ದಿ ಗ್ರೇಟ್ ಖಲಿ ಜತೆ ಶಾರುಖ್, ಆರ್ಯನ್ ಖಾನ್, ಅಂದು-ಇಂದು ವ್ಯತ್ಯಾಸ ನೋಡಿ..
ದಿ ಗ್ರೇಟ್ ಖಲಿ ಅವರು ಶಾರುಖ್ ಖಾನ್ ಮತ್ತು ಆರ್ಯನ್ ಖಾನ್ ಜೊತೆ ಈ ಮೊದಲು ಕೂಡ ಫೋಟೋಗೆ ಪೋಸ್ ನೀಡಿದ್ದರು. ಹೊಸ ಫೋಟೋ ಜೊತೆ ಹಳೇ ಫೋಟೋ ಕೂಡ ಈಗ ವೈರಲ್ ಆಗಿದೆ. ದಿ ಗ್ರೇಟ್ ಖಲಿ ಮಾತ್ರವಲ್ಲದೇ ಜಾನ್ ಸೀನಾ ಕೂಡ ಶಾರುಖ್ ಖಾನ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ. ಆ ಫೋಟೋ ಸಹ ವೈರಲ್ ಆಗ್ತಿದೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಯಿಂದಾಗಿ ಜಗತ್ತಿನ ಘಟಾನುಘಟಿ ಸೆಲೆಬ್ರಿಟಿಗಳೆಲ್ಲ ಒಂದೆಡೆ ಸೇರುವಂತಾಗಿದೆ. ಹಾಲಿವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಸಮಾಗಮ ಈ ಮದುವೆಯಲ್ಲಿ ಆಗಿದೆ. ಸಿನಿಮಾದವರು ಮಾತ್ರವಲ್ಲದೇ ಬೇರೆ ಬೇರೆ ಕ್ಷೇತ್ರದ ಖ್ಯಾತನಾಮರು ಸಹ ಈ ವಿವಾಹಕ್ಕೆ ಸಾಕ್ಷಿ ಆಗಿದ್ದಾರೆ. WWE ಮಾಜಿ ಆಟಗಾರ ದಿ ಗ್ರೇಟ್ ಖಲಿ ಅವರು ಕೂಡ ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ಶಾರುಖ್ ಖಾನ್ ಮತ್ತು ಆರ್ಯನ್ ಖಾನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದಿ ಗ್ರೇಟ್ ಖಲಿ ಅವರು ಈ ಫೊಟೋ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಅವರು ಇಂಡೋ-ವೆಸ್ಟರ್ಟ್ ಶೈಲಿಯ ನೇವಿ ಬ್ಲೂ ಸೂಟ್ ಧರಿಸಿದ್ದಾರೆ. ದಿ ಗ್ರೇಟ್ ಖಲಿ ಅವರು ಕಪ್ಪು ಬಣ್ಣದ ಸೂಟ್ ಧರಿಸಿ ಬಂದಿದ್ದಾರೆ. ಸ್ಮಾರ್ಟ್ ಬ್ಲ್ಯಾಕ್ ಸೂಟ್ನಲ್ಲಿ ಆರ್ಯನ್ ಖಾನ್ ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ನೋಡಿ ಫ್ಯಾನ್ಸ್ಗೆ ಒಂದು ಹಳೇ ಫೋಟೋ ನೆನಪಾಗಿದೆ.
ಇದನ್ನೂ ಓದಿ: ಶಾರುಖ್ ಪುತ್ರ ಆರ್ಯನ್ ಖಾನ್ ನೋಡಲು ಮುಗಿಬಿದ್ದ ಜನ; ಅಬ್ಬಬ್ಬಾ ಎಂಥ ಕ್ರೇಜ್
ದಿ ಗ್ರೇಟ್ ಖಲಿ, ಶಾರುಖ್ ಖಾನ್ ಹಾಗೂ ಆರ್ಯನ್ ಖಾನ್ ಅವರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದರು ಇದೇ ಮೊದಲೇನೂ ಅಲ್ಲ. ಆರ್ಯನ್ ಖಾನ್ ಇನ್ನೂ ಬಾಲಕನಾಗಿದ್ದಾಗ ತೆಗೆದ ಫೋಟೋ ಒಂದಿದೆ. ಈಗ ಮತ್ತೆ ಆ ಫೋಟೋ ವೈರಲ್ ಆಗುತ್ತಿದೆ. ಅಂದು ಚಿಕ್ಕವನಾಗಿದ್ದ ಆರ್ಯನ್ ಖಾನ್ ಈಗ ಅಪ್ಪನಷ್ಟೇ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಈಗ ಅವರು ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ನಿರ್ಧರಿಸಿದ್ದಾರೆ.
View this post on Instagram
ಶಾರುಖ್ ಖಾನ್ ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಇದೆ. ಅನಂತ್ ಅಂಬಾನಿಯ ಮದುವೆಗೆ ಬಂದಿರುವ WWE ಆಟಗಾರ ಜಾನ್ ಸೀನಾ ಕೂಡ ಶಾರುಖ್ ಜೊತೆ ಖುಷಿಯಿಂದ ಫೋಟೋ ತೆಗೆದುಕೊಂಡಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
A surreal 24 hours. So grateful for the Ambani family for their unmatched warmth and hospitality.
An experience filled with so many unforgettable moments which allowed me to connect with countless new friends, including meeting @iamsrk and being able to tell him personally the… pic.twitter.com/MNRb29cFuV
— John Cena (@JohnCena) July 13, 2024
ಈ ಮದುವೆಗೆ ಕಿಮ್ ಕರ್ದಾಶಿಯಾನ್, ಜಸ್ಟಿನ್ ಬೀಬರ್ ಅವರಂತಹ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಬಾಲಿವುಡ್ನ ಬಹುತೇಕರು ಬಂದು ಈ ಅದ್ದೂರಿ ವಿವಾಹವನ್ನು ಕಣ್ತುಂಬಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.