ಶಾರುಖ್​ ಪುತ್ರ ಆರ್ಯನ್​ ಖಾನ್​ ನೋಡಲು ಮುಗಿಬಿದ್ದ ಜನ; ಅಬ್ಬಬ್ಬಾ ಎಂಥ ಕ್ರೇಜ್​

ಶಾರುಖ್​ ಖಾನ್​ ರೀತಿ ಆರ್ಯನ್​ ಖಾನ್​ ಅವರು ಹೀರೋ ಆಗುವ ಆಸಕ್ತಿ ತೋರಿಸಿಲ್ಲ. ನಿರ್ದೇಶಕನಾಗಿ ಗುರುತಿಸಿಕೊಳ್ಳಲು ಅವರು ಮುಂದಾಗಿದ್ದಾರೆ. ಪಾರ್ಟಿಗೆ ಬಂದ ಆರ್ಯನ್​ ಖಾನ್​ ಅವರನ್ನು ನೋಡಲು ಫ್ಯಾನ್ಸ್​ ಮುಗಿಬಿದ್ದಿದ್ದಾರೆ. ಅವರ ಫೋಟೋ ಕ್ಲಿಕ್ಕಿಸಲು ಬಂದ ಓರ್ವ ಫೋಟೋಗ್ರಾಫರ್​ ಕೆಳಗೆ ಬಿದ್ದಿದ್ದಾನೆ. ಈ ವಿಡಿಯೋ ವೈರಲ್​ ಆಗಿದೆ.

ಶಾರುಖ್​ ಪುತ್ರ ಆರ್ಯನ್​ ಖಾನ್​ ನೋಡಲು ಮುಗಿಬಿದ್ದ ಜನ; ಅಬ್ಬಬ್ಬಾ ಎಂಥ ಕ್ರೇಜ್​
ಆರ್ಯನ್​ ಖಾನ್​
Follow us
|

Updated on: Jul 08, 2024 | 6:59 PM

ನಟ ಶಾರುಖ್​ ಖಾನ್​ ಅವರನ್ನು ನೋಡಲು ಜನರು ಮುಗಿಬೀಳುತ್ತಾರೆ ಎಂಬುದು ಹೊಸದೇನೂ ಇಲ್ಲ. ಈಗ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರನ್ನು ನೋಡಲು ಕೂಡ ಫ್ಯಾನ್ಸ್​ ಮುಗಿಬೀಳುತ್ತಿದ್ದಾರೆ. ಆರ್ಯನ್​ ಖಾನ್​ ಇನ್ನೂ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿಲ್ಲ. ಅದಕ್ಕೂ ಮುನ್ನವೇ ಅವರಿಗೆ ಅಭಿಮಾನಿಗಳ ಬಳಗ ಸೃಷ್ಟಿ ಆಗಿದೆ. ಅವರು ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಹೊಸ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿದರೆ ಶಾರುಖ್​ ಖಾನ್​ ಪುತ್ರನ ಬಗ್ಗೆ ಜನರಿಗೆ ಎಷ್ಟು ಕ್ರೇಜ್​ ಎಂಬುದು ತಿಳಿಯುತ್ತದೆ.

ಆರ್ಯನ್​ ಖಾನ್​ ಅವರು ಇತ್ತೀಚೆಗೆ ಮುಂಬೈನಲ್ಲಿ ಪಾರ್ಟಿಯೊಂದನ್ನು ಅಟೆಂಡ್​ ಮಾಡಿದರು. ಪಾರ್ಟಿ ನಡೆಯುವ ಸ್ಥಳಕ್ಕೆ ಬಂದ ಅವರು ಕಾರಿನಿಂದ ಕಳೆಗೆ ಇಳಿಯುತ್ತಿದ್ದಂತೆಯೇ ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಮುತ್ತಿಕೊಂಡರು. ಫೋಟೋ ತೆಗೆಯುವ ಉತ್ಸಾಹದಲ್ಲಿ ಫೋಟೋಗ್ರಾಫರ್​ ಒಬ್ಬನಂತೂ ಕೆಳಗೆ ಬಿದ್ದೇಬಿಟ್ಟ!

ಇದನ್ನೂ ಓದಿ: ಆರ್ಯನ್​ ಖಾನ್​ ಬಟ್ಟೆ ವ್ಯಾಪಾರದಲ್ಲಿ ಶಾರುಖ್​ ​ಕೂಡ ಚೌಕಾಸಿ ಮಾಡಲಾಗುತ್ತಿಲ್ಲ; ಅಬ್ಬಬ್ಬಾ ದುಬಾರಿ ಬೆಲೆ

ಕೆಳಗೆ ಬಿದ್ದ ಫೋಟೋಗ್ರಾಫರ್​ ಮೇಲೆ ಏಳಲು ಆರ್ಯನ್​ ಖಾನ್​ ಸಹಾಯ ಮಾಡಿದರು. ಬಳಿಕ ಅವರು ಮುಂದೆ ಸಾಗಿದರು. ಅಕ್ಕಪಕ್ಕದಲ್ಲಿ ಇದ್ದ ಜನರು ಆರ್ಯನ್​ ಖಾನ್​ನ ನೋಡಲು, ಕೈ ಕುಲುಕಲು, ಮಾತನಾಡಿಸಲು ಸಖತ್​ ಉತ್ಸಾಹ ತೋರಿಸಿದರು. ಎಲ್ಲರ ಕಡೆಗೆ ಕೈ ಬೀಸಿದ ಆರ್ಯನ್​ ಖಾನ್​ ಅವರು ಪಾರ್ಟಿ ನಡೆಯುತ್ತಿದ್ದ ಜಾಗದ ಒಳಗೆ ತೆರಳಿದರು. ವೈರಲ್​ ಆಗಿರುವ ಈ ವಿಡಿಯೋ ನೋಡಿ ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದೇ ಪಾರ್ಟಿಗೆ ಆರ್ಯನ್​ ಖಾನ್​ ಅವರ ಗರ್ಲ್​ಫ್ರೆಂಡ್​ ಲರಿಸ್ಸಾ ಬೊನೆಸಿ ಕೂಡ ಬಂದಿದ್ದರು. ಅವರಿಬ್ಬರು ಈ ಮೊದಲು ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ತಮ್ಮ ರಿಲೇಷನ್​ಶಿಪ್​ ಬಗ್ಗೆ ಅವರು ಬಹಿರಂಗವಾಗಿ ಮಾತನಾಡಿಲ್ಲ. ಆರ್ಯನ್​ ಖಾನ್​ ಅವರು ತಂದೆ ರೀತಿ ನಟನೆಯನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ಅವರು ನಿರ್ದೇಶನದ ಕಡೆಗೆ ಆಸಕ್ತಿ ತೋರಿಸಿದ್ದಾರೆ. ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ಸ್ಟಾರ್​ಡಮ್​’ ವೆಬ್​ ಸರಣಿ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಇದರ ಚಿತ್ರೀಕರಣ ಅಂತ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಶಾಸಕರು
ಮುಡಾ ಹಗರಣ ಚರ್ಚೆಗೆ ಅವಕಾಶ ಸಿಗದ್ದಕ್ಕೆ ಸಿಟ್ಟಿಗೆದ್ದ ಬಿಜೆಪಿ ಶಾಸಕರು
ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ದಿಕ್ಕಾಪಾಲಾಗಿ ಓಡಿದ ಜನ
ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ದಿಕ್ಕಾಪಾಲಾಗಿ ಓಡಿದ ಜನ
ನಗುವನ ತೋಟದ ತಡೆಗೋಡೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬಾರದೇ?
ನಗುವನ ತೋಟದ ತಡೆಗೋಡೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬಾರದೇ?
ಉಪ ಮುಖ್ಯಮಂತ್ರಿ ಶಿವಕುಮಾರ್ ಮನೆಗೆ ಬಂದ ಚಿತ್ರನಟ ದರ್ಶನ್ ಪತ್ನಿ, ಸಹೋದರ
ಉಪ ಮುಖ್ಯಮಂತ್ರಿ ಶಿವಕುಮಾರ್ ಮನೆಗೆ ಬಂದ ಚಿತ್ರನಟ ದರ್ಶನ್ ಪತ್ನಿ, ಸಹೋದರ
ಹಾಸನ: ಧಾರಾಕಾರ ಮಳೆಗೆ ಬಿದ್ದ ಬೃಹತ್ ಗಾತ್ರದ ಮರ, ಮಠದ ಕಟ್ಟಡ ಹಾನಿ
ಹಾಸನ: ಧಾರಾಕಾರ ಮಳೆಗೆ ಬಿದ್ದ ಬೃಹತ್ ಗಾತ್ರದ ಮರ, ಮಠದ ಕಟ್ಟಡ ಹಾನಿ
Karnataka Assembly Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
Karnataka Assembly Session Live: ವಿಧಾನ ಮಂಡಲ ಅಧಿವೇಶನ ನೇರ ಪ್ರಸಾರ
ನಾರಾಯಣಪುರ ಜಲಾಶಯಯದಿಂದ ಕೃಷ್ಣಾ ನದಿಗೆ ನೀರು, ನದಿಪಾತ್ರದಲ್ಲಿ ಪ್ರವಾಹದ ಭಯ
ನಾರಾಯಣಪುರ ಜಲಾಶಯಯದಿಂದ ಕೃಷ್ಣಾ ನದಿಗೆ ನೀರು, ನದಿಪಾತ್ರದಲ್ಲಿ ಪ್ರವಾಹದ ಭಯ
‘ಮತ್ತೆ ಗುರುವಾರ ಬರ್ತೀನಿ’; ದರ್ಶನ್ ಭೇಟಿ ಬಗ್ಗೆ ಸಾಧು ಕೋಕಿಲ ಮಾತು
‘ಮತ್ತೆ ಗುರುವಾರ ಬರ್ತೀನಿ’; ದರ್ಶನ್ ಭೇಟಿ ಬಗ್ಗೆ ಸಾಧು ಕೋಕಿಲ ಮಾತು