ನಟಿ ಅನುಪಮಾ ಗೌಡ ಅವರು ಹಿರಿತೆರೆ ಹಾಗೂ ಕಿರುತೆರೆ ಎರಡಕ್ಕೂ ಸಲ್ಲುತ್ತಾರೆ. ಅವರಿಗೆ ಎರಡೂ ಕ್ಷೇತ್ರದಲ್ಲಿ ಜನಪ್ರಿಯತೆ ಇದೆ. ಅವರು ಈಗ ‘ಗಿಚ್ಚಿ ಗಿಲಿಗಿಲಿ 3’ ವೇದಿಕೆ ಮೇಲೆ ಬೆಸ್ಟ್ ಫ್ರೆಂಡ್ನ ಪರಿಚಯಿಸಿದ್ದಾರೆ. ಅಷ್ಟೇ ಅಲ್ಲ ಆತನೇ ನನ್ನ ಪ್ರಪಂಚ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅನುಪಮಾ ಗೌಡ ಪರಿಚಯಿಸಿದ್ದು ಯಾರನ್ನು? ಆತನ ಪರಿಚಯ ಆಗಿದ್ದು ಹೇಗೆ ಎಂಬುದನ್ನು ಅನುಪಮಾ ಗೌಡ ವಿವರಿಸಿದ್ದಾರೆ.
ಏಪ್ರಿಲ್ 4 ಫ್ರೆಂಡ್ಶಿಪ್ ಡೇ. ಎಲ್ಲರೂ ತಮ್ಮ ಜೀವನಕ್ಕೆ ಆಸರೆ ಆದ, ಕಷ್ಟಗಳಿಗೆ ನೆರವಾದ ಗೆಳೆಯರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಅನುಪಮಾ ಗೌಡ ಕೂಡ ತಮ್ಮ ಬೆಸ್ಟ್ ಫ್ರೆಂಡ್ ಯಾರು ಎಂಬುದನ್ನು ಹೇಳಿದ್ದಾರೆ. ಅನುಪಮಾ ಗೌಡ ಬೆಸ್ಟ್ ಫ್ರೆಂಡ್ ಒಂದು ಪುಟಾಣಿ ಶ್ವಾನ. ಅವರ ತಂದೆ ಆಗತಾನೇ ನಿಧನ ಹೊಂದಿದ್ದರು. ಆಗ ಇವರ ಪ್ರಪಂಚಕ್ಕೆ ಶ್ವಾನದ ಎಂಟ್ರಿ ಆಗಿತ್ತು.
‘ಇವನೇ ನನ್ನ ಪ್ರಪಂಚ. ತಂದೆ ತೀರಿಕೊಂಡಾಗ ಮಗು ರೂಪದಲ್ಲಿ ಬರ್ತಾರೆ ಎಂಬ ಮಾತಿದೆ. ನನ್ನ ಜೀವನದಲ್ಲಿ ಇವನು ಬಂದಿದ್ದಾನೆ. ನಾನು ಈತನಿಗೆ ತಾಯಿ ಆಗಿದೀನಿ. ನನಗೆ ಈತನೇ ಎಲ್ಲವೂ’ ಎಂದು ಅನುಪಮಾ ಗೌಡ ಹೇಳಿಕೊಂಡಿದ್ದಾರೆ. ಇವರ ಬಾಂಧವ್ಯ ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ಅಡಲ್ಟ್ ಕಂಟೆಂಟ್ ಇಲ್ಲ’; ಅನುಪಮಾ ಪರಮೇಶ್ವರನ್ ನಟನೆಯ ಚಿತ್ರಕ್ಕೆ ಸಿಕ್ತು ಸ್ಪಷ್ಟನೆ
ಅನುಪಮಾ ಗೌಡ ಅವರು 2010ರ ಸಂದರ್ಭದಲ್ಲೇ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ‘ಬಿಗ್ ಬಾಸ್ ಕನ್ನಡ ಸೀಸನ್ 5’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಅನುಪಮಾ ಕಾಣಿಸಿಕೊಂಡರು. ಈಗ ಅವರು ಕಲರ್ಸ್ ಕನ್ನಡದ ‘ಗಿಚ್ಚಿ ಗಿಲಿಗಿಲಿ 3’ನೇ ಸೀಸನ್ಗೆ ಆ್ಯಂಕರ್ ಆಗಿದ್ದಾರೆ. ಈ ಮೂಲಕ ಎಲ್ಲರನ್ನೂ ಮನರಂಜಿಸುತ್ತಿದ್ದಾರೆ. ಹಿರಿತೆರೆ ಜೊತೆಗೂ ಅನುಪಮಾ ಗೌಡ ಅವರು ನಂಟು ಹೊಂದಿದ್ದಾರೆ. ‘ಲಂಕೇಶ್ ಪತ್ರಿಕೆ’, ‘ಆ ಕರಳಾ ರಾತ್ರಿ’, ‘ಪುಟ 109’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.