ರೈಲ್ವೆ ನೇಮಕಾತಿ ಮಂಡಳಿಯು 2019ರಲ್ಲಿ ನಡೆಸಿದ್ದ NTPC CBT-1 (ತಾಂತ್ರಿಕವಲ್ಲದ ಜನಪ್ರಿಯ ವರ್ಗಗಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ) ಪರೀಕ್ಷೆಯ ಪರಿಷ್ಕೃತ ಫಲಿತಾಂಶದ ಅಂಕಪಟ್ಟಿಯಲ್ಲಿ 2022ರ ಮಾರ್ಚ್ 30ರಂದು rrcb.gov.in. ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಈ ಸಿಬಿಟಿ 1ನೇ ಹಂತದಲ್ಲಿ ಉತ್ತೀರ್ಣರಾದವರು ಸಿಬಿಟಿ 2 ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಹಾಗೇ 2020ರ ಡಿಸೆಂಬರ್ 28ರಿಂದ 2021ರ ಜುಲೈ 31ರವರೆಗೆ ನಡೆದಿದ್ದ ಎನ್ಟಿಪಿಸಿ 2, 3, 5 ಮತ್ತು 6ನೇ ಹಂತಗಳ ಪರಿಷ್ಕೃತ ಫಲಿತಾಂಶವನ್ನೂ ನೋಡಬಹುದಾಗಿದೆ.
ಅಂದಹಾಗೇ ಸದ್ಯ ರೈಲ್ವೆ ನೇಮಕಾತಿ ಮಂಡಳಿಯು ಸದ್ಯ ಆರ್ಆರ್ಬಿ ಮುಜಾಫರ್ಪುರ, ಚೆನ್ನೈ, ಬೆಂಗಳೂರು, ಅಹ್ಮದಾಬಾದ್, ಸಿಕಂದರಾಬಾದ್, ಅಜ್ಮೇರ್, ಅಲಹಾಬಾದ್, ಸಿಲಿಗುರಿ, ಗುವಾಹಟಿ, ಜಮ್ಮು-ಶ್ರೀನಗರ್, ಕೋಲ್ಕತ್ತ, ಮಾಲ್ಡಾ, ಮುಂಬೈ, ಪಾಟ್ನಾ, ರಾಂಚಿ, ತಿರುವನಂತಪುರಂ ಪ್ರದೇಶಗಳಿಂದ ಪರೀಕ್ಷೆ ಬರೆದ ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದು, ಸದ್ಯದಲ್ಲೇ ಉಳಿದ ಸ್ಥಳಗಳ ಅಭ್ಯರ್ಥಿಗಳ ರಿಸಲ್ಟ್ ಕೂಡ rrcb.gov.in. ವೆಬ್ಸೈಟ್ನಲ್ಲಿ ಘೋಷಣೆಯಾಗಲಿದೆ.
ಆರ್ಆರ್ಬಿ ಎನ್ಟಿಪಿಸಿ ಸಿಬಿಟಿ 1ರ ಪರೀಕ್ಷೆ ಬರೆದವರು ತಮ್ಮ ಫಲಿತಾಂಶವನ್ನು ನೋಡುವ ವಿಧಾನ ಇಲ್ಲಿದೆ:
1. ಮೊದಲು RRB website rrcb.gov.inಅಥವಾ ಪ್ರಾದೇಶಿಕ ವೆಬ್ಸೈಟ್ಗೆ ಭೇಟಿ ಕೊಡಿ. ಅಂದರೆ ನೀವು ಬೆಂಗಳೂರಿನಿಂದ ಪರೀಕ್ಷೆ ಬರೆದಿದ್ದರೆ ಆರ್ಆರ್ಬಿಯ ಬೆಂಗಳೂರು ವೆಬ್ಸೈಟ್ಗೆ ಭೇಟಿ ಕೊಡಿ
2. ಅಲ್ಲಿ ಕಾಣಿಸುತ್ತಿರುವ CEN-01/2019 (NTPC): Link for viewing score card & check level wise eligibility for CBT-2 ಎಂಬಲ್ಲಿ ಕ್ಲಿಕ್ ಮಾಡಿ. ಆಗ ಹೊಸದೊಂದು ಪೇಜ್ ತೆರೆದುಕೊಳ್ಳುತ್ತದೆ.
3. ಹೀಗೆ ಕಾಣಿಸಿಕೊಂಡ ಪೇಜ್ನಲ್ಲಿ ನಿಮ್ಮ ರೋಲ್ ನಂಬರ್, ಹುಟ್ಟಿದ ದಿನಾಂಕ, ಲಾಗಿನ್ ಸೆಕ್ಯೂರಿಟಿಗಾಗಿ ನೀಡುವ ಕ್ಯಾಪ್ಚಾ ಕೋಡ್ಗಳನ್ನು ದಾಖಲಿಸಿ ಲಾಗಿನ್ ಆಗಿ. ಆಗ ನಿಮ್ಮ ಅಂಕದಪಟ್ಟಿ ಕಾಣಿಸಿಕೊಳ್ಳುತ್ತದೆ.
4. ಆ ಅಂಕದ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿಕೊಂಡು ಡೌನ್ಲೋಡ್ ಮಾಡಿಕೊಳ್ಳಿ. ಹಾಗೇ ಪ್ರಿಂಟ್ ಕೂಡ ತೆಗೆದು ಇಟ್ಟುಕೊಳ್ಳಿ.
5. ಇದೇ ವೆಬ್ಸೈಟ್ನಲ್ಲಿ CEN-01/2019 (NTPC) CBT-1 ಪರೀಕ್ಷೆಯ 2, 3, 5 ಮತ್ತು 6ನೇ ಹಂತದ ಪರಿಷ್ಕೃತ ಫಲಿತಾಂಶ ಕೂಡ ಬಿಡುಗಡೆಯಾಗಿದೆ.
ಇದೀಗ ಸಿಬಿಟಿ -1ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿಬಿಟಿ 2ನೇ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ 2022ರ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಲಿದೆ ಎನ್ನಲಾಗಿದೆ. ಎನ್ಟಿಪಿಸಿಯ ಒಟ್ಟು 35,281 ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆ ನಡೆದಿದೆ. ಆದರೆ ಒಟ್ಟಾರೆ ಸುಮಾರು 1.25 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಎಂಬುದು ವಿಶೇಷ.
ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ; ಸಿಲಿಂಡರ್, ಬೈಕ್ಗಳಿಗೆ ಹೂವಿನ ಹಾರ ಹಾಕಿ ಧರಣಿ
Published On - 11:26 am, Thu, 31 March 22