ತಲೆ ಬೋಳಿಸಿಕೊಂಡ್ರಾ ಉರ್ಫಿ ಜಾವೇದ್? ಫೋಟೋ ನೋಡಿ ಹಿಗ್ಗಾಮುಗ್ಗ ಉಗಿದ ನೆಟ್ಟಿಗರು
ಸುದ್ದಿ ಆಗಬೇಕು ಎಂಬ ಉದ್ದೇಶದಿಂದ ನಟಿ ಉರ್ಫಿ ಜಾವೇದ್ ಅವರು ಒಂದಲ್ಲಾ ಒಂದು ಗಿಮಿಕ್ ಮಾಡುತ್ತಲೇ ಇರುತ್ತಾರೆ. ಈಗ ಅವರು ಬೋಳು ತಲೆಯ ಫೋಟೋ ಹಂಚಿಕೊಂಡಿದ್ದಾರೆ. ಮೊದಲಿಗೆ ಶಾಕ್ ಆದ ನೆಟ್ಟಿಗರು ನಂತರ ಈ ಫೋಟೋವನ್ನು ಗಮನವಿಟ್ಟು ನೋಡಿದ್ದಾರೆ. ಅದರ ಅಸಲಿಯತ್ತು ತಿಳಿದ ಬಳಿಕ ಜನರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ನಟಿ ಉರ್ಫಿ ಜಾವೇದ್ (Urfi Javed) ಅವರು ಮಾಡದ ಡ್ರಾಮಾಗಳು ಇಲ್ಲ. ಜನರನ್ನು ಆಕರ್ಷಿಸಲು ಅವರು ವಿವಿಧ ರೀತಿ ಸರ್ಕಸ್ ಮಾಡುತ್ತಾರೆ. ಸದಾ ಸುದ್ದಿಯಲ್ಲಿ ಇರಬೇಕು ಎಂಬುದು ಅವರ ಉದ್ದೇಶ ಆಗಿರುವಂತಿದೆ. ಪ್ರತಿ ಬಾರಿಯೂ ಚಿತ್ರ-ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಬರುವ ಉರ್ಫಿ ಜಾವೇದ್ ಅವರ ಫೋಟೋಗಳು (Urfi Javed Photos) ವೈರಲ್ ಆಗುತ್ತವೆ. ಈಗ ಅವರು ತಲೆ ಬೋಳಿಸಿಕೊಂಡಂತೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡಿ ಕೆಲವರಿಗೆ ಶಾಕ್ ಆಗಿದೆ. ಆದರೆ ಇನ್ನೂ ಕೆಲವರು ಹಿಗ್ಗಾಮುಗ್ಗಾ ಟ್ರೋಲ್ (Troll) ಮಾಡಿದ್ದಾರೆ.
ನಟಿಯರಿಗೆ ಹೇರ್ ಸ್ಟೈಲ್ ತುಂಬ ಮುಖ್ಯ. ಅವರು ತಲೆ ಬೋಳಿಸಿಕೊಂಡರೆ ನಿಜಕ್ಕೂ ಅಚ್ಚರಿ ಆಗುತ್ತದೆ. ಮೊದಲಿಗೆ ಉರ್ಫಿ ಜಾವೇದ್ ಅವರ ಫೋಟೋಗಳನ್ನು ನೋಡಿ ಜನರಿಗೆ ಶಾಕ್ ಆಯಿತು ಎಂಬುದು ನಿಜ. ಆದರೆ ಆ ಫೋಟೋವನ್ನು ಸ್ವಲ್ಪ ಗಮನವಿಟ್ಟು ನೋಡಿದಾಗ ಅದರೊಳಗಿನ ಅಸಲಿಯತ್ತು ಏನು ಎಂಬುದು ಬಯಲಾಗಿದೆ. ನಿಜವಾಗಿ ಉರ್ಫಿ ಜಾವೇದ್ ತಲೆ ಬೋಳಿಸಿಕೊಂಡಿಲ್ಲ.
ಇದನ್ನೂ ಓದಿ: 100 ಕೆಜಿ ತೂಕದ ಬಟ್ಟೆ ಧರಿಸಿದ ಉರ್ಫಿ ಜಾವೇದ್; ಎಲ್ಲರಿಗೂ ಅಚ್ಚರಿ
ಯಾವುದೋ ಫಿಲ್ಟರ್ ಬಳಸಿ ಉರ್ಫಿ ಜಾವೇದ್ ಅವರು ಈ ಫೋಟೋ ಕ್ಲಿಕ್ಕಿಸಿದ್ದಾರೆ. ಆ ಫಿಲ್ಟರ್ ಯಾವುದು ಅಂತ ಹೇಳಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಫಿಲ್ಟರ್ ಅಲ್ಲ ಎಂಬುದಾದರೆ ಇದು ಎಡಿಟ್ ಮಾಡಿದ ಫೋಟೋ ಎಂದು ನೆಟ್ಟಿಗರು ಊಹಿಸಿದ್ದಾರೆ. ಅಲ್ಲದೇ, ಇದು ಜಗತ್ತಿನ ಅತಿ ಕೆಟ್ಟ ಎಡಿಟಿಂಗ್ ಎಂದು ಅನೇಕರು ಟೀಕೆ ಮಾಡಿದ್ದಾರೆ. ಯಾಕೆಂದರೆ ಉರ್ಫಿ ಜಾವೇದ್ ಅವರ ಕುತ್ತಿಗೆಯ ಹಿಂದೆ ಕೂದಲು ಇರುವುದು ಕಾಣಿಸಿದೆ.
View this post on Instagram
ಎಲ್ಲ ನಟಿಯರಿಗಿಂತ ಭಿನ್ನವಾಗಿ ಉರ್ಫಿ ಜಾವೇದ್ ಅವರು ಗುರುತಿಸಿಕೊಂಡಿದ್ದಾರೆ. ಕಿರುತೆರೆಯ ಸೀರಿಯಲ್ಗಳಲ್ಲಿ ಅವರಿಗೆ ನಿರೀಕ್ಷಿತ ಅವಕಾಶಗಳು ಸಿಗಲಿಲ್ಲ. ನಂತರ ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಭಾಗವಹಿಸಿ ಖ್ಯಾತಿ ಪಡೆದರು. ಬಳಿಕ ಬೋಲ್ಡ್ ಆದಂತಹ ಹಾಗೂ ವಿಚಿತ್ರವಾದ ಬಟ್ಟೆಗಳನ್ನು ಧರಿಸುವ ಮೂಲಕ ಅವರು ಹೊಸ ಸೆನ್ಸೇಷನ್ ಸೃಷ್ಟಿ ಮಾಡಿದರು. ಅವರು ನಟಿಸಿದ ‘ಲವ್ ಸೆ*ಕ್ಸ್ ಔರ್ ದೋಖಾ 2’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.