AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ಕೋಟಿ ಕಲೆಕ್ಷನ್ ಮಾಡಲಾಗದ ನಾಯಕರು 30 ಕೋಟಿ ಕೇಳುತ್ತಿದ್ದಾರೆ: ಕರಣ್

ಬಾಲಿವುಡ್​ನ ಕೆಲ ನಾಯಕರು ಯೋಗ್ಯತೆಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದಿರುವ ಕರಣ್, ‘35 ಕೋಟಿ ಸಂಭಾವನೆ ಪಡೆವ ನಟರ ಸಿನಿಮಾ ಮೊದಲ ದಿನ 3.5 ಕೋಟಿ ಸಹ ಗಳಿಸುತ್ತಿಲ್ಲ’ ಎಂದಿದ್ದಾರೆ.

3 ಕೋಟಿ ಕಲೆಕ್ಷನ್ ಮಾಡಲಾಗದ ನಾಯಕರು 30 ಕೋಟಿ ಕೇಳುತ್ತಿದ್ದಾರೆ: ಕರಣ್
ಮಂಜುನಾಥ ಸಿ.
|

Updated on: Jul 06, 2024 | 7:48 PM

Share

ಬಾಲಿವುಡ್​ನಲ್ಲಿ ಇತ್ತೀಚೆಗೆ ನಟ-ನಟಿಯರು ಹಾಗೂ ನಿರ್ಮಾಣ ಸಂಸ್ಥೆಗಳ ನಡುವೆ ತಿಕ್ಕಾಟ ಶುರುವಾಗಿದೆ. ಕೆಲವು ನಟ-ನಟಿಯರಿಂದ ಸಿನಿಮಾದ ನಿರ್ಮಾಣ ವೆಚ್ಚ ಹೆಚ್ಚಾಗಿದೆ ಎಂದು ನಿರ್ಮಾಪಕರು ಆರೋಪಿಸಿದ್ದು, ನಿರ್ಮಾಣ ವೆಚ್ಚ ಕಡಿಮೆ ಮಾಡಲೆಂದು ನಿರ್ಮಾಪಕರ ಗಿಲ್ಡ್ ಸಭೆ ನಡೆಸಿದ್ದು, ಕೆಲವು ನಟ-ನಟಿಯರಿಗೆ ಹಾಗೂ ಟ್ಯಾಲೆಂಟ್ ಏಜೆನ್ಸಿಗಳಿಗೆ ಪತ್ರ ಬರೆದು ಕೆಲವು ಷರತ್ತುಗಳನ್ನು ಸಹ ವಿಧಿಸಿದೆ. ಬಾಲಿವುಡ್​ನ ಕೆಲವು ದೊಡ್ಡ ನಟರ ಸಿನಿಮಾಗಳೇ ಮಕಾಡೆ ಮಲಗುತ್ತಿವೆ. ಆದರೆ ನಟರು ಮಾತ್ರ ತಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ಳುತ್ತಿಲ್ಲ ಇದು ಸಹ ಕೆಲ ನಿರ್ಮಾಪಕರ ಸಿಟ್ಟಿಗೆ ಕಾರಣವಾಗಿದೆ.

ನಿರ್ಮಾಪಕ, ನಿರ್ದೇಶಕ ಮತ್ತು ನಟರೂ ಆಗಿರುವ ಕರಣ್ ಜೋಹರ್ ಸಹ ಕಳೆದ ಒಂದು ವರ್ಷದಿಂದಲೂ ಈ ಬಗ್ಗೆ ದನಿ ಎತ್ತುತ್ತಲೇ ಇದ್ದಾರೆ. ಒಂದೆರಡು ಸಿನಿಮಾ ಮಾಡಿದವರು ಸಹ ಕೋಟ್ಯಂತರ ರೂಪಾಯಿ ಸಂಭಾವನೆ ಕೇಳುತ್ತಿರುವ ಬಗ್ಗೆ ಕರಣ್ ಜೋಹರ್ ಮೊದಲಿನಿಂದಲೂ ಆಕ್ಷೇಪ ಎತ್ತುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಕೆಲವು ನಟರನ್ನು ತಮ್ಮ ಸಿನಿಮಾದಿಂದ ಹೊರಹಾಕಿದ್ದು ಸಹ ಇದೆ.

ಇದೀಗ ಮತ್ತೊಮ್ಮೆ ಇದೇ ವಿಷಯವಾಗಿ ಮಾತನಾಡಿರುವ ಕರಣ್ ಜೋಹರ್, ‘ಸಿನಿಮಾಗಳ ಕತೆ ವಿಷಯದಲ್ಲಿ ಪ್ರೇಕ್ಷಕರ ಅಭಿರುಚಿಗಳು ಬಹಳ ಬದಾಗಿದೆ. ಅವರಿಗೆ ಬೇರೆ ವಿಧವಾದ ಸಿನಿಮಾ ಬೇಕು. ಆದರೆ ನೀವು ಸಿನಿಮಾ ನಿರ್ಮಾಣ ಮಾಡುವವರಾಗಿ ರೀತಿಯ ಮಾಡಲು ಬಯಸಿದರೆ, ನಿಮ್ಮ ಚಲನಚಿತ್ರವು ಎ, ಬಿ ಮತ್ತು ಸಿ ಕೇಂದ್ರಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುವುದಿಲ್ಲ. ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರವೇ ಸಿನಿಮಾ ಓಡಿದರೆ ಸಾಕಾಗುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ದಕ್ಷಿಣದ ಮತ್ತೊಂದು ಸಿನಿಮಾ ರೀಮೇಕ್ ಮಾಡುತ್ತಿದ್ದಾರೆಯೇ ಕರಣ್ ಜೋಹರ್

‘ಇದರೊಂದಿಗೆ ಸಿನಿಮಾ ನಿರ್ಮಾಣದ ವೆಚ್ಚವೂ ಹೆಚ್ಚಿದೆ. ಬಾಲಿವುಡ್​ನಲ್ಲಿ ಹಣದುಬ್ಬರ ಉಂಟಾಗಿದೆ. ಹಿಂದಿ ಚಿತ್ರರಂಗದಲ್ಲಿ ಸುಮಾರು 10 ಸಮರ್ಥ ನಟರಿದ್ದಾರೆ ಮತ್ತು ಅವರೆಲ್ಲರೂ ಭಾರಿ ಮೊತ್ತದ ಸಂಭಾವನೆಯನ್ನು ಕೇಳುತ್ತಾರೆ. ನೀವು ಅವರಿಗೆ ಸಂಭಾವನೆ ಪಾವತಿಸಿ, ನಂತರ ನೀವು ಸಿನಿಮಾ ನಿರ್ಮಾಣಕ್ಕೆ ಹಣ ಕೊಡುತ್ತೀರಿ ಮತ್ತು ನಂತರ ಸಿನಿಮಾ ಪ್ರಚಾರಕ್ಕೆ ವೆಚ್ಚ ಮಾಡಬೇಕಾಗುತ್ತದೆ. ತದನಂತರ ನಿಮ್ಮ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಂದುಕೊಂಡಷ್ಟು ಗಳಿಕೆ ಮಾಡುವುದಿಲ್ಲ. 35 ಕೋಟಿ ಕೇಳುತ್ತಿರುವ ಆ ಸಿನಿಮಾ ನಟರ ಸಿನಿಮಾಗಳು ಮೊದಲ ದಿನ 3.5 ಕೋಟಿ ಕಲೆಕ್ಷನ್ ಸಹ ಆಗುತ್ತಿಲ್ಲ’ ಎಂದಿದ್ದಾರೆ.

ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ‘ಸಿನಿಮಾ ನಿರ್ಮಾಣದ ಗಣಿತವೇ ಅರ್ಥವಾಗದಂತಾಗಿದೆ. ಇಷ್ಟೋಂದು ಖರ್ಚುಗಳನ್ನು ಹೇಗೆ ನಿರ್ವಹಿಸಬೇಕು? ಆದರೂ, ನಾವು ಚಲನಚಿತ್ರಗಳನ್ನು ನಿರ್ಮಿಸುವುದನ್ನು ಮತ್ತು ನಿರ್ಮಾಣದ ಬಗ್ಗೆ ವಿಷಯವನ್ನು ಚರ್ಚಿಸುವುದು ನಡೆಯುತ್ತಲೇ ಇರಬೇಕು, ಏಕೆಂದರೆ ಮಾಧ್ಯಮಗಳಿಗೂ ಆಹಾರ ಬೇಕಲ್ಲವೆ? ಈ ಸಿನಿಮಾ ನಿರ್ಮಾಣದ ಹಿಂದೆ ಸಾಕಷ್ಟು ಡ್ರಾಮಾ ಇದೆ ಮತ್ತು ನಮ್ಮ ಸಿನಿಮಾದ ವಾಕ್ಯ ರಚನೆಯು ಅದನ್ನು ಮೀರಿದೆ’ ಎಂದಿದ್ದಾರೆ ಕರಣ್ ಜೋಹರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ನರೇಗಾ ಹೆಸರು ಬದಲಾವಣೆ ವಿವಾದ, ರಾಜ್ಯಪಾಲರ ಭಾಷಣ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಬೀದಿಯಲ್ಲಿ ವ್ಯಕ್ತಿಯ ಬೆನ್ನಟ್ಟಿ ಚಾಕುವಿನಿಂದ ಇರಿದು ಪುರುಷರ ಗುಂಪು
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
ಮಾಲೀಕರ ಅಂತ್ಯಕ್ರಿಯೆಗೂ ಟ್ರ್ಯಾಕ್ಟರ್ ಹತ್ತಿ ಬಂದ ನಾಯಿ
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್
2 ಓವರ್​ಗಳ ಮೂಲಕ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಫ್ಘಾನ್ ಸ್ಪಿನ್ನರ್
ಆಂಧ್ರಪ್ರದೇಶ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಮೂವರು ಸಜೀವ ದಹನ
ಆಂಧ್ರಪ್ರದೇಶ: ಟ್ರಕ್​ಗೆ ಡಿಕ್ಕಿ ಹೊಡೆದ ಬಸ್, ಮೂವರು ಸಜೀವ ದಹನ