AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೆಳಗ್ಗೆ ಎದ್ದಾಗ ಮುಖ ದಪ್ಪ ಆಗಿರತ್ತೆ’: ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ ಉರ್ಫಿ ಜಾವೇದ್​

ಅರೆಬರೆ ಬಟ್ಟೆ ಹಾಕಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಸೃಷ್ಟಿ ಮಾಡುತ್ತಿದ್ದ ನಟಿ ಉರ್ಫಿ ಜಾವೇದ್​ ಅವರ ಪರಿಸ್ಥಿತಿ ಈ ರೀತಿ ಆಗಿದೆ. ಅವರ ಮುಖ ಊದಿಕೊಂಡಿದೆ. ಈ ಫೋಟೋಗಳು ವೈರಲ್​ ಆಗಿವೆ. ನಟಿಯ ಈ ಪರಿಸ್ಥಿತಿ ಕಂಡು ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಉರ್ಫಿಯ ಮುಖದ ಸಮಸ್ಯೆಯ ಬಗ್ಗೆ ಇಲ್ಲಿದೆ ಮಾಹಿತಿ..

‘ಬೆಳಗ್ಗೆ ಎದ್ದಾಗ ಮುಖ ದಪ್ಪ ಆಗಿರತ್ತೆ’: ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ ಉರ್ಫಿ ಜಾವೇದ್​
ಉರ್ಫಿ ಜಾವೇದ್​
ಮದನ್​ ಕುಮಾರ್​
|

Updated on: Jun 03, 2024 | 6:39 PM

Share

ನಟಿ ಉರ್ಫಿ ಜಾವೇದ್​ (Urfi Javed) ಅವರು ಸದಾ ಸುದ್ದಿಯಾಗುವುದು ವಿಚಿತ್ರ ಬಟ್ಟೆಗಳ ಕಾರಣಕ್ಕೆ. ಆದರೆ ಈಗ ಅವರು ಇನ್ನೊಂದು ಕಾರಣದಿಂದ ಸುದ್ದಿ ಆಗಿದ್ದಾರೆ. ಉರ್ಫಿ ಜಾವೇದ್​ ಅವರ ಊದಿಕೊಂಡಿರುವ ಮುಖದ (Urfi Javed swollen face) ಫೋಟೋಗಳು ವೈರಲ್​ ಆಗಿವೆ. ಹಾಗಂತ ಇವು ಲೀಕ್​ ಆದ ಫೋಟೋಗಳಲ್ಲ. ಸ್ವತಃ ಉರ್ಫಿ ಜಾವೇದ್​ ಅವರೇ ಈ ಫೋಟೋಗಳನ್ನು (Urfi Javed Photos) ಹಂಚಿಕೊಂಡಿದ್ದಾರೆ. ತಮ್ಮ ಈ ಸ್ಥಿತಿಗೆ ಕಾರಣ ಏನು ಎಂಬುದನ್ನು ಕೂಡ ಅವರು ಹೇಳಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಆ ಕಾರಣದಿಂದಲೇ ಅವರ ಮುಖ ಊದಿಕೊಂಡಿದೆ. ಆ ಬಗ್ಗೆ ಅವರು ವಿವರ ನೀಡಿದ್ದಾರೆ.

‘ನನ್ನ ಮುಖಕ್ಕೆ ಸಂಬಂಧಿಸಿದಂತೆ ಹಾಗೂ ಫಿಲ್ಲರ್ಸ್​ ಬಳಕೆಯ ಕುರಿತಂತೆ ಅನೇಕ ಟೀಕೆ ಎದುರಿಸಿದ್ದೇವೆ. ನನಗೆ ಅಲರ್ಜಿ ಸಮಸ್ಯೆ ಇದೆ. ಬಹುತೇಕ ಸಂದರ್ಭಗಳಲ್ಲಿ ನನ್ನ ಮುಖ ದಪ್ಪ ಆಗಿರುತ್ತದೆ. ಬೆಳಗ್ಗೆ ಎದ್ದಾಗ ಪ್ರತಿ ಎರಡು ದಿನಕ್ಕೆ ಒಮ್ಮೆ ಈ ರೀತಿ ಆಗಿರುತ್ತದೆ. ಇದರಿಂದ ನನಗೆ ಯಾವಾಗಲೂ ಕಿರಿಕಿರಿ ಆಗುತ್ತದೆ’ ಎಂದು ಉರ್ಫಿ ಜಾವೇದ್​ ಅವರು ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಫೋಟೋ ಸಹಿತ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸೀರೆ ಧರಿಸಿದರೂ ತಮ್ಮ ಸ್ಟೈಲ್​ ಬಿಡಲಿಲ್ಲ ನಟಿ ಉರ್ಫಿ ಜಾವೇದ್​

‘ಫಿಲ್ಲರ್ಸ್​ ಸಮಸ್ಯೆ ಅಲ್ಲ. ಅಲರ್ಜಿ ಆಗಿದೆ. ಚಿಕಿತ್ಸೆ ನಡೆಯುತ್ತಿದೆ. ಮುಂದಿನ ಸಾರಿ ನೀವು ನನ್ನ ಊದಿಕೊಂಡ ಮುಖ ನೋಡಿದರೆ ಅದು ನನ್ನ ಅಲರ್ಜಿ ದಿನ ಎಂದು ತಿಳಿಯಿರಿ. ಮಾಮೂಲಿ ಫಿಲ್ಲರ್ಸ್​ ಹೊರತುಪಡಿಸಿ ಬೇರೆ ಏನನ್ನೂ ನಾನು ಮಾಡಿಸಿಲ್ಲ. ಊದಿಕೊಂಡಿರುವ ಮುಖ ನೋಡಿದಾಗ ಫಿಲ್ಲರ್ಸ್​ ಬಗ್ಗೆ ನನಗೆ ಸಲಹೆ ನೀಡಬೇಡಿ. ಅನುಕಂಪ ತೋರಿಸಿ, ಮುಂದೆ ಸಾಗಿ’ ಎಂದು ಉರ್ಫಿ ಜಾವೇದ್​ ಪೋಸ್ಟ್​ ಮಾಡಿದ್ದಾರೆ.

View this post on Instagram

A post shared by Uorfi (@urf7i)

ಸಾಮಾನ್ಯವಾಗಿ ನಟಿಯರು ಇಂಥ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಉರ್ಫಿ ಜಾವೇದ್​ ಅವರು ಈ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಅವರ ಪ್ರಾಮಾಣಿಕತೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಸ್ಪರ್ಧಿಯಾಗಿದ್ದ ಉರ್ಫಿ ಜಾವೇದ್​ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ಇತ್ತೀಚೆಗೆ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ