾದಲ್ಲಿಯೂ ಇಂಟರ್ನ್‌ಶಿಪ್ ಅವಕಾಶವಿದೆಯೇ?

PM ಇಂಟರ್ನ್‌ಶಿಪ್ ಅರ್ಜಿ ಸಲ್ಲಿಸುವುದು ಹೇಗೆ?

  • ಅಭ್ಯರ್ಥಿಗಳು PM ಇಂಟರ್ನ್‌ಶಿಪ್ pminternship.mca.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ನಂತರ ಮುಖಪುಟಕ್ಕೆ ಹೋಗಿ ನೋಂದಣಿ ಆಯ್ಕೆಯನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ.
  • ಅದರ ನಂತರ ನೋಂದಣಿ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಈಗ ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ.
  • ಭವಿಷ್ಯದ ಬಳಕೆಗಾಗಿ ಇದರ ಮುದ್ರಿತ ಪ್ರತಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Wed, 9 April 25