
ಸರ್ಕಾರಿ ಕೆಲಸದ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಒಂದು ಶುಭ ಸುದ್ದಿ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL) ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪಿಯುಸಿ ಪಾಸ್ ಅಭ್ಯರ್ಥಿಗಳಿಗೆ ಆಗಿದ್ದು, ಒಟ್ಟು 3131 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SSC ಯ ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡುವ ಮೂಲಕ ಜುಲೈ 18 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಪರೀಕ್ಷೆಯ ಮೂಲಕ, SSC ಲೋವರ್ ಡಿವಿಷನ್ ಕ್ಲರ್ಕ್ (LDC), ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA), ಪೋಸ್ಟಲ್ ಅಸಿಸ್ಟೆಂಟ್ (PA), ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಡೇಟಾ ಎಂಟ್ರಿ ಆಪರೇಟರ್ (DEO) ನಂತಹ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುತ್ತದೆ.
ಈ ನೇಮಕಾತಿಯಲ್ಲಿ ಭಾಗವಹಿಸಲು ಬಯಸುವ ಯಾವುದೇ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ (10+2) ಉತ್ತೀರ್ಣರಾದ ಪ್ರಮಾಣಪತ್ರವನ್ನು ಹೊಂದಿರಬೇಕು. ವಯಸ್ಸಿನ ಬಗ್ಗೆ ಹೇಳುವುದಾದರೆ, ಅಭ್ಯರ್ಥಿಯ ವಯಸ್ಸು ಆಗಸ್ಟ್ 1, 2025 ರಂದು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳು ಆಗಿರಬೇಕು. ನಿಯಮಗಳ ಪ್ರಕಾರ ಕಾಯ್ದಿರಿಸಿದ ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗುತ್ತದೆ. ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ವರ್ಗಕ್ಕೆ 100 ರೂ. ಶುಲ್ಕವಿರುತ್ತದೆ. ಆದರೆ ಎಸ್‌ಸಿ/ಎಸ್‌ಟಿ, ಪಿಡಬ್ಲ್ಯೂಡಿ, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ: SBI ಬ್ಯಾಂಕಿನಲ್ಲಿ ಕೆಲಸ ಪಡೆಯಲು ಸುವರ್ಣ ಅವಕಾಶ, 2600 ಹುದ್ದೆಗಳಿಗೆ ನೇಮಕಾತಿ
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Wed, 25 June 25