Success Story: ಐಪಿಎಸ್ ಅಧಿಕಾರಿಯಾಗಲು 15 ಸರ್ಕಾರಿ ಉದ್ಯೋಗ ತೊರೆದ ತೃಪ್ತಿ ಭಟ್; ಯಶಸ್ಸಿನ ಕಥೆ ಇಲ್ಲಿದೆ
ತೃಪ್ತಿ ಭಟ್ ಐಪಿಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಿಕೊಳ್ಳಲು ಬರೋಬ್ಬರಿ 15 ಸರ್ಕಾರಿ ಉದ್ಯೋಗಗಳನ್ನು ತ್ಯಜಿಸಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ತೃಪ್ತಿ ಐಎಎಸ್ ಅಧಿಕಾರಿಯಾಗಬಹುದಿತ್ತು, ಆದರೆ ಅವರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಆಯ್ಕೆ ಮಾಡಿಕೊಂಡರು. ಇಂದು, ಉತ್ತರಾಖಂಡ ಗೃಹ ಮತ್ತು ಕಾರಾಗೃಹಗಳ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ದೃಢ ನಿರ್ಧಾರ, ಕಠಿಣ ಪರಿಶ್ರಮ ಮತ್ತು ಸ್ಪಷ್ಟ ಗುರಿ ಯಶಸ್ಸಿನ ಮಂತ್ರ ಎಂಬುದನ್ನು ತೃಪ್ತಿ ಸಾಬೀತುಪಡಿಸಿದ್ದಾರೆ.

ಐಪಿಎಸ್ ಅಧಿಕಾರಿಯಾಗಲೇಬೇಕು ಎಂಬ ಕಾರಣಕ್ಕೆ ಬರೋಬ್ಬರಿ 15 ಸರ್ಕಾರಿ ಉದ್ಯೋಗಗಳನ್ನು ತೊರೆದ ತೃಪ್ತಿ ಭಟ್ ಸದ್ಯ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಸ್ಪಷ್ಟ ಗುರಿ ಮತ್ತು ಉದ್ದೇಶ ಬಲವಾಗಿದ್ದರೆ, ಯಾವುದೇ ನಿರ್ಧಾರ ತಪ್ಪಲ್ಲ ಎಂದು ತೃಪ್ತಿ ಸಾಬೀತುಪಡಿಸಿದ್ದಾರೆ. ಈ ಮೂಲಕ ತನ್ನ ಕಠಿಣ ಪರಿಶ್ರಮದ ಮೂಲಕ ಐಪಿಎಸ್ ಅಧಿಕಾರಿಯಾಗಲು ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಎಂಜಿನಿಯರಿಂಗ್ ಅಧ್ಯಯನದ ನಂತರ, ಅವರಿಗೆ 15 ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗದ ಆಫರ್ ಬಂದಿದ್ದವು. ಆದರೆ ಎಲ್ಲವನ್ನೂ ಬಿಟ್ಟು ಯುಪಿಎಸ್‌ಸಿಯ ಕಠಿಣ ಮಾರ್ಗವನ್ನು ಆರಿಸಿಕೊಂಡರು. ಇಂದು, ಐಪಿಎಸ್ ಅಧಿಕಾರಿ ಮಾತ್ರವಲ್ಲ, ಈಗ ಉತ್ತರಾಖಂಡ ಸರ್ಕಾರವು ಐಪಿಎಸ್ ತೃಪ್ತ ಭಟ್ ಅವರಿಗೆ ಹೊಸ ಜವಾಬ್ದಾರಿಯನ್ನು ಅಂದರೆ ಗೃಹ ಮತ್ತು ಕಾರಾಗೃಹಗಳ ಹೆಚ್ಚುವರಿ ಕಾರ್ಯದರ್ಶಿಯ ಜವಾಬ್ದಾರಿಯನ್ನು ನೀಡಲಾಗಿದೆ.
ಡಾ. ಕಲಾಂ ಅವರಿಂದ ಸ್ಫೂರ್ತಿ:
ತೃಪ್ತಿ ಭಟ್ ಒಂಬತ್ತನೇ ತರಗತಿಯಲ್ಲಿದ್ದಾಗ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡುವ ಅವಕಾಶ ಅವರಿಗೆ ಸಿಕ್ಕಿತು. ಈ ಭೇಟಿಯ ಸಮಯದಲ್ಲಿ, ಡಾ. ಕಲಾಂ ದೇಶಭಕ್ತಿ ಮತ್ತು ಕಠಿಣ ಪರಿಶ್ರಮದ ಸಂದೇಶವನ್ನು ಒಳಗೊಂಡ ಕೈಬರಹದ ಪತ್ರವನ್ನು ನೀಡಿದ್ದರು. ಈ ಪತ್ರವು ತನ್ನ ಜೀವನದಲ್ಲಿ ಒಂದು ಮಹತ್ವದ ತಿರುವು ಎಂದು ತೃಪ್ತಿ ಹೇಳಿಕೊಂಡಿದ್ದಾರೆ.
ಎಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ತೃಪ್ತಿಗೆ NTPC ಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಸಿಕ್ಕಿತು. ಇಸ್ರೋ ಸೇರಿದಂತೆ ಸುಮಾರು 16 ಸರ್ಕಾರಿ ಸಂಸ್ಥೆಗಳಿಂದ ಅವರಿಗೆ ಉದ್ಯೋಗದ ಆಫರ್‌ಗಳು ಬಂದವು. ಇದು ಸುರಕ್ಷಿತ ಮತ್ತು ಗೌರವಾನ್ವಿತ ವೃತ್ತಿಯಾಗಿದ್ದರೂ ಕೂಡ ತೃಪ್ತಿಯ ಕನಸು ದೊಡ್ಡದಾಗಿತ್ತು. ದೇಶಕ್ಕಾಗಿ ನೇರವಾಗಿ ಕೆಲಸ ಮಾಡಲು ನಿರ್ಧರಿಸಿದರು. ಈ ಆಲೋಚನೆಯೊಂದಿಗೆ, ತನ್ನ ಎಲ್ಲಾ ಉದ್ಯೋಗಗಳನ್ನು ತೊರೆದು UPSC ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು.
ಮೊದಲ ಪ್ರಯತ್ನದಲ್ಲೇ ಯಶಸ್ಸು ಮತ್ತು ಬಹುಮುಖ ಮನ್ನಣೆ:
2013 ರಲ್ಲಿ, ತೃಪ್ತಿ ಭಟ್ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 165 ನೇ ರ್ಯಾಂಕ್ ಗಳಿಸಿದರು. ಈ ರ್ಯಾಂಕ್‌ನೊಂದಿಗೆ ಅವರು ಐಎಎಸ್ ಅಧಿಕಾರಿಯಾಗಬಹುದಿತ್ತು, ಆದರೆ ಅವರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಆಯ್ಕೆ ಮಾಡಿಕೊಂಡರು.
ಇದನ್ನೂ ಓದಿ: 25,487 ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ; 10 ನೇ ತರಗತಿ ಪಾಸಾಗಿದ್ರೆ ಸಾಕು
ಇಂದು, ತೃಪ್ತಿ ಭಟ್ ಯಶಸ್ವಿ ಐಪಿಎಸ್ ಅಧಿಕಾರಿಯಾಗಿದ್ದು, ಜೈಲು ಆಡಳಿತದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ವಿಪತ್ತು ನಿರ್ವಹಣೆ, ಭದ್ರತೆ ಮತ್ತು ಸೂಕ್ಷ್ಮ ಸಂದರ್ಭಗಳಲ್ಲಿ ಅವರ ಕೆಲಸವನ್ನು ಹೆಚ್ಚು ಪ್ರಶಂಸಿಸಲಾಗುತ್ತದೆ. ಆಡಳಿತಾತ್ಮಕ ಕರ್ತವ್ಯಗಳ ಜೊತೆಗೆ, ತೃಪ್ತಿ ಕ್ರೀಡೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಮ್ಯಾರಥಾನ್‌ಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ, ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ ಮತ್ತು ಟೇಕ್ವಾಂಡೋ ಮತ್ತು ಕರಾಟೆಯಲ್ಲಿಯೂ ತರಬೇತಿ ಪಡೆದಿದ್ದಾರೆ. ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸರಿಯಾದ ಗುರಿಯಿದ್ದರೆ ಯಶಸ್ಸ ಖಂಡಿತಾ ಸಾಧ್ಯ ಎಂದು ತೃಪ್ತಿ ಭಟ್ ಹೇಳುತ್ತಾರೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




