Maulana Azad Medical College: ಈ ಕಾಲೇಜಿನಲ್ಲಿ ಕೇವಲ 13,500 ರೂ. ಗೆ ಎಂಬಿಬಿಎಸ್ ಅಧ್ಯಯನ ಮಾಡಬಹುದು
ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು, ಕೇವಲ ವಾರ್ಷಿಕ 13,500 ರೂಪಾಯಿಗಳಿಗೆ MBBS ಕೋರ್ಸ್‌ಗೆ ನೀಡುತ್ತಿದೆ. 250 MBBS ಸೀಟುಗಳಿವೆ, ಅದರಲ್ಲಿ 6 ಸೀಟುಗಳು ಭಾರತ ಸರ್ಕಾರದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಈ ಕಾಲೇಜು ಉತ್ತಮ ಸೌಲಭ್ಯಗಳನ್ನು ಹೊಂದಿದೆ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ. ಬಡ ವಿದ್ಯಾರ್ಥಿಗಳಿಗೆ ಭಾರತದಲ್ಲಿನ ಇತರ ವೈದ್ಯಕೀಯ ಕಾಲೇಜುಗಳಿಗಿಂತ ಇದು ಬಹಳ ಉತ್ತಮ ಆಯ್ಕೆಯಾಗಿದೆ.

ಭಾರತದಲ್ಲಿ ಸಾಮಾನ್ಯವಾಗಿ MBBS ಕೋರ್ಸ್‌ನ ಒಟ್ಟು ವೆಚ್ಚವು 20 ಲಕ್ಷದಿಂದ 1 ಕೋಟಿ ರೂಪಾಯಿಗಳವರೆಗೆ ಇರುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಿಂದ ಬಹಳ ಕಡಿಮೆ ಶುಲ್ಕದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಬಹುದು. ಇಲ್ಲಿ ಎಂಬಿಬಿಎಸ್‌ನ ಒಟ್ಟು ಶುಲ್ಕ 13,500 ರೂ. ಇದರಲ್ಲಿ ಬೋಧನೆ, ಗ್ರಂಥಾಲಯ ಶುಲ್ಕ ಇತ್ಯಾದಿ ಸೇರಿವೆ. ಎಬಿಬಿಎಸ್‌ನ ಒಟ್ಟು ಸೀಟುಗಳಲ್ಲಿ 6 ಸೀಟುಗಳು ಭಾರತ ಸರ್ಕಾರದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಕ್ಯಾಂಪಸ್ ಒಟ್ಟು 122 ಎಕರೆ ಪ್ರದೇಶದಲ್ಲಿ ಹರಡಿದೆ.
ಎಷ್ಟು MBBS ಸೀಟುಗಳಿವೆ?
ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಅಧಿಕೃತ ವೆಬ್‌ಸೈಟ್ ಪ್ರಕಾರ, ಎಬಿಬಿಎಸ್‌ಗೆ ಒಟ್ಟು 250 ಸೀಟುಗಳಿವೆ. ವೈದ್ಯಕೀಯ ಪದವಿಯ ಜೊತೆಗೆ, ಇತರ ಅನೇಕ ವೈದ್ಯಕೀಯ ಕೋರ್ಸ್‌ಗಳನ್ನು ಸಹ ಇಲ್ಲಿ ನಡೆಸಲಾಗುತ್ತದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಭಾಂಗಣ, ಡಿಜಿಟಲ್ ತರಗತಿ ಕೊಠಡಿಗಳು, ವಿವಿಧ ಆಧುನಿಕ ಪ್ರಯೋಗಾಲಯಗಳು ಸೇರಿದಂತೆ ಹಲವು ಸೌಲಭ್ಯಗಳಿವೆ. ವೈದ್ಯಕೀಯ ಯುಜಿ ಕೋರ್ಸ್‌ಗಳಿಗಾಗಿ ಒಟ್ಟು 7 ಹಾಸ್ಟೆಲ್‌ಗಳಿದ್ದು, ಅವು 24 ಗಂಟೆಗಳ ವೈ-ಫೈ ಸೌಲಭ್ಯವನ್ನು ಹೊಂದಿವೆ.
MBBS ಶುಲ್ಕ ಎಷ್ಟು?
ಇಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಒಟ್ಟು ಶುಲ್ಕ ಸುಮಾರು 13,500 ರೂ. ಕಾಲೇಜಿನ ಅಧಿಕೃತ ವೆಬ್‌ಸೈಟ್ ಪ್ರಕಾರ, ವಾರ್ಷಿಕ ಬೋಧನಾ ಶುಲ್ಕ 240 ರೂ., ಗ್ರಂಥಾಲಯ ಶುಲ್ಕ 100 ರೂ., ವಾರ್ಷಿಕ ಪ್ರಯೋಗಾಲಯ ಶುಲ್ಕ 10 ರೂ., ದೆಹಲಿ ವಿಶ್ವವಿದ್ಯಾಲಯವು ನಿಗದಿಪಡಿಸಿದ ವಿಶ್ವವಿದ್ಯಾಲಯ ಶುಲ್ಕ 300 ರೂ., ಭದ್ರತಾ ಶುಲ್ಕ 2000 ರೂ., ಇದನ್ನು ಕೋರ್ಸ್ ಮುಗಿದ ನಂತರ ಮರುಪಾವತಿಸಲಾಗುತ್ತದೆ. ವೈದ್ಯಕೀಯ ಪರೀಕ್ಷಾ ಶುಲ್ಕ 25 ರೂ.
ಇದನ್ನೂ ಓದಿ: ಏರ್ ಟ್ರಾಫಿಕ್ ಕಂಟ್ರೋಲರ್ ಕೆಲಸ ಪಡೆಯುವುದು ಹೇಗೆ? ಅರ್ಹತೆ ಮತ್ತು ಸಂಬಳದ ಮಾಹಿತಿ ಇಲ್ಲಿದೆ
1958 ರಲ್ಲಿ ಸ್ಥಾಪನೆಯಾದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು:
ಈ ವೈದ್ಯಕೀಯ ಕಾಲೇಜನ್ನು 1958 ರಲ್ಲಿ ಸ್ಥಾಪಿಸಲಾಯಿತು. ಇದನ್ನು ದೆಹಲಿ ಸರ್ಕಾರ ಸ್ಥಾಪಿಸಿತು. ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ದೆಹಲಿ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ. ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




