AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್​ ಸಿಂಗ್​ಗೆ ಕಿಸ್ ಮಾಡಿದ್ರಾ ಕರಣ್ ಜೋಹರ್? ವೈರಲ್ ಆಗಿದೆ ವಿಡಿಯೋ

ಅದು ‘ಕಾಫಿ ವಿತ್ ಕರಣ’ ಶೋನಲ್ಲಿ ನಡೆದ ಘಟನೆ. ರಣಬೀರ್ ಕಪೂರ್ ಹಾಗೂ ರಣವೀರ್ ಇಬ್ಬರೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಈ ವೇಳೆ ಕರಣ್ ಜೋಹರ್ ಹೇಳಿದ ಮಾತು ಮತ್ತೆ ಚರ್ಚೆಗೆ ಬಂದಿದೆ. ಅನೇಕರು ಕರಣ್ ಜೋಹರ್ ಅವರನ್ನು ‘ಗೇ’ ಎಂದು ಅನೇಕರು ಕರೆದಿದ್ದಾರೆ.

ರಣವೀರ್​ ಸಿಂಗ್​ಗೆ ಕಿಸ್ ಮಾಡಿದ್ರಾ ಕರಣ್ ಜೋಹರ್? ವೈರಲ್ ಆಗಿದೆ ವಿಡಿಯೋ
ಕರಣ್-ರಣವೀರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 24, 2024 | 10:54 AM

Share

ರಣವೀರ್ ಸಿಂಗ್ ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರಿಗೆ ಹಿಂದಿ ಚಿತ್ರರಂಗಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರು ಕರಿಯರ್​ನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಣವೀರ್ ಸಿಂಗ್ ಅವರು ಸದಾ ಚಿಲ್ ಆಗಿರುತ್ತಾರೆ. ಅವರ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕರಣ್ ಜೋಹರ್ ಅವರು ರಣವೀರ್ ಸಿಂಗ್ ಅವರ ಕಿಸ್ಸಿಂಗ್ ಕಲೆಯನ್ನು ಬಾಯ್ತುಂಬ ಹೊಗಳಿದ್ದಾರೆ.

ಅದು ‘ಕಾಫಿ ವಿತ್ ಕರಣ’ ಶೋನಲ್ಲಿ ನಡೆದ ಘಟನೆ. ರಣಬೀರ್ ಕಪೂರ್ ಹಾಗೂ ರಣವೀರ್ ಇಬ್ಬರೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ‘ನೀವು ಬೆಸ್ಟ್ ಕಿಸ್ಸರ್, ಏಕೆಂದರೆ ನನಗೆ ವೈಯಕ್ತಿಕವಾಗಿ ಅನುಭವ ಇದೆ’ ಎಂದು ಕರಣ್ ಜೋಹರ್ ಹೇಳುತ್ತಾರೆ. ಇದಕ್ಕೆ ರಣವೀರ್ ಸಿಂಗ್ ಅವರು ‘ಅಲ್ಲವೇ’ ಎಂದು ಕೇಳುತ್ತಾರೆ. ಸದ್ಯ ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಇದನ್ನು ಭಿನ್ನ ಭಿನ್ನವಾಗಿ ಬಣ್ಣಿಸುವ ಕೆಲಸ ಆಗುತ್ತಿದೆ. ನಿಜಕ್ಕೂ ಕರಣ್ ಅವರು ರಣವೀರ್​ಗೆ ಕಿಸ್ ಮಾಡಿದ್ರಾ ಎಂದು ಅನೇಕರು ಹೇಳಿದ್ದಾರೆ. ಕರಣ್ ಜೋಹರ್ ‘ಗೇ’ ಎಂದು ಅನೇಕರು ಕರೆದಿದ್ದಾರೆ.

View this post on Instagram

A post shared by Pranchosays (@pranchosays)

ಕರಣ್ ಜೋಹರ್ ಅವರನ್ನು ಈ ರೀತಿ ಕರೆಯೋದಕ್ಕೂ ಒಂದು ಕಾರಣ ಇದೆ. ಅವರು ನಡೆದುಕೊಳ್ಳುತ್ತಾ ಬರುವ ರೀತಿ. ಅವರು ಅನೇಕ ಕಡೆಗಳಲ್ಲಿ ಇದೇ ರೀತಿ ನಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದು ಇದೆ. ಅವರನ್ನು ಅನೇಕರು ಗೇ ಎಂದು ಕರೆದಿದ್ದಾರೆ. ಶಾರುಖ್ ಖಾನ್ ಅವರ ಮಧ್ಯೆ ಕರಣ್ ಜೋಹರ್ ಮಧ್ಯೆ ಸಂಬಂಧ ಕಲ್ಪಿಸಲಾಗಿತ್ತು. ಈ ಬಗ್ಗೆ ಕರಣ್ ಜೋಹರ್ ಅವರಿಗೆ ಬೇಸರ ಉಂಟಾಗಿದೆ.

ಇದನ್ನೂ ಓದಿ: ‘ನಾವು ಯಾರಿಗೆ ಹುಟ್ಟಿದ್ದೇವೆ?’; ಕರಣ್ ಜೋಹರ್​ಗೆ ಮಕ್ಕಳಿಂದ ಎದುರಾಗುತ್ತಿದೆ ಉತ್ತರಿಸಲಾಗದ ಪ್ರಶ್ನೆ

ಕರಣ್ ಜೋಹರ್ ಅವರು ತಮಗೆಲ್ಲ ‘ಗೇ’ ಎಂದು ಕರೆದಾಗೆಲ್ಲ ಬೇಸರ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ. ‘ನನಗೆ ಹಾಗೆ ಕರೆದಾಗೆಲ್ಲ ಬೇಸರ ಆಗುತ್ತದೆ. ನನ್ನ ಹಾಗೂ ಶಾರುಖ್ ಮಧ್ಯೆ ಸಂಬಂಧ ಕಲ್ಪಿಸಲಾಗಿತ್ತು. ಅವರು ನನಗೆ ಸಹೋದರನ ರೀತಿ’ ಎಂದು ಕರಣ್ ಹೇಳಿದ್ದರು. ಕರಣ್ ಜೋಹರ್ ಅವರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ. ಅವರಿಗೆ ಇಬ್ಬರು ಮಕ್ಕಳು. ‘ನನ್ನ ತಾಯಿ ಯಾರು ಎನ್ನುವ ಪ್ರಶ್ನೆಯನ್ನು ಮಕ್ಕಳು ಕೇಳುತ್ತಿದ್ದಾರೆ’ ಎಂದು ಕರಣ್ ಜೋಹರ್ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:50 am, Wed, 24 July 24