ಭೂ ಸ್ವಾಧೀನ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Aug 06, 2023 | 2:26 PM

SWR Recruitment 2023: ಸೌತ್ ವೆಸ್ಟರ್ನ್ ರೈಲ್ವೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 65 ವರ್ಷಗಳನ್ನು ದಾಟಿರಬಾರದು.

ಭೂ ಸ್ವಾಧೀನ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs 2023
Follow us on

SWR Recruitment 2023: ಸೌತ್ ವೆಸ್ಟರ್ನ್ ರೈಲ್ವೆಯ ಭೂ ಸ್ವಾಧೀನ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 6 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 21 ರೊಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಸಂಸ್ಥೆಯ ಹೆಸರು : ಸೌತ್ ವೆಸ್ಟರ್ನ್ ರೈಲ್ವೆ ( SWR )
  • ಹುದ್ದೆಗಳ ಸಂಖ್ಯೆ: 06
  • ಉದ್ಯೋಗ ಸ್ಥಳ: ಕರ್ನಾಟಕ
  • ಹುದ್ದೆಯ ಹೆಸರು: ಭೂ ಸ್ವಾಧೀನ ಸಹಾಯಕ

ವಯೋಮಿತಿ:

ಸೌತ್ ವೆಸ್ಟರ್ನ್ ರೈಲ್ವೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-Aug-2023 ರಂತೆ 65 ವರ್ಷಗಳನ್ನು ದಾಟಿರಬಾರದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಸ್ಕ್ರೀನಿಂಗ್, ಶಾರ್ಟ್‌ಲಿಸ್ಟಿಂಗ್ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

 ಮಾಸಿಕ ವೇತನ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ.27650 ರಿಂದ ರೂ. 58250/- ಮಾಸಿಕ ವೇತನ ಸಿಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯನ್ನು ಹಾಗೂ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಇ-ಮೇಲ್ ಐಡಿ, recruitment.cnswr@gmail.com ಗೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:

ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 21-ಆಗಸ್ಟ್-2023

ಅರ್ಜಿ ನಮೂನೆ ಸಿಗುವುದು ಎಲ್ಲಿ?

ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: IBPS Recruitment 2023: ಐಬಿಪಿಎಸ್​ ನೇಮಕಾತಿ: 4451 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್‌ಸೈಟ್: swr.indianrailways.gov.in