ಹೇಗಿದೆ ನೋಡಿ ಜಾನ್ವಿ ಕಪೂರ್​-ಜೂನಿಯರ್​ ಎನ್​ಟಿಆರ್​ ಜೋಡಿ; ಆ.5ಕ್ಕೆ ರೊಮ್ಯಾಂಟಿಕ್​ ಗಿಫ್ಟ್​

|

Updated on: Aug 02, 2024 | 10:11 PM

ಜಾನ್ವಿ ಕಪೂರ್​ ಅವರಿಗೆ ದಕ್ಷಿಣ ಭಾರತದಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಜೂನಿಯರ್​ ಎನ್​ಟಿಆರ್​ ಜೊತೆ ಅವರು ‘ದೇವರ: ಪಾರ್ಟ್​ 1’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಬ್ಬರು ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿರುವ ಹೊಸ ಹಾಡಿನ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್​ 5ರಂದು ಈ ಸಾಂಗ್​ ಬಿಡುಗಡೆ ಆಗಲಿದ್ದು, ಪೋಸ್ಟರ್​ ಮೂಲಕ ಕೌತುಕ ಮೂಡಿಸಲಾಗಿದೆ.

ಹೇಗಿದೆ ನೋಡಿ ಜಾನ್ವಿ ಕಪೂರ್​-ಜೂನಿಯರ್​ ಎನ್​ಟಿಆರ್​ ಜೋಡಿ; ಆ.5ಕ್ಕೆ ರೊಮ್ಯಾಂಟಿಕ್​ ಗಿಫ್ಟ್​
ಜೂನಿಯರ್​ ಎನ್​ಟಿಆರ್​, ಜಾನ್ವಿ ಕಪೂರ್​
Follow us on

ಟಾಲಿವುಡ್​ನ ಸ್ಟಾರ್​ ನಟ ಜೂನಿಯರ್​ ಎನ್​ಟಿಆರ್ ಅವರು ‘ದೇವರ: ಪಾರ್ಟ್​ 1’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಲು ಹಲವು ಕಾರಣಗಳು ಇವೆ. ನಟಿ ಜಾನ್ವಿ ಕಪೂರ್​ ಅವರು ಈ ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ​‘ದೇವರ: ಪಾರ್ಟ್​ 1’ ಚಿತ್ರ ಮೂಡಿಬರುತ್ತಿದೆ. ಹಾಡುಗಳ ಮೂಲಕ ಸಿನಿಮಾದ ಪ್ರಚಾರ ಕಾರ್ಯ ಶುರು ಮಾಡಲಾಗಿದೆ. ಆಗಸ್ಟ್​ 5ರಂದು ಈ ಸಿನಿಮಾದಿಂದ ಎರಡನೇ ಹಾಡು ರಿಲೀಸ್​ ಆಗಲಿದೆ.

‘ದೇವರ: ಪಾರ್ಟ್​ 1’ ಸಿನಿಮಾದ ಎರಡನೇ ಹಾಡಿನಲ್ಲಿ ಜೂನಿಯರ್ ಎನ್​ಟಿಆರ್​ ಮತ್ತು ಜಾನ್ವಿ ಕಪೂರ್​ ಅವರು ರೊಮ್ಯಾಂಟಿಕ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಝಲಕ್​ ತೋರಿಸಲು ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅವರಿಬ್ಬರ ಜೋಡಿಯನ್ನು ನೋಡಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಆಗಿದೆ. ಇದು ಆ್ಯಕ್ಷನ್​ ಸಿನಿಮಾ ಆಗಿದ್ದರೂ ಕೂಡ ಜಾನ್ವಿ ಕಪೂರ್​ ಜೊತೆ ಜೂನಿಯರ್​ ಎನ್​ಟಿಆರ್​ ಅವರ ರೊಮ್ಯಾಂಟಿಕ್​ ಕೆಮಿಸ್ಟ್ರಿ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ‘ಈಗ ಅವರು ಹಿಂಬದಿಯ ಫೋಟೋ ತೆಗೆಯಲ್ಲ’: ಜಾನ್ವಿ ಕಪೂರ್​ ನೇರಮಾತು

ಅನಿರುದ್ಧ್ ರವಿಚಂದರ್​ ಅವರು ‘ದೇವರ: ಪಾರ್ಟ್​ 1’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗಿನ ಜೊತೆ ಕನ್ನಡ, ಹಿಂದಿ, ತಮಿಳು ಮುಂತಾದ ಭಾಷೆಯಲ್ಲಿ ಈ ಚಿತ್ರ ರಿಲೀಸ್​ ಆಗಲಿದೆ. ಎರಡು ಪಾರ್ಟ್​ನಲ್ಲಿ ಕಥೆ ಹೇಳಲು ನಿರ್ದೇಶಕ ಕೊರಟಾಲ ಶಿವ ಪ್ಲ್ಯಾನ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್​, ಜಾನ್ವಿ ಕಪೂರ್​ ಜೊತೆ ಪ್ರಕಾಶ್​ ರಾಜ್​, ಬಾಬಿ ಡಿಯೋಲ್​, ಸೈಫ್​ ಅಲಿ ಖಾನ್​ ಮುಂತಾದವರು ನಟಿಸುತ್ತಿದ್ದಾರೆ.

ಆಗಸ್ಟ್​ 5ರಂದು ಬಿಡುಗಡೆ ಆಗಲಿರುವ ಹೊಸ ಹಾಡಿಗೆ ಬಾಲಿವುಡ್​ನ ಬಾಸ್ಕೋ ಮಾರ್ಟಿಸ್​ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಪಠಾಣ್​’, ‘ವಾರ್​’, ‘ಫೈಟರ್​’ ಮುಂತಾದ ಸಿನಿಮಾದ ಹಾಡುಗಳಿಗೆ ಅವರು ಕೊರಿಯೋಗ್ರಾಫ್​ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಕೊರಿಯೋಗ್ರಫಿಯಲ್ಲಿ ‘ದೇವರ: ಪಾರ್ಟ್​ 1’ ಚಿತ್ರದ ರೊಮ್ಯಾಂಟಿಕ್​ ಹಾಡು ಮೂಡಿಬಂದಿರುವುದರಿಂದ ಫ್ಯಾನ್ಸ್​ ನಿರೀಕ್ಷೆ ಡಬಲ್​ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.