ವಿದೇಶಿ ಬಂಗಾರದ ನಾಣ್ಯದ ಮೇಲೆ ಶಾರುಖ್ ಖಾನ್ ಹೆಸರು, ಚಿತ್ರ: ಇದು ವಿಶೇಷ ಗೌರವ
ಪಳಪಳನೆ ಹೊಳೆಯುವ ಬಂಗಾರದ ನಾಣ್ಯದ ಮೇಲೆ ಶಾರುಖ್ ಖಾನ್ ಅವರ ಹೆಸರು ಮತ್ತು ಚಿತ್ರ ಇದೆ. ಇಂಥ ಗೌರವ ಪಡೆದ ಮೊಟ್ಟ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆ ಶಾರುಖ್ ಖಾನ್ ಅವರದ್ದು. ಈ ಗೌರವ ಸಿಕ್ಕಿದ್ದಕ್ಕೆ ಶಾರುಖ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬಂಗಾರದ ನಾಣ್ಯದ ಫೋಟೋ ವೈರಲ್ ಆಗಿದೆ. ಆ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ..
ಬಾಲಿವುಡ್ ನಟ ಶಾರುಖ್ ಖಾನ್ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಫ್ರಾನ್ಸ್ನಲ್ಲೂ ಅವರನ್ನು ಇಷ್ಟಪಡುವ ಜನರು ಇದ್ದಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂಬಂತೆ ಒಂದು ವಿಶೇಷ ಗೌರವವನ್ನು ನೀಡಲಾಗಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನ ಗ್ರೇವಿನ್ ಮ್ಯೂಸಿಯಂನಲ್ಲಿ ಹೊಸ ಬಂಗಾರದ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಅದರ ಮೇಲೆ ಶಾರುಖ್ ಖಾನ್ ಅವರು ಚಿತ್ರ ಮತ್ತು ಹೆಸರು ಇದೆ ಎಂಬುದು ವಿಶೇಷ. ಈ ಬಂಗಾರದ ನಾಣ್ಯದ ಫೋಟೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಸಿದ್ಧ ಗ್ರೆವಿನ್ ಸಂಗ್ರಹಾಲಯದಲ್ಲಿ ಅನೇಕ ಸೆಲೆಬ್ರಿಟಿಗಳ ಮೇಣದ ಪ್ರತಿಮೆ ಇದೆ. ಶಾರುಖ್ ಖಾನ್ ಅವರ ಮೇಣದ ಪ್ರತಿಮೆ ಕೂಡ ಇಲ್ಲಿದೆ. ಅದರ ಜೊತೆಗೆ ಬಂಗಾರದ ನಾಣ್ಯವನ್ನು ಕೂಡ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ಗೆ ಗೌರವ ಸಲ್ಲಿಸಲಾಗಿದೆ. ಈ ಗೌರವ ಪಡೆದ ಭಾರತದ ಮೊದಲ ನಟ ಎಂಬ ಖ್ಯಾತಿಗೆ ಶಾರುಖ್ ಖಾನ್ ಪಾತ್ರರಾಗಿದ್ದಾರೆ. ಅಲ್ಲದೇ, ಮಹಾತ್ಮ ಗಾಂಧಿ ಬಳಿಕ ಈ ಗೌರವ ಪಡೆದ ಎರಡನೇ ಭಾರತೀಯ ಎಂಬುದು ಕೂಡ ಶಾರುಖ್ ಖಾನ್ ಹೆಗ್ಗಳಿಕೆ.
ಇದನ್ನೂ ಓದಿ: ಶಾರುಖ್ ಪುತ್ರ ಆರ್ಯನ್ ಖಾನ್ ನೋಡಲು ಮುಗಿಬಿದ್ದ ಜನ; ಅಬ್ಬಬ್ಬಾ ಎಂಥ ಕ್ರೇಜ್
ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಶಾರುಖ್ ಖಾನ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಕೂಡ ಅವರು ಪಡೆದುಕೊಂಡಿದ್ದಾರೆ. ಇಂದಿಗೂ ಅವರಿಗೆ ಸಖತ್ ಬೇಡಿಕೆ ಇದೆ. ಅವರನ್ನು ನೋಡಲು ಮುಂಬೈನ ನಿವಾಸದ ಎದುರ ವಿದೇಶಿ ಪ್ರಜೆಗಳು ಕೂಡ ಬರುತ್ತಾರೆ ಎಂಬುದು ಗಮನಾರ್ಹ ಸಂಗತಿ. ಎಲ್ಲ ದೇಶಗಳಲ್ಲೂ ಶಾರುಖ್ ಫೇಮಸ್ ಆಗಿದ್ದಾರೆ.
Grevin Museum, Paris issued this gold coin in honour of Shah Rukh Khan. The only Bollywood actor to receive it 🌟
SRK TIME100 ICON pic.twitter.com/5Gj5uTh5EJ
— Shah Rukh Khan Universe Fan Club (@SRKUniverse) April 15, 2023
2023ಕ್ಕೂ ಮುನ್ನ ಒಂದಷ್ಟು ವರ್ಷಗಳ ಕಾಲ ಶಾರುಖ್ ಖಾನ್ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುತ್ತಿದ್ದವು. ಆದರೆ 2023ರಲ್ಲಿ ಅವರು ‘ಜವಾನ್’, ‘ಪಠಾಣ್’, ‘ಡಂಕಿ’ ಸಿನಿಮಾಗಳ ಮೂಲಕ ಗೆಲುವು ಪಡೆದರು. ಈ ಚಿತ್ರಗಳ ಗೆಲುವಿನಿಂದ ಅವರು ಭರ್ಜರಿ ಕಮ್ಬ್ಯಾಕ್ ಮಾಡಿದರು. ಈಗ ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಅವರ ಮಕ್ಕಳಾದ ಸುಹಾನಾ ಖಾನ್ ಮತ್ತು ಆರ್ಯನ್ ಖಾನ್ ಕೂಡ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.