RITES Recruitment 2024 : ರೈಲ್ವೆ ಇಲಾಖೆಯಲ್ಲಿ ಸಹಾಯಕ ವ್ಯವಸ್ಥಾಪಕ, ಸೈಟ್ ಇಂಜಿನಿಯರ್ ವಿವಿಧ ಹುದ್ದೆಗಳು ಖಾಲಿ, ಪದವಿ ಡಿಪ್ಲೊಮಾ ಪಾಸಾಗಿದ್ದವರು ಇಂದೇ ಅರ್ಜಿ ಸಲ್ಲಿಸಿ

| Updated By: ಅಕ್ಷತಾ ವರ್ಕಾಡಿ

Updated on: Dec 15, 2024 | 10:02 AM

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಹಾಯಕ ವ್ಯವಸ್ಥಾಪಕ, ಸೈಟ್ ಇಂಜಿನಿಯರ್ ಹುದ್ದೆಗಳು ಸೇರಿದಂತೆ ಒಟ್ಟು 15 ಹುದ್ದೆಗಳು ಖಾಲಿಯಿದೆ. ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಜನವರಿ 10 ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿದೆ.

RITES Recruitment 2024 : ರೈಲ್ವೆ ಇಲಾಖೆಯಲ್ಲಿ ಸಹಾಯಕ ವ್ಯವಸ್ಥಾಪಕ, ಸೈಟ್ ಇಂಜಿನಿಯರ್ ವಿವಿಧ ಹುದ್ದೆಗಳು ಖಾಲಿ, ಪದವಿ ಡಿಪ್ಲೊಮಾ ಪಾಸಾಗಿದ್ದವರು ಇಂದೇ ಅರ್ಜಿ ಸಲ್ಲಿಸಿ
RITES Recruitment
Follow us on

ಪದವಿ, ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಪದವಿ ಪೂರ್ಣ ಗೊಳಿಸಿ, ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಇಲ್ಲೊಂದು ಸುವರ್ಣವಕಾಶವಿದೆ. ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ಇಲಾಖೆಯಲ್ಲಿ ಖಾಲಿಯಿರುವ 15 ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ. ಇದರಲ್ಲಿ ಸಹಾಯಕ ಮ್ಯಾನೇಜರ್, ಸೈಟ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

  • ಸಂಸ್ಥೆಯ ಹೆಸರು: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು
  • ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕ, ಸೈಟ್ ಸರ್ವೇಯರ್, ಸೈಟ್ ಎಂಜಿನಿಯರ್, ಸೈಟ್ ಎಂಜಿನಿಯರ್ (ಸೇತುವೆ), ಗುಣಮಟ್ಟ ನಿಯಂತ್ರಣ ತಜ್ಞ, ನಿವಾಸಿ ಇಂಜಿನಿಯರ್ (ಸಿವಿಲ್), ನಿವಾಸಿ ಎಂಜಿನಿಯರ್ (ಸೇತುವೆ), ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ)
  • ಹುದ್ದೆಗಳ ಸಂಖ್ಯೆ: ಒಟ್ಟು 15 ಹುದ್ದೆಗಳು

ಶೈಕ್ಷಣಿಕ ಅರ್ಹತೆಗಳು:

  • ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಸ್ನಾತಕೋತ್ತರ ಪದವಿ, ಸೈಟ್ ಸರ್ವೇಯರ್ ಹಾಗೂ ಸೈಟ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ, ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು.
  • ಗುಣಮಟ್ಟ ನಿಯಂತ್ರಣ ತಜ್ಞರು ಹುದ್ದೆಗೆ ಡಿಪ್ಲೊಮಾ, ಸಿವಿಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ರೆಸಿಡೆಂಟ್ ಎಂಜಿನಿಯರ್ (ಸಿವಿಲ್), ರೆಸಿಡೆಂಟ್ ಎಂಜಿನಿಯರ್ (ಬ್ರಿಡ್ಜ್) ಹುದ್ದೆಗೆ ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  • ಸೆಕ್ಟರ್ ಎಕ್ಸ್‌ಪರ್ಟ್/ಸಿವಿಲ್ (ಸೇತುವೆ ವಿನ್ಯಾಸ) ಹುದ್ದೆಗೆ ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪರ್ಣಗೊಳಿಸಿರಬೇಕು.

ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಇಂಟರ್ನ್‌ಶಿಪ್ ಗೆ ಅರ್ಜಿ ಆಹ್ವಾನ , ಇಲ್ಲಿದೆ ಮಾಹಿತಿ

ವಯೋಮಿತಿ ಹಾಗೂ ವೇತನಶ್ರೇಣಿ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಗರಿಷ್ಠ 32 ವರ್ಷ ಮೀರಿರಬಾರದು. ಇನ್ನು ಉಳಿದಂತೆ ಸೈಟ್ ಸರ್ವೇಯರ್, ಸೈಟ್ ಎಂಜಿನಿಯರ್, ಸೈಟ್ ಎಂಜಿನಿಯರ್ (ಸೇತುವೆ), ಗುಣಮಟ್ಟ ನಿಯಂತ್ರಣ ತಜ್ಞ, ನಿವಾಸಿ ಇಂಜಿನಿಯರ್ (ಸಿವಿಲ್), ನಿವಾಸಿ ಎಂಜಿನಿಯರ್ (ಸೇತುವೆ), ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು.
  • ಮೇಲ್ಕಂಡ ಹುದ್ದೆಗಳ ಅನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಇಡಬ್ಲ್ಯೂಎಸ್‌ /ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ರೂ.300.
  • ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ – ರೂ.600.

ಆಯ್ಕೆ ಪ್ರಕ್ರಿಯೆ:

  • ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನಕ್ಕೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಡಿಸೆಂಬರ್‌ 13, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 10 2025
  • ಸಂದರ್ಶನದ ದಿನಾಂಕ: ಜನವರಿ 9 ಹಾಗೂ 10, 2025

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ