PNB Recruitment 2022: ಬ್ಯಾಂಕ್ ನೇಮಕಾತಿ: ವೇತನ 69 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Aug 22, 2022 | 8:00 AM

Punjab National Bank Recruitment 2022: ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಪಂಜಾಬ್ ನ್ಯಾಷನಲ್​ ಬ್ಯಾಂಕ್​ನ ಅಧಿಕೃತ ವೆಬ್‌ಸೈಟ್‌ pnbindia.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

PNB Recruitment 2022: ಬ್ಯಾಂಕ್ ನೇಮಕಾತಿ: ವೇತನ 69 ಸಾವಿರ ರೂ.
PNB Recruitment 2022
Follow us on

PNB Recruitment 2022: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ಉದ್ಯೋಗವನ್ನು (ಸರ್ಕಾರಿ ನೌಕ್ರಿ) ಹುಡುಕುತ್ತಿರುವವರಿಗೆ ಇಲ್ಲಿದೆ ಸುರ್ವಣಾವಕಾಶ. ಏಕೆಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಪಂಜಾಬ್ ನ್ಯಾಷನಲ್​ ಬ್ಯಾಂಕ್​ನ ಅಧಿಕೃತ ವೆಬ್‌ಸೈಟ್‌ pnbindia.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  • ಆಫೀಸರ್ (ಅಗ್ನಿಶಾಮಕ ಸುರಕ್ಷತೆ): 23 ಹುದ್ದೆಗಳು
  • ಮ್ಯಾನೇಜರ್ (ಸುರಕ್ಷತೆ): 80 ಹುದ್ದೆಗಳು
  • ಒಟ್ಟು ಹುದ್ದೆಗಳ ಸಂಖ್ಯೆ- 103

ಅರ್ಹತಾ ಮಾನದಂಡಗಳು:

ಇದನ್ನೂ ಓದಿ
BECIL Recruitment 2022: ಬಿಇಸಿಐಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
SSC Recruitment 2022: ಎಸ್​​ಎಸ್​ಸಿ ಜೆಇ ಹುದ್ದೆಗಳ ನೇಮಕಾತಿ: ವೇತನ 1 ಲಕ್ಷ ರೂ.
NHAI Recruitment 2022: ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ: ವೇತನ 60 ಸಾವಿರ ರೂ.
BSNL Recruitment 2022: BSNL ಕರ್ನಾಟಕದಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಮ್ಯಾನೇಜರ್: AICTE/UGC ಯಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು.
  • ಆಫೀಸರ್: ರಾಷ್ಟ್ರೀಯ ಅಗ್ನಿಶಾಮಕ ಸೇವಾ ಕಾಲೇಜು (NFSC) ನಾಗ್ಪುರದಿಂದ BE(ಫೈರ್), ಅಥವಾ AICTE/UGC ಅನುಮೋದಿಸಿದ ಕಾಲೇಜು/ವಿಶ್ವವಿದ್ಯಾಲಯದಿಂದ ಅಗ್ನಿಶಾಮಕ ತಂತ್ರಜ್ಞಾನ/ಅಗ್ನಿಶಾಮಕ ಇಂಜಿನಿಯರಿಂಗ್/ ಸುರಕ್ಷತೆ ಮತ್ತು ಅಗ್ನಿಶಾಮಕ ಇಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷದ ಪದವಿ (B.Tech/BE) ಮಾಡಿಬೇಕು.

ವಯೋಮಿತಿ:
21 ವರ್ಷದಿಂದ 35 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವೇತನ:

  • ಆಫೀಸರ್- 36 ಸಾವಿರದಿಂದ 63 ಸಾವಿರದವರೆಗೆ ವೇತನ ನೀಡಲಾಗುತ್ತದೆ.
  • ಮ್ಯಾನೇಜರ್- 48 ಸಾವಿರದಿಂದ 69 ಸಾವಿರದವರೆಗೆ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ- ರೂ.1003/-
  • SC/ST/PWBD ವರ್ಗಕ್ಕೆ ಅರ್ಜಿ ಶುಲ್ಕ- ರೂ.59/-

ಆಯ್ಕೆ ಪ್ರಕ್ರಿಯೆ:
ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ತಲಾ 2 ಅಂಕಗಳ 50 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯ ಅವಧಿ 60 ನಿಮಿಷಗಳು ಮತ್ತು ಗರಿಷ್ಠ ಅಂಕಗಳು 100.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಆಗಸ್ಟ್ 30, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.