SBI PO Recruitment 2021: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 2056 ಪ್ರೊಬೆಷನರಿ ಹುದ್ದೆಗೆ ಅರ್ಜಿ ಆಹ್ವಾನ

| Updated By: Srinivas Mata

Updated on: Oct 05, 2021 | 1:22 PM

ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ 2056 ಪ್ರೊಬೆಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 5ನೇ ತಾರೀಕಿಂದ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಸಂಪೂರ್ಣ ವಿವರ ಇಲ್ಲಿದೆ.

SBI PO Recruitment 2021: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 2056 ಪ್ರೊಬೆಷನರಿ ಹುದ್ದೆಗೆ ಅರ್ಜಿ ಆಹ್ವಾನ
ಪ್ರಾತಿನಿಧಿಕ ಚಿತ್ರ
Follow us on

ಪ್ರೊಬೆಷನರಿ ಅಧಿಕಾರಿಗಳ (POs) ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಭಾರತದ ಅತಿದೊಡ್ಡ ಬ್ಯಾಂಕ್​ ಆದ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ 2056 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯು ಮೂರು ಹಂತದಲ್ಲಿ ನಡೆಯುತ್ತದೆ. ಅರ್ಹ ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಬ್ಯಾಂಕ್​ನ ವೆಬ್​ಸೈಟ್​ಗೆ ಭೇಟಿ ನೀಡಬೇಕು ಮತ್ತು ನೇಮಕಾತಿ ಜಾಹೀರಾತನ್ನು ಒಮ್ಮೆ ಸಂಪೂರ್ಣ ಪರಿಶೀಲಿಸಬೇಕು. ಆ ನಿರ್ದಿಷ್ಟ ದಿನಾಂಕಕ್ಕೆ ಎಲ್ಲ ಅರ್ಹತಾ ಮಾನದಂಡಗಳನ್ನು ಪೂರ್ತಿ ಮಾಡುತ್ತಾರೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದಕ್ಕೆ ಇದು ಅತ್ಯಗತ್ಯ.

ಅಪ್ಲೈ ಮಾಡುವುದು ಹೇಗೆ?
– ಅಕ್ಟೋಬರ್​ 5ನೇ ತಾರೀಕಿನಿಂದ 25ನೇ ತಾರೀಕಿನವರೆಗೆ ಆನ್​ಲೈನ್​ನಲ್ಲಿ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯ. ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸ್ವೀಕರಿಸುವುದಿಲ್ಲ.
– ಬ್ಯಾಂಕ್​ನ “Career” ವೆಬ್​ಸೈಟ್​ನ ಮೂಲಕವಾಗಿ – https://bank.sbi/careers ಅಥವಾ https://www.sbi.co.in/careers – ನೋಂದಣಿ ಮಾಡಿಕೊಳ್ಳಬೇಕು.
– ನೋಂದಣಿಯ ನಂತರ ಅಗತ್ಯ ಪ್ರಮಾಣದ ಅರ್ಜಿ ಶುಲ್ಕವನ್ನು ಆನ್​ಲೈನ್ ಮೂಲಕವಾಗಿ ಡೆಬಿಟ್​ ಕಾರ್ಡ್/ಕ್ರೆಡಿಟ್ ಕಾರ್ಡ್​/ಇಂಟರ್​ನೆಟ್​ ಬ್ಯಾಂಕಿಂಗ್ ಮೂಲಕವಾಗಿ ಪಾವತಿಸಬಹುದು.

ಅಗತ್ಯ ಶೈಕ್ಷಣಿಕ ಅರ್ಹತೆ
– ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪದವಿಗೆ ಸಮಾನವಾದ ಶಿಕ್ಷಣ ಪಡೆದಿರಬೇಕು.
– ಪದವಿ ಅಂತಿಮ ವರ್ಷದ/ಸೆಮಿಸ್ಟರ್​ನಲ್ಲಿ ಇರುವವರು ಸಹ ಅರ್ಜಿ ಸಲ್ಲಿಸಬಹುದು. ಆದರೆ ಷರತ್ತುಗಳು ಅನ್ವಯಿಸುತ್ತದೆ. ಸಂದರ್ಶನಕ್ಕೆ ಕರೆಯುವ ಸಮಯದಲ್ಲಿ ಪದವಿ ಪರೀಕ್ಷೆ ಪೂರ್ಣಗೊಳಿಸಿದ ಪುರಾವೆಯನ್ನು ಡಿಸೆಂಬರ್ 31, 2021ರಂದು ಅಥವಾ ಅದಕ್ಕೂ ಮುನ್ನ ಸಲ್ಲಿಕೆ ಮಾಡಬೇಕು.
– ಇಂಟಿಗ್ರೇಟೆಡ್​ ಡ್ಯುಯಲ್ ಡಿಗ್ರಿ (IDD) ಪದವಿ ಪ್ರಮಾಣಪತ್ರ ಇರುವವರು ಐಡಿಡಿ ಉತ್ತೀರ್ಣ ದಿನಾಂಕವು ಡಿಸೆಂಬರ್​ 31, 2021ರಂದು ಅಥವಾ ಅದಕ್ಕಿಂತ ಮುಂಚೆ ಸಲ್ಲಿಕೆ ಮಾಡಬೇಕು.
– ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಶೈಕ್ಷಣಿಕ ಅರ್ಹತೆ ಇರುವವರು ಸಹ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು
ಆನ್​ಲೈನ್ ನೋಂದಣಿ: ಅಕ್ಟೋಬರ್ 5ರಿಂದ ಅಕ್ಟೋಬರ್ 25
ಹಂತ 1: ಆನ್​ಲೈನ್​ ಪ್ರಾಥಮಿಕ ಪರೀಕ್ಷೆ- ನವೆಂಬರ್/ಡಿಸೆಂಬರ್ 2021
ಹಂತ 2: ಆನ್​ಲೈನ್ ಮುಖ್ಯ ಪರೀಕ್ಷೆ- ಡಿಸೆಂಬರ್ 2021
ಹಂತ 3: ಸಂದರ್ಶನ (ಅಥವಾ ಸಂದರ್ಶನ ಮತ್ತು ಗುಂಪು ಪರೀಕ್ಷೆ)- 2022ರ ಫೆಬ್ರವರಿ ಎರಡು/ಮೂರನೇ ವಾರ

ವಯೋಮಿತಿ
– 1.4.2021ಕ್ಕೆ ಅನ್ವಯ ಆಗುವಂತೆ, 21 ವರ್ಷಕ್ಕೆ ಕಡಿಮೆ ಇಲ್ಲದಂತೆ ಮತ್ತು ಅದೇ ದಿನಕ್ಕೆ 30 ವರ್ಷ ಮೇಲಿರಬಾರದು. ಅಭ್ಯರ್ಥಿಗಳು 2.04.1991ರಿಂದ 1.04.200ನೇ ಇಸವಿ ಮಧ್ಯೆ ಹುಟ್ಟಿರಬೇಕು.
– ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ವಯೋಮಿತಿಯಲ್ಲಿ 5 ವರ್ಷದ ವಿನಾಯಿತಿ ಇದೆ. ಇತರ ಹಿಂದುಳಿದ ವರ್ಗ (ಕೆನೆಪದರ ಹೊರತಾಗಿ) 3 ವರ್ಷ, (PWD)- PWD (SC/ST) ದಿವ್ಯಾಂಗರಿಗೆ 15 ವರ್ಷಗಳ ವಿನಾಯಿತಿ ಇದೆ.

ಇದನ್ನೂ ಓದಿ: SBI Special FD: ಎಸ್​ಬಿಐ ವಿಶೇಷ ಎಫ್​ಡಿ ಯೋಜನೆ ಮಾರ್ಚ್ 31, 2022ರ ತನಕ ವಿಸ್ತರಣೆ

SBI Card Dumdar Dus Offer: ಎಸ್​ಬಿಐ ಕಾರ್ಡ್​ನಿಂದ ಆನ್​ಲೈನ್​ ಶಾಪಿಂಗ್​ಗೆ ಆಫರ್​ ಘೋಷಣೆ; ಅಕ್ಟೋಬರ್ 3ರಿಂದ ಶುರು

Published On - 1:20 pm, Tue, 5 October 21