‘ಈಗ ಅವರು ಹಿಂಬದಿಯ ಫೋಟೋ ತೆಗೆಯಲ್ಲ’: ಜಾನ್ವಿ ಕಪೂರ್ ನೇರಮಾತು
ನಟಿ ಜಾನ್ವಿ ಕಪೂರ್ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ಪಾಪರಾಜಿಗಳು ಫೋಟೋ ಕ್ಲಿಕ್ಕಿಸುವ ರೀತಿಯ ಬಗ್ಗೆ ಜಾನ್ವಿ ಕಪೂರ್ ತಕರಾರು ತೆಗೆದಿದ್ದರು. ಹಿಂಬದಿಯಿಂದ ಫೋಟೋ ತೆಗೆಯುವುದನ್ನು ಅವರು ವಿರೋಧಿಸಿದ್ದರು. ನಟಿಯ ಮಾತಿಗೆ ಬೆಲೆ ಕೊಟ್ಟು ಪಾಪರಾಜಿಗಳು ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆ ಬಗ್ಗೆ ಜಾನ್ವಿ ಮಾತಾಡಿದ್ದಾರೆ.
ಪಾಪರಾಜಿಗಳಿಗೆ ನಟಿ ಜಾನ್ವಿ ಕಪೂರ್ ಎಂದರೆ ತುಂಬ ಇಷ್ಟ. ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಎಲ್ಲಿಲ್ಲದ ಉತ್ಸಾಹ ತೋರಿಸುತ್ತಾರೆ. ಆದರೆ ಅಲ್ಲೊಂದು ಸಮಸ್ಯೆ ಇದೆ. ಕೆಲವು ಫೋಟೋಗ್ರಾಫರ್ಗಳು ಸರಿಯಲ್ಲದ ರೀತಿಯಲ್ಲಿ ಫೋಟೋ ಕ್ಲಿಕ್ಕಿಸುತ್ತಾರೆ. ಈ ಬಗ್ಗೆ ಜಾನ್ವಿ ಕಪೂರ್ ಅವರು ಎಚ್ಚರಿಕೆ ನೀಡಿದ್ದರು. ಅದರ ಪರಿಣಾಮವಾಗಿ ಒಂದಷ್ಟು ಬದಲಾವಣೆ ಆಗಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಬಗ್ಗೆ ಜಾನ್ವಿ ಕಪೂರ್ ಮಾತನಾಡಿದ್ದಾರೆ. ‘ಪಾಪರಾಜಿಗಳು ಈಗ ಹಿಂಬದಿಯ ಫೋಟೋ ತೆಗೆಯುವುದು ನಿಲ್ಲಿಸಿದ್ದಾರೆ’ ಎಂದು ಜಾನ್ವಿ ಹೇಳಿದ್ದಾರೆ.
ಜಾನ್ವಿ ಕಪೂರ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಒಂದಷ್ಟು ದಿನಗಳ ಹಿಂದೆ ಅವರು ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾದ ಪ್ರಚಾರದ ವೇಳೆ ಪಾಪರಾಜಿಗಳಿಗೆ ಒಂದು ಸೂಚನೆ ನೀಡಿದ್ದರು. ತಪ್ಪಾದ ಆ್ಯಂಗಲ್ನಿಂದ ಫೋಟೋ ಕ್ಲಿಕ್ಕಿಸಬೇಡಿ ಎಂದು ಜಾನ್ವಿ ತಾಕೀತು ಮಾಡಿದ್ದರು. ಅವರ ಮಾತಿಗೆ ಪಾಪರಾಜಿಗಳು ಬೆಲೆ ನೀಡಿದ್ದು, ತಮ್ಮ ಹಳೇ ಚಾಳಿಯನ್ನು ನಿಲ್ಲಿಸಿದ್ದಾರೆ. ಪಾಪರಾಜಿಗಳಲ್ಲಿ ಆಗಿರುವ ಈ ಬದಲಾವಣೆಯನ್ನು ಜಾನ್ವಿ ಗಮನಿಸಿದ್ದಾರೆ.
ಇದನ್ನೂ ಓದಿ: ಜಾನ್ವಿ ಕಪೂರ್ಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದನ್ನು ಒಪ್ಪಿಕೊಂಡ್ರಾ ಈ ಫೇಮಸ್ ಡಾಕ್ಟರ್?
‘ಹಿಂಬದಿಯ ಫೋಟೋ ಪೋಸ್ಟ್ ಮಾಡಿ, ಇದು ಯಾರೆಂದು ಊಹಿಸಿ ಎಂದು ಪಾಪರಾಜಿಗಳು ಕ್ಯಾಪ್ಷನ್ ನೀಡುತ್ತಿದ್ದರು. ಅದರಿಂದ ಅವರಿಗೆ ಹೆಚ್ಚು ಕ್ಲಿಕ್ ಬರುತ್ತದೆ. ಆ ರೀತಿ ಕಾಣಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ. ಜನರು ನನ್ನನ್ನು ಹಾಗೆ ನೋಡುವುದು ನನಗೆ ಹಿಡಿಸಲ್ಲ’ ಎಂದಿದ್ದಾರೆ ಜಾನ್ವಿ ಕಪೂರ್. ಸೋಶಿಯಲ್ ಮೀಡಿಯಾದಲ್ಲಿ ಜಾನ್ವಿ ಕಪೂರ್ ಅವರು ತುಂಬ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.
View this post on Instagram
ಜಾನ್ವಿ ಕಪೂರ್ ನಟನೆಯ ‘ಉಲಜ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 2ರಂದು ಆ ಚಿತ್ರ ರಿಲೀಸ್ ಆಗಲಿದೆ. ಖ್ಯಾತ ನಟಿ ಶ್ರೀದೇವಿ ಮತ್ತು ಯಶಸ್ವಿ ನಿರ್ಮಾಪಕ ಬೋನಿ ಕಪೂರ್ ದಂಪತಿಯ ಮಗಳು ಜಾನ್ವಿ ಕಪೂರ್. ಹಾಗಾಗಿ ಅವರಿಗೆ ಅನೇಕ ಅವಕಾಶಗಳು ಸುಲಭವಾಗಿ ಸಿಕ್ಕವು. ಈಗ ಅವರಿಗೆ ಜನಪ್ರಿಯತೆ ಹೆಚ್ಚಿದೆ. ಆ ಜನಪ್ರಿಯತೆಯ ಬಲದ ಮೇಲೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ಅವಕಾಶ ಗಿಟ್ಟಿಸುತ್ತಿದ್ದಾರೆ. ‘ದೇವರ: ಪಾರ್ಟ್ 1’ ಸಿನಿಮಾದಲ್ಲಿ ಅವರು ಜೂನಿಯರ್ ಎನ್ಟಿಆರ್ ಜೊತೆ ನಟಿಸುತ್ತಿದ್ದಾರೆ. ಆ ಮೂಲಕ ಟಾಲಿವುಡ್ಗೆ ಕಾಲಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.