UCO Bank LBO Recruitment 2025: 250 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ನಾಳೆ ಮುಕ್ತಾಯ
ಯುಕೋ ಬ್ಯಾಂಕ್ 250 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 5. ಯಾವುದೇ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ವಯಸ್ಸು 20-30 ವರ್ಷ. ಅರ್ಜಿ ಶುಲ್ಕ SC/ST/PwBD ಗೆ 175 ರೂ. ಮತ್ತು ಇತರರಿಗೆ 850 ರೂ. ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಯುಕೋ ಬ್ಯಾಂಕ್ 250 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಜನವರಿ 16ರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಾಳೆ ಅಂದರೆ ಫೆಬ್ರವರಿ 5 ರಂದು ನಿಗದಿಪಡಿಸಲಾಗಿದೆ. ಇನ್ನೂ ಅರ್ಜಿ ನಮೂನೆಗಳನ್ನು ಸಲ್ಲಿಸದ ಅರ್ಹ ಅಭ್ಯರ್ಥಿಗಳು ಯುಕೋ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ucobank.com ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ ಏನು?
ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಅಭ್ಯರ್ಥಿಗಳು ಹುದ್ದೆಗೆ ನೋಂದಾಯಿಸುವಾಗ ಮಾನ್ಯವಾದ ಅಂಕಪಟ್ಟಿ / ಪದವಿ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ನಮೂದಿಸಬೇಕು. ಇದಲ್ಲದೇ ಅಭ್ಯರ್ಥಿಯು 20 ವರ್ಷದಿಂದ 30 ವರ್ಷ ವಯಸ್ಸಿನವರಾಗಿರಬೇಕು.
ಇದಲ್ಲದೆ, ಅರ್ಜಿ ಸಲ್ಲಿಸುವಾಗ, ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಅರ್ಜಿ ಶುಲ್ಕ ಅಥವಾ ಮಾಹಿತಿ ಶುಲ್ಕಗಳು SC/ST/PwBD ಅಭ್ಯರ್ಥಿಗಳಿಗೆ 175 ರೂ. ಮತ್ತು ಇತರರಿಗೆ 850 ರೂ. ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಗೆ ಬ್ಯಾಂಕ್ ವಹಿವಾಟು ಶುಲ್ಕಗಳು/ ಮಾಹಿತಿ ಶುಲ್ಕಗಳನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ. ಒಮ್ಮೆ ಪಾವತಿಸಿದ ಶುಲ್ಕ/ ಮಾಹಿತಿ ಶುಲ್ಕಗಳನ್ನು ಯಾವುದೇ ಖಾತೆಯಲ್ಲಿ ಮರುಪಾವತಿಸಲಾಗುವುದಿಲ್ಲ ಅಥವಾ ಯಾವುದೇ ಇತರ ಪರೀಕ್ಷೆ ಅಥವಾ ಆಯ್ಕೆಗೆ ಅದನ್ನು ಕಾಯ್ದಿರಿಸಲಾಗುವುದಿಲ್ಲ.
ಇದನ್ನೂ ಓದಿ: ಬ್ಯಾಂಕ್‌ಗಳಿಂದ ಹಿಡಿದು ನ್ಯಾಯಾಲಯದವರೆಗೆ, ಫೆಬ್ರವರಿಯಲ್ಲಿ ಲಭ್ಯವಿರುವ ಸರ್ಕಾರಿ ಉದ್ಯೋಗಗಳ ಮಾಹಿತಿ ಇಲ್ಲಿದೆ
ಖಾಲಿ ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ:
- ಕರ್ನಾಟಕ: 35 ಹುದ್ದೆಗಳು
- ಗುಜರಾತ್: 57 ಹುದ್ದೆಗಳು
- ಮಹಾರಾಷ್ಟ್ರ: 70 ಹುದ್ದೆಗಳು
- ಅಸ್ಸಾಂ: 30 ಹುದ್ದೆಗಳು
- ತ್ರಿಪುರ: 13 ಹುದ್ದೆಗಳು
- ಸಿಕ್ಕಿಂ: 6 ಹುದ್ದೆಗಳು
- ನಾಗಾಲ್ಯಾಂಡ್: 5 ಹುದ್ದೆಗಳು
- ಮೇಘಾಲಯ: 4 ಹುದ್ದೆಗಳು
- ಕೇರಳ: 15 ಹುದ್ದೆಗಳು
- ತೆಲಂಗಾಣ ಮತ್ತು ಆಂಧ್ರಪ್ರದೇಶ: 10 ಹುದ್ದೆಗಳು
- ಜಮ್ಮು ಮತ್ತು ಕಾಶ್ಮೀರ: 5 ಹುದ್ದೆಗಳು
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ