
ಜ್ಯೂ.ಎನ್ಟಿಆರ್ (Jr.NTR) ಹಾಗೂ ಪ್ರಶಾಂತ್ ನೀಲ್ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಸಿನಿಮಾ ಬಗ್ಗೆ ಸುಳಿವು ಈ ಮೊದಲೇ ಸಿಕ್ಕಿತ್ತು. ಕಳೆದ ವರ್ಷ ಜನ್ಮದಿನದಂದು ಜ್ಯೂ.ಎನ್ಟಿಆರ್ಗೆ ವಿಶ್ ಮಾಡುವ ಮೂಲಕ ಪ್ರಶಾಂತ್ ನೀಲ್ (Prashanth Neel) ಈ ವಿಚಾರವನ್ನು ಖಚಿತಪಡಿಸಿದ್ದರು. ಇಂದು (ಮೇ 20) ಜ್ಯೂ.ಎನ್ಟಿಆರ್ ಜನ್ಮದಿನ. ಈ ವಿಶೇಷ ದಿನದಂದು ಈ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಫಸ್ಟ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾ ಬಗ್ಗೆ ಕುತೂಹಲ ಸೃಷ್ಟಿಸಲಾಗಿದೆ.
‘ಉಗ್ರಂ’ ಹಾಗೂ ‘ಕೆಜಿಎಫ್’ ಸರಣಿ ಮೂಲಕ ಗಮನ ಸೆಳೆದವರು ಪ್ರಶಾಂತ್ ನೀಲ್. ‘ಕೆಜಿಎಫ್ 2’ ಸಿನಿಮಾದಿಂದ ಪ್ರಶಾಂತ್ ನೀಲ್ ಬಗ್ಗೆ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ, ಅವರು ಸಲಾರ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ, 2023ರ ಏಪ್ರಿಲ್ ತಿಂಗಳಲ್ಲಿ ಜ್ಯೂ.ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಸೆಟ್ಟೇರಲಿದೆ. ಈ ಮಧ್ಯೆ ಅಚ್ಚರಿಯ ಮಾಹಿತಿ ಒಂದು ಹೊರ ಬಿದ್ದಿದೆ.
ಇದನ್ನೂ ಓದಿ: ಟಾಲಿವುಡ್ ನಟನಾದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಜ್ಯೂ. ಎನ್ಟಿಆರ್
ಇಂದು ರಿಲೀಸ್ ಆದ ಪೋಸ್ಟರ್ನಲ್ಲಿ ಜ್ಯೂ.ಎನ್ಟಿಆರ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಈ ಪೋಸ್ಟರ್ ಫೋಟೋಶೂಟ್ಗೆ ಪ್ರಶಾಂತ್ ನೀಲ್ ಬರೋಬ್ಬರಿ 31 ಕ್ಯಾಮೆರಾ ಬಳಕೆ ಮಾಡಿದ್ದಾರೆ ಎಂದು ವರದಿ ಆಗಿದೆ. ಈ ಪೋಸ್ಟರ್ ಶೂಟ್ಗೆ ಅಷ್ಟೊಂದು ಕ್ಯಾಮೆರಾ ಬಳಕೆ ಮಾಡಿದ್ದು ಏಕೆ ಎಂಬುದು ಸದ್ಯ ಫ್ಯಾನ್ಸ್ ಮನದಲ್ಲಿ ಇರುವ ಪ್ರಶ್ನೆ.
ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್’ ಹಾಗೂ ‘ಎನ್ಟಿಆರ್ ಆರ್ಟ್ಸ್’ ಒಟ್ಟಾಗಿ ಬಂಡವಾಳ ಹೂಡುತ್ತಿವೆ. ಚಿತ್ರದ ಟೈಟಲ್ ಇನ್ನೂ ಘೋಷಣೆ ಆಗಿಲ್ಲ. ತಾತ್ಕಾಲಿಕವಾಗಿ ‘ಎನ್ಟಿಆರ್ 31’ ಎಂದು ಕರೆಯಲಾಗುತ್ತಿದೆ.
ಇದನ್ನೂ ಓದಿ: ಜ್ಯೂ.ಎನ್ಟಿಆರ್ ಜನ್ಮದಿನ; ಈ ನಟನ ಬಗ್ಗೆ ನಿಮಗೆ ಗೊತ್ತಿರದ ಐದು ಅಪರೂಪದ ವಿಚಾರಗಳು
ಕೊರಟಾಲ ಶಿವ ಹಾಗೂ ಜ್ಯೂ.ಎನ್ಟಿಆರ್ ಕಾಂಬಿನೇಷನ್ನಲ್ಲಿ ಹೊಸ ಚಿತ್ರ ಅನೌನ್ಸ್ ಆಗಿದೆ. ‘ಎನ್ಟಿಆರ್30’ ಎಂದು ಈ ಚಿತ್ರವನ್ನು ಕರೆಯಲಾಗುತ್ತಿದ್ದು, ಶೀಘ್ರವೇ ಶೀರ್ಷಿಕೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಜ್ಯೂ.ಎನ್ಟಿಆರ್ ಜನ್ಮದಿನ ಹಿನ್ನೆಲೆಯಲ್ಲಿ ‘ಆರ್ಆರ್ಆರ್’ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.