ವಿಚ್ಛೇದನ ಪಡೆದರೂ ಆಮಿರ್ ಖಾನ್-ಕಿರಣ್ ರೀತಿಯೇ ಇರಲಿದ್ದಾರೆ ಹಾರ್ದಿಕ್-ನತಾಶಾ?
ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯಾ ಮಾಡೆಲ್ ನತಾಶಾ ಇಬ್ಬರೂ ನಾಲ್ಕು ವರ್ಷ ಒಟ್ಟಾಗಿ ಇದ್ದರು. ಮಗು ಮಾಡಿಕೊಂಡ ನಂತರ ಇವರು ಮದುವೆ ಆದರು. ಮಗನಿಗೆ ಅಗಸ್ತ್ಯ ಎಂದು ಹಾರ್ದಿಕ್ ಹೆಸರು ಇಟ್ಟಿದ್ದಾರೆ. ಈಗ ನತಾಶಾ ಹಾಗೂ ಹಾರ್ದಿಕ್ ದೂರ ಆಗಿದ್ದಾರೆ.

ಸೆಲೆಬ್ರಿಟಿಗಳ ವಲಯದಲ್ಲಿ ವಿಚ್ಛೇದನ ಸರ್ವೇ ಸಾಮಾನ್ಯ. ಅಲ್ಲಿ ಅನೇಕ ಸೆಲೆಬ್ರಿಟಿಗಳು ವಿವಾಹ ಆದ ಕೆಲವೇ ವರ್ಷಗಳ ಬಳಿಕ ವಿಚ್ಛೇದನ ಪಡೆಯುತ್ತಾರೆ. ಆದಾಗ್ಯೂ ಆಗಾಗ ಭೇಟಿ ಆಗುತ್ತಾರೆ. ಒಟ್ಟಾಗಿ ಸಿನಿಮಾ ಮಾಡುತ್ತಾರೆ. ಆಮಿರ್ ಖಾನ್ ಹಾಗೂ ಕಿರಣ್ ರಾವ್ ವಿಚ್ಛೇದನ ಪಡೆದಿದ್ದಾರೆ. ಆ ಬಳಿಕ ಇವರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಕೂಡ ಈ ದಂಪತಿಯನ್ನು ಫಾಲೋ ಮಾಡಿದಂತಿದೆ.
ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಸರ್ಬಿಯಾ ಮಾಡೆಲ್ ನತಾಶಾ ಇಬ್ಬರೂ ನಾಲ್ಕು ವರ್ಷ ಒಟ್ಟಾಗಿ ಇದ್ದರು. ಮಗು ಮಾಡಿಕೊಂಡ ನಂತರ ಇವರು ಮದುವೆ ಆದರು. ಮಗನಿಗೆ ಅಗಸ್ತ್ಯ ಎಂದು ಹಾರ್ದಿಕ್ ಹೆಸರು ಇಟ್ಟಿದ್ದಾರೆ. ಈಗ ನತಾಶಾ ಹಾಗೂ ಹಾರ್ದಿಕ್ ದೂರ ಆಗಿದ್ದಾರೆ. ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಬೆಳವಣಿಗೆ ಬಳಿಕ ನತಾಶಾ ಅವರು ಮರಳಿ ಸರ್ಬಿಯಾ ತೆರಳಿದ್ದಾರೆ. ಅಲ್ಲಿನ ಪಾರ್ಕ್ ಒಂದರಲ್ಲಿ ನತಾಶಾ ಮಗನ ಜೊತೆ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದು ಹಾರ್ದಿಕ್ ಕಡೆಯಿಂದ ರಿಪ್ಲೈ ಸಿಕ್ಕಿದೆ.
View this post on Instagram
ವಿಚ್ಛೇದನ ಸಿಗೋ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿಕೊಳ್ಳುತ್ತಾರೆ. ಆದರೆ, ಹಾರ್ದಿಕ್ ಹಾಗೂ ನತಾಶಾ ಆ ರೀತಿ ಅಲ್ಲ. ಇಬ್ಬರೂ ಪರಸ್ಪರ ಫಾಲೋ ಮಾಡಿಕೊಳ್ಳುತ್ತಿದ್ದಾರೆ. ಈಗ ವಿಚ್ಛೇದನ ಪಡೆದ ಬಳಿಕ ಇದೇ ಮೊದಲ ಬಾರಿಗೆ ಹಾರ್ದಿಕ್ ಅವರು ನತಾಶಾ ಪೋಸ್ಟ್ಗೆ ರಿಪ್ಲೈ ಮಾಡಿದ್ದಾರೆ. ಮಗನ ಜೊತೆ ನತಾಶಾ ಇರೋ ಫೋಟೋಗೆ ಹಾರ್ದಿಕ್ ಅವರು ಕಣ್ಣಲ್ಲಿ ಹಾರ್ಟ್ ಇರೋ ಎಮೋಜಿ, ಸೂಪರ್ ಅನ್ನೋ ಎಮೋಜಿಯನ್ನು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ಗೆ ನಾಯಕನ ಪಟ್ಟ ಕಟ್ಟಿದ್ಯಾಕೆ? ಸ್ಪಷ್ಟನೆ ನೀಡಿದ ಅಗರ್ಕರ್
ಹಾರ್ದಿಕ್ಗೆ ಮಗನ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಮಗನ ಬೆಳೆಸೋ ಜವಾಬ್ದಾರಿಯನ್ನು ಹಾರ್ದಿಕ್ ಹಾಗೂ ನತಾಶಾ ಇಬ್ಬರೂ ಒಟ್ಟಾಗಿ ಪಡೆದುಕೊಂಡಿದ್ದಾರೆ. ಹೀಗಾಗಿ ಇವರು ಆಗಾಗ ಭೇಟಿ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಆಮಿರ್ ಹಾಗೂ ಕಿರಣ್ ರಾವ್ ರೀತಿಯೇ ಇಬ್ಬರೂ ಜೀವನ ನಡೆಸಿದರೂ ಅಚ್ಚರಿ ಏನಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Thu, 25 July 24




