ಐಪಿಎಲ್ ಫೈನಲ್ ವೇಳೆ ಶಾರುಖ್ ಖಾನ್ ಧರಿಸಿದ ಈ ವಾಚ್ ಬೆಲೆ 11 ಕೋಟಿ ರೂಪಾಯಿ
ಇದು ಒಂದು ವಾಚ್ನ ವಿಷಯಕ್ಕೆ ಮಾತ್ರ ಸೀಮಿತವಲ್ಲ. ಶಾರುಖ್ ಖಾನ್ ಅವರ ಬಳಿಕ ಇಂಥ ಹಲವಾರು ವಾಚ್ಗಳಿವೆ. ದುಬಾರಿ ಕೈ ಗಡಿಯಾರದ ಬಗ್ಗೆ ಅವರಿಗೆ ಕ್ರೇಜ್ ಇದೆ. ಅವರ ಕಲೆಕ್ಷನ್ನಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ಗಳ ಅನೇಕ ವಾಚ್ಗಳಿವೆ. ಎಸ್ಆರ್ಎಚ್ ವರ್ಸಸ್ ಕೆಕೆಆರ್ ತಂಡಗಳ ನಡುವಿನ ಮ್ಯಾಚ್ ನೋಡಲು ಬಂದ ಶಾರುಖ್ ಖಾನ್ ಅವರು 11 ಕೋಟಿ ರೂಪಾಯಿ ಬೆಲೆ ಬಾಳುವ ವಾಚ್ ಧರಿಸಿದ್ದರು.
ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಅವರಿಗೆ ವಾಚ್ಗಳ ಬಗ್ಗೆ ವಿಶೇಷ ಕ್ರೇಜ್ ಇದೆ. ಹಾಗಾಗಿ ಅವರು ಅನೇಕ ದುಬಾರಿ ವಾಚ್ಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ (IPL) ಫೈನಲ್ ಪಂದ್ಯಕ್ಕೆ ಶಾರುಖ್ ಖಾನ್ ಸಾಕ್ಷಿಯಾದರು. ಸೈನ್ ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಅಂತಿಮ ಹಣಾಹಣಿ ನೋಡಲು ಬಂದ ಶಾರುಖ್ ಖಾನ್ ಅವರು ದುಬಾರಿ ವಾಚ್ ಧರಿಸಿದ್ದು ಎಲ್ಲರ ಕಣ್ಣು ಕುಕ್ಕಿದೆ. ‘ರಿಚರ್ಡ್ ಮಿಲ್’ (Richard Mille) ಕಂಪನಿಯ ಈ ವಾಚ್ನ ಬೆಲೆ ಕೇಳಿದರೆ ತಲೆ ತಿರುಗುತ್ತದೆ.
ಪ್ರತಿ ಸಿನಿಮಾಗೆ ಶಾರುಖ್ ಖಾನ್ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಲ್ಲಿ ನಟಿಸುವ ಅವರಿಗೆ ಬಹುಕೋಟಿ ರೂಪಾಯಿ ಆದಾಯ ಬರುತ್ತದೆ. ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ಅವರು ಅದರಿಂದಲೂ ಭಾರಿ ಹಣ ಸಂಪಾದನೆ ಮಾಡುತ್ತಾರೆ. ಹಲವು ಉದ್ಯಮಗಳಲ್ಲಿ ಅವರು ಹಣ ಹೂಡಿಕೆ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಅವರ ಆದಾಯ ಹೆಚ್ಚಾಗುತ್ತಲೇ ಇದೆ. ಅದಕ್ಕೆ ತಕ್ಕಂತೆ ಶಾರುಖ್ ಖಾನ್ ಅವರ ಜೀವನ ಶೈಲಿ ಇದೆ.
ಶಾರುಖ್ ಖಾನ್ ಅವರು ಐಪಿಎಲ್ನಲ್ಲಿ ‘ಕೊಲ್ಕತ್ತಾ ನೈಟ್ ರೈಡರ್ಸ್’ ತಂಡದ ಮಾಲೀಕನಾಗಿದ್ದು, ಈ ಬಾರಿ ಅವರ ತಂಡ ಚಾಂಪಿಯನ್ ಆಗಿದೆ. ಗೆಲುವಿನ ಬಳಿಕ ಶಾರುಖ್ ಖಾನ್ ಅವರು ಸ್ಟೇಡಿಯಂನಲ್ಲಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಧರಿಸಿದ್ದ ದುಬಾರಿ ಬೆಲೆಯ ‘ರಿಚರ್ಡ್ ಮಿಲ್ ಆರ್ಎಂ 052’ ವಾಚ್ ಗಮನ ಸೆಳೆದಿದೆ. ಇದರ ಬೆಲೆ ಅಂದಾಜು 11 ಕೋಟಿ ರೂಪಾಯಿ ಎನ್ನಲಾಗಿದೆ.
ಇದನ್ನೂ ಓದಿ: ಗೆದ್ದ ಖುಷಿಯಲ್ಲಿ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ಗೆ ಮುತ್ತಿಟ್ಟ ಶಾರುಖ್ ಖಾನ್
ಈ ವಾಚ್ನ ದರದಲ್ಲಿ ಒಂದು ಅದ್ದೂರಿ ಸಿನಿಮಾ ಮಾಡಬಹುದು. ಎಷ್ಟೋ ಜನರ ಲೈಫ್ ಸೆಟ್ಲ್ ಆಗಬಹುದು. ಲಿಮಿಡೆಟ್ ಎಡಿಷನ್ನ ಈ ವಾಚ್ ಧರಿಸಿದ ಶಾರುಖ್ ಖಾನ್ ಅವರ ಶ್ರೀಮಂತಿಕೆ ನೋಡಿ ನೆಟ್ಟಿಗರು ಕಣ್ಣರಳಿಸಿದ್ದಾರೆ. ಕಳೆದ ವರ್ಷ ಶಾರುಖ್ ಖಾನ್ ಅವರು ‘ಜವಾನ್’, ‘ಪಠಾಣ್’, ‘ಡಂಕಿ’ ಸಿನಿಮಾಗಳ ಮೂಲಕ ದೊಡ್ಡ ಗೆಲುವು ಕಂಡರು. ಆ ನಂತರ ಅವರ ಚಾರ್ಮ್ ಇನ್ನಷ್ಟು ಹೆಚ್ಚಾಗಿದೆ. ಅವರ ಹೊಸ ಸಿನಿಮಾ ಮೇಲೆ ಕಾತರ ಜಾಸ್ತಿ ಆಗಿದೆ. ಶಾರುಖ್ ಖಾನ್ ಅವರ ಫ್ಯಾನ್ ಫಾಲೋಯಿಂಗ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.