ಶಾರುಖ್​ನ ಸಿನಿಮಾದಿಂದ ತೆಗೆಯಲು ಬಂದಿತ್ತು 10 ಕೋಟಿ ರೂ ಆಫರ್; ನಿರ್ದೇಶಕಿಯ ಅಚ್ಚರಿಯ ನಿರ್ಧಾರ

ಕಾಮಿಡಿಯನ್ ಝಾಕಿರ್ ಖಾನ್ ಜೊತೆ ಫರಾ ಮಾತನಾಡಿದ್ದಾರೆ. ಈ ವೇಳೆ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರನ್ನು ಹೀರೋ ಸ್ಥಾನದಿಂದ ತೆಗೆಯಲು 10 ಕೋಟಿ ರೂಪಾಯಿ ಆಫರ್ ಬಂದಿತ್ತಂತೆ. ಆದರೆ, ಈ ಆಫರ್​ನ ಅವರು ಒಪ್ಪಿಕೊಂಡಿಲ್ಲ.

ಶಾರುಖ್​ನ ಸಿನಿಮಾದಿಂದ ತೆಗೆಯಲು ಬಂದಿತ್ತು 10 ಕೋಟಿ ರೂ ಆಫರ್; ನಿರ್ದೇಶಕಿಯ ಅಚ್ಚರಿಯ ನಿರ್ಧಾರ
ಶಾರುಖ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 06, 2024 | 9:30 AM

ಫರಾ ಖಾನ್ ಅವರು ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರನ್ನು ಹೀರೋ ಸ್ಥಾನದಿಂದ ತೆಗೆಯಲು 10 ಕೋಟಿ ರೂಪಾಯಿ ಆಫರ್ ಬಂದಿತ್ತಂತೆ. ಆದರೆ, ಈ ಆಫರ್​ನ ಅವರು ಒಪ್ಪಿಕೊಂಡಿಲ್ಲ. ನೇರವಾಗಿ ಅವರು ಇದಕ್ಕೆ ನೋ ಎಂದರು. 10 ಕೋಟಿ ರೂಪಾಯಿ ಪಡೆದು ಶಾರುಖ್​ನ ಹೊರ ಹಾಕಿದರೆ ಎಲ್ಲರೂ ಏನು ಭಾವಿಸಬಹುದು ಎಂಬ ಆಲೋಚನೆ ಅವರ ತಲೆಗೆ ಬಂದಿತ್ತು.

ಕಾಮಿಡಿಯನ್ ಝಾಕಿರ್ ಖಾನ್ ಜೊತೆ ಫರಾ ಮಾತನಾಡಿದ್ದಾರೆ. ಈ ವೇಳೆ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ‘ಅದು ಹ್ಯಾಪಿ ನ್ಯೂ ಇಯರ್ ಸಿನಿಮಾದ ಸಮಯ. ನಿರ್ಮಾಪಕರೊಬ್ಬರು ನನಗೆ 10 ಕೋಟಿ ರೂಪಾಯಿ ಆಫರ್ ಮಾಡಿದರು. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರನ್ನು ತೆಗೆದು ತಮ್ಮ ಮಗನನ್ನು ಹೀರೋ ಮಾಡುವಂತೆ ಬೇಡಿಕೆ ಇಟ್ಟರು’ ಎಂದಿದ್ದಾರೆ ಫರಾ ಖಾನ್.

ಈ ಆಫರ್​ನ ನೇರವಾಗಿ ರಿಜೆಕ್ಟ್ ಮಾಡಿದರು ಅವರು. ‘ನಾನು ಆ ರೀತಿ ಮಾಡಲ್ಲ ಎಂದೆ. ನಾನು ಸಿನಿಮಾಗೆ ಅನ್ಯಾಯ ಮಾಡಲ್ಲ. 10 ಕೋಟಿ ರೂಪಾಯಿ ಪಡೆದು ನಾನು ಶಾರುಖ್​ನ ಹೊರ ಹಾಕಿದೆ ಎಂಬುದು ಅವರಿಗೆ ಗೊತ್ತಾದರೆ ಹೇಗನ್ನಿಸಬೇಡ? ನಾನು ಹಾಗೆ ಮಾಡಲಾರೆ ಎಂದೆ’ ಎಂದಿದ್ದಾರೆ ಫರಾ ಖಾನ್.

ಇದನ್ನೂ ಓದಿ: ಐಪಿಎಲ್ ಫೈನಲ್ ವೇಳೆ ಶಾರುಖ್ ಖಾನ್ ಧರಿಸಿದ ಈ ವಾಚ್ ಬೆಲೆ 11 ಕೋಟಿ ರೂಪಾಯಿ

‘ಹ್ಯಾಪಿ ನ್ಯೂ ಇಯರ್’ 2014ರಲ್ಲಿ ಬಂದ ಸಿನಿಮಾ. ಇದು ಫರಾ ಖಾನ್ ಅವರ ಕೊನೆ ನಿರ್ದೇಶನದ ಸಿನಿಮಾ. ಇದಕ್ಕೂ ಮೊದಲು ‘ತೀಸ್ ಮಾರ್ ಖಾನ್’, ‘ಮೇ ಹೂ ನಾ’, ‘ಓಂ ಶಾಂತಿ ಓಂ’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ‘ಹ್ಯಾಪಿ ನ್ಯೂ ಇಯರ್’ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಗಳಿಕೆ ಮಾಡಿತು. ಆದರೆ, ಈ ಚಿತ್ರ ವಿಮರ್ಶೆಯಲ್ಲಿ ಸೋತಿತ್ತು. ಶಾರುಖ್ ಖಾನ್ ಇರೋ ಕಾರಣಕ್ಕೆ ಸಿನಿಮಾ ಸ್ವಲ್ಪ ಗಳಿಕೆ ಮಾಡಿತ್ತು. ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.