
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ ಎಸ್‌ಬಿಐ ಪ್ರೊಬೇಷನರಿ ಆಫೀಸರ್ (ಪಿಒ) ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಪರಿಶೀಲಿಸಬಹುದು. SBI PO ಮುಖ್ಯ ಪರೀಕ್ಷೆಯನ್ನು ಮೇ.5 ರಂದು ನಡೆಸಲಾಯಿತು. ಈ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗಿದ್ದು, ಇದೀಗ ಫಲಿತಾಂಶ ಹೊರ ಬಿದ್ದಿದೆ. ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಎಸ್‌ಬಿಐ ಪಿಒ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು 20 ಅಂಕಗಳ ಸೈಕೋಮೆಟ್ರಿಕ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನವು 30 ಅಂಕಗಳಾಗಿರುತ್ತದೆ. ನಂತರ ಈ ಎಲ್ಲಾ ಸುತ್ತುಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ, ಅದರ ಆಧಾರದ ಮೇಲೆ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಪದವೀಧರರಿಗೆ ಸರ್ಕಾರಿ ಬ್ಯಾಂಕಿನಲ್ಲಿ ಉದ್ಯೋಗವಕಾಶ, 2600 ಹುದ್ದೆಗಳು ಖಾಲಿ
ಈ ನೇಮಕಾತಿ ಪ್ರಕ್ರಿಯೆಯ ಮೂಲಕ, SBI ನಲ್ಲಿ ಒಟ್ಟು 600 ಪ್ರೊಬೇಷನರಿ ಆಫೀಸರ್ ಅಂದರೆ PO ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇವುಗಳಲ್ಲಿ 240 ಹುದ್ದೆಗಳು ಸಾಮಾನ್ಯ ವರ್ಗಕ್ಕೆ, 158 ಹುದ್ದೆಗಳು ಒಬಿಸಿಗೆ, 58 ಹುದ್ದೆಗಳು ಇಡಬ್ಲ್ಯೂಎಸ್‌ಗೆ, 87 ಹುದ್ದೆಗಳು ಎಸ್‌ಸಿಗೆ, 57 ಹುದ್ದೆಗಳು ಎಸ್‌ಟಿಗೆ ಸೇರಿವೆ. ಈ ನೇಮಕಾತಿಯಲ್ಲಿ 586 ನಿಯಮಿತ ಮತ್ತು 14 ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇವೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ