Jobs 2023
UAS Dharwad Recruitment 2023: ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಕಮ್ಯುನಿಟಿ ಹೆಲ್ಪರ್ಸ್ ಹಾಗೂ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ವಿಶ್ವವಿದ್ಯಾಲಯದ ಹೆಸರು : ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಧಾರವಾಡ
- ಹುದ್ದೆಗಳ ಸಂಖ್ಯೆ: 21
- ಉದ್ಯೋಗ ಸ್ಥಳ: ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ
- ಹುದ್ದೆಗಳ ಹೆಸರು: ಕಮ್ಯುನಿಟಿ ಹೆಲ್ಪರ್ಸ್ ಹಾಗೂ ಪ್ರಾಜೆಕ್ಟ್ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ:
- ಸಲಹೆಗಾರ- 1 ಹುದ್ದೆ
- ಹಿರಿಯ ಸಂಶೋಧನಾ ಫೆಲೋ (SRF)- 1 ಹುದ್ದೆ
- ಯೋಜನಾ ಸಹಾಯಕ-LRI- 4 ಹುದ್ದೆಗಳು
- ಯೋಜನೆಯ ಸಹಾಯಕ-ಜಲವಿಜ್ಞಾನ- 2 ಹುದ್ದೆಗಳು
- ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು- 1 ಹುದ್ದೆ
- ಸಮುದಾಯ ಸಹಾಯಕರು (ಜಲ ಮಿತ್ರ)- 12 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
- ಸಲಹೆಗಾರ : RS & GS ನಲ್ಲಿ M.Sc, M.Tech, ಜಿಯೋ-ಇನ್ಫರ್ಮ್ಯಾಟಿಕ್ಸ್‌ನಲ್ಲಿ Ph.D ಮಾಡಿರಬೇಕು.
- ಹಿರಿಯ ಸಂಶೋಧನಾ ಫೆಲೋ (SRF): ಕೃಷಿ, ಮಣ್ಣು ವಿಜ್ಞಾನ, ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಿರಬೇಕು.
- ಪ್ರಾಜೆಕ್ಟ್ ಅಸಿಸ್ಟೆಂಟ್-ಎಲ್ಆರ್ಐ : ಡಿಪ್ಲೊಮಾ, ಪದವಿ, ಕೃಷಿಯಲ್ಲಿ ಬಿಎಸ್ಸಿ ಪೂರ್ಣಗೊಳಿಸಿರಬೇಕು.
- ಪ್ರಾಜೆಕ್ಟ್ ಅಸಿಸ್ಟೆಂಟ್-ಹೈಡ್ರಾಲಜಿ : ಕೃಷಿಯಲ್ಲಿ ಬಿ.ಎಸ್ಸಿ, ಕೃಷಿ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿರಬೇಕು.
- ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು, ಸಮುದಾಯ ಸಹಾಯಕರು (ಜಲ ಮಿತ್ರ): 10ನೇ ತರಗತಿ ಪಾಸ್ ಆಗಿರಬೇಕು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ:
- ಸಲಹೆಗಾರ: ರೂ. 70,000/-
- ಹಿರಿಯ ಸಂಶೋಧನಾ ಫೆಲೋ (SRF): ರೂ. 31,000/-
- ಯೋಜನಾ ಸಹಾಯಕ-LRI: ರೂ. 21,000 ರಿಂದ ರೂ. 25,000/-
- ಯೋಜನೆಯ ಸಹಾಯಕ-ಜಲವಿಜ್ಞಾನ: ರೂ. 25,000/-
- ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು: ರೂ. 13,000/-
- ಸಮುದಾಯ ಸಹಾಯಕರು (ಜಲ ಮಿತ್ರ): ರೂ. 5,000/-
ಪ್ರಮುಖ ದಿನಾಂಕಗಳು:
ನೇರ ಸಂದರ್ಶನದ ದಿನಾಂಕ: 18-07-2023 ( ಬೆಳಿಗ್ಗೆ 10:30 AM)
ಇದನ್ನೂ ಓದಿ: North Eastern Railway Recruitment 2023: ಈಶಾನ್ಯ ರೈಲ್ವೆ ನೇಮಕಾತಿ: 1104 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂದರ್ಶನದ ನಡೆಯುವ ಸ್ಥಳ:
Chamber of Office of Assoc. Director of Research (HQ), Krishinagar, Dharwad
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್: uasd.edu