UAS Dharwad Recruitment 2025: ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ನೇರ ಸಂದರ್ಶನ

ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಧಾರವಾಡ (ಯುಎಎಸ್ ಧಾರವಾಡ) ಜೂನಿಯರ್ ರಿಸರ್ಚ್ ಫೆಲೋ (ಜೆಆರ್ಎಫ್) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಜನವರಿ 31, 2025 ರಂದು ಬೆಳಿಗ್ಗೆ 11 ಗಂಟೆಗೆ ವಾಕ್-ಇನ್ ಇಂಟರ್ವ್ಯೂ ನಡೆಯಲಿದೆ. M.Sc ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ವೇತನ ರೂ. 37,000 ಆಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

UAS Dharwad Recruitment 2025: ಜೂನಿಯರ್ ರಿಸರ್ಚ್ ಫೆಲೋ  ಹುದ್ದೆಗೆ ನೇರ ಸಂದರ್ಶನ
Uas Dharwad Jrf Recruitment 2025

Updated on: Jan 19, 2025 | 3:09 PM

ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಧಾರವಾಡವು ಅಧಿಕೃತ ಅಧಿಸೂಚನೆಯ ಮೂಲಕ ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 31 ಬೆಳಿಗ್ಗೆ 11:00 ಗಂಟೆಗೆ ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

ಯುಎಎಸ್ ಧಾರವಾಡ ಹುದ್ದೆಯ ಅಧಿಸೂಚನೆ:

  • ವಿಶ್ವವಿದ್ಯಾಲಯದ ಹೆಸರು : ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಧಾರವಾಡ (ಯುಎಎಸ್ ಧಾರವಾಡ)
  • ಪೋಸ್ಟ್‌ಗಳ ಸಂಖ್ಯೆ: 01
  • ಉದ್ಯೋಗ ಸ್ಥಳ: ಧಾರವಾಡ – ಕರ್ನಾಟಕ
  • ಪೋಸ್ಟ್ ಹೆಸರು: ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್)
  • ಸಂಬಳ: ರೂ.37000/- ಪ್ರತಿ ತಿಂಗಳು

ಯುಎಎಸ್ ಧಾರವಾಡ ನೇಮಕಾತಿ ಅರ್ಹತಾ ವಿವರಗಳು:

ಶೈಕ್ಷಣಿಕ ಅರ್ಹತೆ:

ಯುಎಎಸ್ ಧಾರವಾಡ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ M.Sc ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: 10th, PUC ಪಾಸಾದವರಿಗೆ ಗುಡ್ ನ್ಯೂಸ್: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯುಎಎಸ್ ಧಾರವಾಡ ನೇಮಕಾತಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

ಸ್ಥಳ: ಡೀನ್, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಜನವರಿ 31, ಬೆಳಿಗ್ಗೆ 11:00 ಗಂಟೆ

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ