ಮುಂದಕ್ಕೆ ಹೋಯ್ತು ‘ಎಕೆ 47’ ಸಿನಿಮಾ ರಿಲೀಸ್, ಕ್ಷಮೆ ಕೇಳಿದ ನಿರ್ಮಾಪಕ

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ‘ಆದರ್ಶ ಕುಟುಂಬಂ’ ಸಿನಿಮಾನಲ್ಲಿ ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಕನ್ನಡತಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾ ಇದೇ ಅಕ್ಟೋಬರ್ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಹಠಾತ್ತನೆ ರಿಲೀಸ್ ಮುಂದೂಡಲಾಗಿದೆ. ರಿಲೀಸ್ ಮುಂದೂಡಿಕೆಗೆ ಕಾರಣವನ್ನು ನಿರ್ಮಾಪಕ ವಿವರಿಸಿದ್ದು, ಕ್ಷಮೆ ಸಹ ಕೇಳಿದ್ದಾರೆ.

ಮುಂದಕ್ಕೆ ಹೋಯ್ತು ‘ಎಕೆ 47’ ಸಿನಿಮಾ ರಿಲೀಸ್, ಕ್ಷಮೆ ಕೇಳಿದ ನಿರ್ಮಾಪಕ
Adarsha Kutumbam

Updated on: Oct 06, 2026 | 12:28 PM

ಮುಖ್ಯಾಂಶಗಳು

  • ಆದರ್ಶ ಕುಟುಂಬಂ ಸಿನಿಮಾ ರಿಲೀಸ್ ಡೇಟ್
  • ‘ಎಕೆ 47’ ಸಿನಿಮಾ ರಿಲೀಸ್ ಮುಂದೂಡಿಕೆ
  • ಕ್ಷಮೆ ಕೇಳಿದ ನಿರ್ಮಾಪಕ ನಾಗವಂಶಿ

ಕನ್ನಡತಿ ಶ್ರೀನಿಧಿ ಶೆಟ್ಟಿ ಮತ್ತು ತೆಲುಗಿನ ಸ್ಟಾರ್ ನಟ ವೆಂಕಟೇಶ್ ಒಟ್ಟಿಗೆ ನಟಿಸಿದ್ದ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ‘ಎಕೆ 47’ (ಆದರ್ಶ ಕುಟುಂಬಂ ಹೌಸ್​​ ನಂಬರ್ 47) ಸಿಲೀಸ್ ಅಕ್ಟೋಬರ್ 9ಕ್ಕೆ ರಿಲೀಸ್ ಆಗಬೇಕಿತ್ತು. ಸಿನಿಮಾದ ಟ್ರೈಲರ್ ಸಹ ಕೆಲ ದಿನಗಳ ಹಿಂದೆ ರಿಲೀಸ್ ಆಗಿ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿತ್ತು. ಆದರೆ ಇದೀಗ ಹಠಾತ್ತನೇ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಸಿನಿಮಾದ ನಿರ್ದೇಶಕ ನಾಗವಂಶಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ಜೊತೆಗೆ ಸಿನಿಮಾ ಪ್ರೇಮಿಗಳು ಮತ್ತು ಇತರೆ ನಿರ್ಮಾಪಕರುಗಳಿಗೆ ಕ್ಷಮೆಯನ್ನೂ ಸಹ ಕೋರಿದ್ದಾರೆ.

ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿರುವ ‘ಎಕೆ 47’ ಸಿನಿಮಾ ಅಕ್ಟೋಬರ್ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣ ಆಗದೇ ಇರುವ ಕಾರಣದಿಂದಾಗಿ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ನಾಗವಂಶಿ, ‘ಈಗ ನಡೆಯುತ್ತಿರುವ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನೋಡಿದರೆ ನಾವು ಶುಕ್ರವಾರ ಚಿತ್ರಮಂದಿರದಲ್ಲೇ ಜನರ ಜೊತೆಗೆ ಸಿನಿಮಾದ ಮೊದಲ ಕಾಪಿ ನೋಡುತ್ತೇವೆ ಅಷ್ಟು ಟೈಟ್ ಶೆಡ್ಯೂಲ್ ಇದೆ. ಇಷ್ಟೋಂದು ಒತ್ತಡದಲ್ಲಿ ಲಗು-ಬಗೆಯಲ್ಲಿ ಪೋಸ್ಟ್ ಪ್ರೊಡಕ್ಷನ್ ಮಾಡಿದರೆ ಸಿನಿಮಾದ ಮೇಲೆ ಅದು ಋಣಾತ್ಮಕ ಪ್ರಭಾವ ಬೀರಲಿದೆ, ಹಾಗಾಗಿ ನಾವು ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕುತ್ತಿದ್ದೇವೆ’ ಎಂದಿದ್ದಾರೆ.

ಬೇರೆ ನಿರ್ಮಾಪಕರಿಗೆ ಮತ್ತು ಸಿನಿಮಾ ಪ್ರೇಮಿಗಳ ಕ್ಷಮೆ ಕೇಳಿರುವ ನಾಗವಂಶಿ, ‘ನಾವು ಅಕ್ಟೋಬರ್ 09ರ ರಿಲೀಸ್ ಡೇಟ್ ಘೋಷಣೆ ಮಾಡಿದ ಕಾರಣಕ್ಕೆ ಕೆಲವರು ನಮಗಾಗಿ ತಮ್ಮ ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ ಹಾಕಿಕೊಂಡಿದ್ದರು. ಈಗ ನಾವು ರಿಲೀಸ್ ಮುಂದೂಡಿರುವುದರಿಂದ ಅವರಿಗೆ ಸಮಸ್ಯೆ ಆದಂತಾಗಿದೆ, ಹಾಗಾಗಿ ನಿರ್ಮಾಪಕರುಗಳಿಗೆ ನಾವು ಕ್ಷಮೆ ಕೇಳುತ್ತಿದ್ದೇವೆ’ ಎಂದಿದ್ದಾರೆ ನಾಗವಂಶಿ.

ಇದನ್ನೂ ಓದಿ:ಈ ವಿಷಯದಲ್ಲಿ ಯಶ್‌ಗಿಂತ ನಾನಿ ಬೆಸ್ಟ್; ನಟಿ ಶ್ರೀನಿಧಿ ಶೆಟ್ಟಿ ನೇರ ಮಾತು

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ‘ಆದರ್ಶ ಕುಟುಂಬಂ’ ಸಿನಿಮಾನಲ್ಲಿ ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಕನ್ನಡತಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಮಿಡ್ಲ್​​ ಕ್ಲಾಸ್ ಕುಟುಂಬ ಒಂದರ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಸಾಕಷ್ಟು ಹಾಸ್ಯದ ಜೊತೆಗೆ ಆಕ್ಷನ್ ಹಾಗೂ ಸೆಂಟಿಮೆಂಟ್ ಸಹ ಇದೆ. ತ್ರಿವಿಕ್ರಮ್ ಶ್ರೀನಿವಾಸ್ ಅವರು ಎರಡು ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ಹಾಗಾಗಿ ಸಿನಿಮಾ ಬಗ್ಗೆ ಕುತೂಹಲ ಇತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us