SSC GD Constable Vacancy 2022: ಸ್ಟಾಫ್ ಸೆಲೆಕ್ಷನ್ ಕಮಿಷನ್ನ ಕಾನ್ಸ್ಟೇಬಲ್ ಜಿಡಿ 2022 ರ ಪರಿಷ್ಕೃತ ಖಾಲಿ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ 20,000 ಕ್ಕೂ ಹೆಚ್ಚು ಹೊಸ ಹುದ್ದೆಗಳನ್ನು ನೇಮಕಾತಿಗೆ ಸೇರಿಸಲಾಗಿದೆ. ಎಸ್ಎಸ್ಸಿ ಬಿಡುಗಡೆ ಮಾಡಿರುವ ಹೊಸ ಹುದ್ದೆಯ ಪಟ್ಟಿಯ ಪ್ರಕಾರ ಒಟ್ಟು 45,284 ಹುದ್ದೆಗಳನ್ನು ಈ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ಈ 45284 ಹುದ್ದೆಗಳಲ್ಲಿ 40,274 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ, 4835 ಹುದ್ದೆಗಳು ಮಹಿಳೆಯರಿಗೆ ಮತ್ತು 175 ಹುದ್ದೆಗಳು ಎನ್ಸಿಬಿಗೆ ಅಭ್ಯರ್ಥಿಗಳಿಗೆ ಮೀಸರಿಸಲಾಗಿದೆ.
ಹುದ್ದೆಗಳ ವಿವರಗಳು:
ಅರ್ಜಿ ಪ್ರಕ್ರಿಯೆ:
ಈ ಹಿಂದೆ 24,369 ಹುದ್ದೆಗಳನ್ನು ಎಸ್ಎಸ್ಸಿ ಜಿಡಿ ಕಾನ್ಸ್ಟೇಬಲ್ ನೇಮಕಾತಿ ಮೂಲಕ ಭರ್ತಿ ಮಾಡಬೇಕಿತ್ತು. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಹಾಗೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 30 ನವೆಂಬರ್ 2022.
ಇದನ್ನೂ ಓದಿ: Indian Navy SSR Recruitment 2022: ನೌಕಾಪಡೆಯ ಅಗ್ನಿವೀರರ ನೇಮಕಾತಿ: PUC ಪಾಸಾದವರಿಗೆ ಉದ್ಯೋಗಾವಕಾಶ
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18-23 ವರ್ಷಗಳ ನಡುವೆ ಇರಬೇಕು.
ಇದನ್ನೂ ಓದಿ: Indian Railway Recruitment 2022: ರೈಲ್ವೆ ನೇಮಕಾತಿ: 596 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ನ ಅಧಿಕೃತ ವೆಬ್ಸೈಟ್ ssc.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 2:34 pm, Mon, 28 November 22