AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಮನೆ ಮದುವೆಯಲ್ಲಿ ಮಾಜಿ ಗೆಳತಿ ಜೊತೆ ಡ್ಯಾನ್ಸ್ ಮಾಡಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ಬಾಲಿವುಡ್​ನ ಸ್ಟಾರ್ ಹೀರೋ. ಅವರಿಗೆ ಅದೃಷ್ಟ ಕೈ ಹಿಡಿದಿದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ವಿವಾಹದ ವಿಚಾರದಲ್ಲಿ ಅವರಿಗೆ ಅದೃಷ್ಟ ಇಲ್ಲ. ಅವರು ಕತ್ರಿನಾ ಕೈಫ್, ಐಶ್ವರ್ಯಾ ರೈ ಸೇರಿ ಅನೇಕರ ಜೊತೆ ಡೇಟಿಂಗ್ ಮಾಡಿದ್ದಾರೆ.

ಅಂಬಾನಿ ಮನೆ ಮದುವೆಯಲ್ಲಿ ಮಾಜಿ ಗೆಳತಿ ಜೊತೆ ಡ್ಯಾನ್ಸ್ ಮಾಡಿದ ಸಲ್ಮಾನ್ ಖಾನ್
ಅಂಬಾನಿ ಮನೆ ಮದುವೆಯಲ್ಲಿ ಮಾಜಿ ಗೆಳತಿ ಜೊತೆ ಡ್ಯಾನ್ಸ್ ಮಾಡಿದ ಸಲ್ಮಾನ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 15, 2024 | 10:55 AM

Share

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಹಲವು ಜೋಡಿಗಳು ಇಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಪ್ರೀತಿ ವಿಚಾರವೂ ಇಲ್ಲಿ ಚರ್ಚೆ ಆಗಿದೆ. ಸಲ್ಮಾನ್ ಖಾನ್ ಅವರು ರೆಡ್ ಕಾರ್ಪೆಟ್ ಮೇಲೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಸಲ್ಲು ಜೊತೆ ಯುಲಿಯಾ ವಂಟೂರ್ ಅವರು ಈ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಈ ಮೂಲಕ ಇಬ್ಬರೂ ಇನ್ನೂ ರಿಲೇಶನ್​ಶಿಪ್​ನಲ್ಲಿದ್ದಾರಾ ಎನ್ನುವ ಪ್ರಶ್ನೆ ಕಾಡಿದೆ.

ಸಲ್ಮಾನ್ ಖಾನ್ ಅವರು ಬಾಲಿವುಡ್​ನ ಸ್ಟಾರ್ ಹೀರೋ. ಅವರಿಗೆ ಅದೃಷ್ಟ ಕೈ ಹಿಡಿದಿದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಮದುವೆ ವಿಚಾರದಲ್ಲಿ ಅವರಿಗೆ ಅದೃಷ್ಟ ಇಲ್ಲ. ಅವರು ಕತ್ರಿನಾ ಕೈಫ್, ಐಶ್ವರ್ಯಾ ರೈ ಸೇರಿ ಅನೇಕರ ಜೊತೆ ಡೇಟಿಂಗ್ ಮಾಡಿದ್ದಾರೆ. ಆದರೆ ಯಾವುದೂ ಮದುವೆವರೆಗೆ ಹೋಗಿಲ್ಲ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಯುಲಿಯಾ ವಂಟೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಇತ್ತೀಚೆಗೆ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ, ಇವರದ್ದು ಬ್ರೇಕಪ್ ಆಗಿದೆ ಎಂದೇ ಭಾವಿಸಲಾಗಿತ್ತು. ಈಗ ಈ ವಿಚಾರ ಮತ್ತೆ ಚರ್ಚೆ ಆಗಿದೆ.

ಚಿನ್ನದ ಬಣ್ಣದ ಸೀರೆಯಲ್ಲಿ ಯುಲಿಯಾ ವಂಟೂರ್ ಮಿಂಚಿದ್ದಾರೆ. ಇತ್ತೀಚೆಗೆ ಅಂಬಾನಿ ಮನೆಯ ಮದುವೆಯಲ್ಲಿ ಸಲ್ಲು ಹಾಗೂ ಯೂಲಿಯಾ ಒಟ್ಟಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಮದುವೆಗೆ ಐಶ್ವರ್ಯಾ ರೈ ಕೂಡ ಆಗಮಿಸಿದ್ದರು. ಕೆಲವರು ಐಶ್ವರ್ಯಾ ಜೊತೆ ಸಲ್ಲು ನಿಂತಿರುವ ರೀತಿಯಲ್ಲಿ ಫೋಟೋನ ಎಡಿಟ್ ಮಾಡಿದ್ದರು. ಇದನ್ನು ನೋಡಿ ಅನೇಕರು ಸಲ್ಲು ಅವರೇ ಪೋಸ್ ಕೊಟ್ಟಿದ್ದಾರೆ ಎಂದು ಭಾವಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ನಡೆದಿತ್ತು ಸಂಚು, 25 ಲಕ್ಷದ ಕಾಂಟ್ರ್ಯಾಕ್ಟ್​, ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳ ಸರಬರಾಜು

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರು ಶುಕ್ರವಾರ ವಿವಾಹ ಆದರು. ಭಾನುವಾರ ಹಾಗೂ ಸೋಮವಾರ ಅದ್ದೂರಿಯಾಗಿ ರಿಸೆಪ್ಷನ್ ನಡೆಯುತ್ತಿದೆ. ಈ ಮೊದಲು ಸಾಕಷ್ಟು ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳನ್ನು ಇವರು ಆಯೋಜಿಸಿದ್ದರು. ಅನಂತ್ ಅಂಬಾನಿ ಅವರು ಈ ಮದುವೆಗೆ ಬರೋಬ್ಬರಿ 5000 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್, ಐಶ್ವರ್ಯಾ ರೈ ಸೇರಿ ಅನೇಕರು ವಿವಾಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!