ಲಂಡನ್ನಲ್ಲಿ ಕೃಷ್ಣ ದಾಸ್ ಕೀರ್ತನೆ ಕೇಳಿದ ಅನುಷ್ಕಾ-ವಿರಾಟ್ ದಂಪತಿ
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಆಧ್ಯಾತ್ಮದ ಬಗ್ಗೆ ಅಪಾರವಾದ ನಂಬಿಕೆ ಇದೆ. ದಂಪತಿಗಳು ಲಂಡನ್ನಲ್ಲಿ ಇದ್ದಾರೆ. ಈ ವೇಳೆ ಅವರು ಲಂಡನ್ನಲ್ಲಿ ಕೃಷ್ಣ ದಾಸ್ ಅವರ ಕೀರ್ತಯನೆಯಲ್ಲಿ ಭಾಗಿ ಆಗಿದ್ದಾರೆ.
ಬಾಲಿವುಡ್ನ ಖ್ಯಾತ ನಟರು, ನಿರ್ದೇಶಕರು, ಗಾಯಕರು, ಕ್ರಿಕೆಟರ್ಗಳು ಅಂಬಾನಿ ಮನೆಯ ಮದುವೆಯಲ್ಲಿ ಭಾಗಿ ಆಗುತ್ತಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಆದರೆ, ಈ ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಾತ್ರ ಭಾಗಿ ಆಗಿಲ್ಲ. ಈ ದಂಪತಿಗಳು ಲಂಡನ್ನಲ್ಲಿ ಇದ್ದಾರೆ. ಈ ವೇಳೆ ಅವರು ಲಂಡನ್ನಲ್ಲಿ ಕೃಷ್ಣ ದಾಸ್ ಅವರ ಕೀರ್ತಯನೆಯಲ್ಲಿ ಭಾಗಿ ಆಗಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಅವರು ಮದುವೆ ಆದ ಬಳಿಕ ಸಾಕಷ್ಟು ಬದಲಾಗಿದ್ದಾರೆ. ಅವರು ಆಗಾಗ ಪತ್ನಿ ಜೊತೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದು ಇದೆ. ಈಗ ಅವರು ಕೃಷ್ಣ ದಾಸ್ ಅವರ ಕೀರ್ತನೆಯಲ್ಲಿ ಭಾಗಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
Virat Kohli & Anushka Sharma attended Krishna Das Ji’s Kirtan event in London. ❤️ pic.twitter.com/FqGDVS36V6
— Virat Kohli Fan Club (@Trend_VKohli) July 14, 2024
ಕೃಷ್ಣ ದಾಸ್ ಅವರ ಮೂಲ ಹೆಸರು ಜೆಫ್ರಿ. ಅವರು 60ರ ದಶಕದಲ್ಲಿ ಭಾರತಕ್ಕೆ ಬಂದರು. ಆ ಬಳಿಕ ಅವರು ಆಧ್ಯಾತ್ಮಿಕ ಪಯಣ ಆರಂಭಿಸಿದರು. ನೀಮ್ ಕರೋಲಿ ಬಾಬಾ ಅವರಿಂದ ಜೆಫ್ರಿ ಅವರು ಸ್ಫೂರ್ತಿ ಪಡೆದರು. ಇವರ ಕೀರ್ತನೆಯಲ್ಲಿ ಕೃಷ್ಣ ದಾಸ್ ಅವರು ಕೂಡ ಭಾಗಿ ಆಗಿದ್ದರು. ಕೃಷ್ಣ ದಾಸ್ ಅವರ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಈ ಗೆಲುವು ನಿನ್ನದೂ ಕೂಡ’; ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ಪ್ರೀತಿಯ ಪತ್ರ
ಅನುಷ್ಕಾ ಶರ್ಮಾ ಅವರು ಫೆಬ್ರವರಿ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮನೀಡಿದರು. ಆ ಬಳಿಕ ಅನುಷ್ಕಾ ಶರ್ಮಾ ಅಲ್ಲಿಯೇ ಇದ್ದರು. ಐಪಿಎಲ್ ಆಡುವ ಸಂದರ್ಭದಲ್ಲಿ ಅನುಷ್ಕಾ ಬಾರತಕ್ಕೆ ಬಂದಿದ್ದರು. ಕೆಲವು ಸಂದರ್ಭದಲ್ಲಿ ಅವರು ಕ್ರಿಕೆಟ್ ಮ್ಯಾಚ್ ನೋಡಲು ಮೈದಾನಕ್ಕೆ ಬಂದಿದ್ದು ಇದೆ. ಈಗ ಅನುಷ್ಕಾ ಹಾಗೂ ವಿರಾಟ್ ಅವರು ಲಂಡನ್ನಲ್ಲಿ ಸೆಟಲ್ ಆಗುತ್ತಾರೆ ಎನ್ನುವ ಮಾತಿದೆ. ಅನುಷ್ಕಾ ಶರ್ಮಾ ಕೂಡ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.