ನಡೆಯಲೂ ಸಾಧ್ಯವಾಗದಷ್ಟು ಕುಡಿದ ಉರ್ಫಿ ಜಾವೇದ್​; ವೈರಲ್​ ವಿಡಿಯೋದ ಅಸಲಿಯತ್ತು ಏನು?

ವಿಚಿತ್ರವಾಗಿ ಬಟ್ಟೆ ಧರಿಸುವ ನಟಿ ಉರ್ಫಿ ಜಾವೇದ್​ ಅವರ ವಿಡಿಯೋಗಳು ಆಗಾಗ ವೈರಲ್​ ಆಗುತ್ತವೆ. ಈಗ ಬೇರೊಂದು ಕಾರಣಕ್ಕೆ ಅವರ ವಿಡಿಯೋ ವೈರಲ್​ ಆಗಿದೆ. ವೀಕೆಂಡ್​ನಲ್ಲಿ ಕಂಠಪೂರ್ತಿ ಕುಡಿದು ಎಂಜಾಯ್​ ಮಾಡಿರುವ ಉರ್ಫಿ ಜಾವೇದ್​ ಅವರು ನಡೆದಾಡಲು ಕಷ್ಟಪಟ್ಟಿದ್ದಾರೆ. ಈ ವಿಡಿಯೋ ನೋಡಿದ ಅನೇಕರಿಗೆ ಕೆಲವು ಅನುಮಾನಗಳು ಮೂಡಿವೆ.

ನಡೆಯಲೂ ಸಾಧ್ಯವಾಗದಷ್ಟು ಕುಡಿದ ಉರ್ಫಿ ಜಾವೇದ್​; ವೈರಲ್​ ವಿಡಿಯೋದ ಅಸಲಿಯತ್ತು ಏನು?
ಉರ್ಫಿ ಜಾವೇದ್​
Follow us
ಮದನ್​ ಕುಮಾರ್​
|

Updated on: Jul 07, 2024 | 7:19 PM

ನಟಿ ಉರ್ಫಿ ಜಾವೇದ್​ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಅವರು ಹೈಲೈಟ್​ ಆಗುವುದು ಬಟ್ಟೆಯ ಕಾರಣದಿಂದ. ವಿಚಿತ್ರವಾದ ಕಾಸ್ಟ್ಯೂಮ್​ ಧರಿಸುವುದೇ ಅವರ ಐಡೆಂಟಿಟಿ ಆಗಿದೆ. ಆದರೆ ಈಗ ಅವರು ಇನ್ನೊಂದು ಕಾರಣದಿಂದ ಚರ್ಚೆಗೆ ಒಳಗಾಗಿದ್ದಾರೆ. ಈ ವೀಕೆಂಡ್​ನಲ್ಲಿ ಉರ್ಫಿ ಜಾವೇದ್​ ಅವರು ಭರ್ಜರಿ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿ ಮುಗಿಸಿಕೊಂಡು ಹೊರಬಂದ ಅವರನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಯಾಕೆಂದರೆ, ನಡೆಯಲೂ ಕೂಡ ಉರ್ಫಿ ಜಾವೇದ್​ ಕಷ್ಟಪಟ್ಟಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಪಾರ್ಟಿ ಮಾಡಿ ಹೊರಗೆ ಬಂದ ಉರ್ಫಿ ಜಾವೇದ್​ ಅವರನ್ನು ಗೆಳತಿಯರು ಕೈ ಹಿಡಿದು ನಡೆಸಿಕೊಂಡು ಬಂದಿದ್ದಾರೆ. ಸ್ನೇಹಿತೆಯರ ಸಪೋರ್ಟ್​ ಪಡೆದುಕೊಂಡು ಉರ್ಫಿ ಜಾವೇದ್​ ಹೆಜ್ಜೆ ಮೇಲೆ ಹೆಜ್ಜೆ ಇಟ್ಟುಕೊಂಡು ಮುಂದೆ ಸಾಗಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಅವರು ಬೀಳುತ್ತಿದ್ದರು. ಕುಡಿದು ನಶೆ ಏರಿಸಿಕೊಂಡ ಉರ್ಫಿ ಜಾವೇದ್​ ಅವರನ್ನು ಸ್ನೇಹಿತೆಯರು ಸೇಫ್​ ಆಗಿ ಕರೆದುಕೊಂಡು ಬಂದು ಕಾರಿನೊಳಗೆ ಕೂರಿಸಿ ಕಳಿಸಿದ್ದಾರೆ.

ಉರ್ಫಿ ಜಾವೇದ್​ ವೈರಲ್​ ವಿಡಿಯೋ:

ಈ ವಿಡಿಯೋ ನೋಡಿದ ಅನೇಕರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ಕೆಲವರಿಗೆ ಈ ವಿಡಿಯೋ ಮೇಲೆ ಅನುಮಾನ ಮೂಡಿದೆ. ಉರ್ಫಿ ಜಾವೇದ್​ ನಿಜಕ್ಕೂ ಕುಡಿದಿದ್ದಾರೋ ಅಥವಾ ಕುಡಿದಂತೆ ನಟಿಸಿದ್ದಾರೋ ಎಂಬ ಪ್ರಶ್ನೆ ಅನೇಕರಿಗೆ ಕಾಡಿದೆ. ಕಮೆಂಟ್​ ಮೂಲಕ ಆ ಬಗ್ಗೆ ಜನರು ಪ್ರಶ್ನೆ ಮಾಡಿದ್ದಾರೆ. ‘ಕಣ್ಣುಗಳನ್ನು ನೋಡಿದರೆ ಆಕೆ ಮದ್ಯಪಾನ ಮಾಡಿದಂತೆ ಕಾಣುತ್ತಿಲ್ಲ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಬೆಳಗ್ಗೆ ಎದ್ದಾಗ ಮುಖ ದಪ್ಪ ಆಗಿರತ್ತೆ’: ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ ಉರ್ಫಿ ಜಾವೇದ್​

ವಿಡಿಯೋವನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಮತ್ತೊಂದು ವಿಚಾರ ಬಯಲಾಗುತ್ತದೆ. ಪಾರ್ಟಿ ಮಾಡಿ ಹೊರಬರುವಾಗ ಉರ್ಫಿ ಜಾವೇದ್​ ಅವರು ಮೊದಲ ನಾಲ್ಕು ಹೆಚ್ಚೆ ಸರಿಯಾಗಿಯೇ ನಡೆಯುತ್ತಾರೆ. ಆಮೇಲೆ ಪಾಪರಾಜಿಗಳ ಕ್ಯಾಮೆರಾ ಇರುವುದು ಖಚಿತ ಆದ ಬಳಿಕ ಅವರು ತೂರಾಡಿಕೊಂಡು ನಡೆದು ಬರುತ್ತಾರೆ. ಪ್ರಚಾರ ಪಡೆಯಲು ಬೇಕಂತಲೇ ಮಾಡಿರುವ ನಾಟಕ ಇದು ಎಂದು ಅನೇಕರು ಅಭಿಪ್ರಾಯ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು