‘ಅಡಲ್ಟ್ ಕಂಟೆಂಟ್ ಇಲ್ಲ’; ಅನುಪಮಾ ಪರಮೇಶ್ವರನ್ ನಟನೆಯ ಚಿತ್ರಕ್ಕೆ ಸಿಕ್ತು ಸ್ಪಷ್ಟನೆ

ಕಿಸ್ಸಿಂಗ್ ದೃಶ್ಯಗಳು ಇದ್ದರೆ ಇಡೀ ಕುಟುಂಬದವರು ಹೋಗಿ ಸಿನಿಮಾ ನೋಡಲು ಮುಜುಗರ ಆಗುತ್ತದೆ. ಈ ಕಾರಣಕ್ಕೆ ಇದು ಫ್ಯಾಮಿಲಿ ಸಿನಿಮಾ ಆಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ನಟ ಸಿದ್ದು ಜೊನ್ನಲಗಡ್ಡ ಅವರು ಸ್ಪಷ್ಟನೆ ನೀಡಿದ್ದಾರೆ.

‘ಅಡಲ್ಟ್ ಕಂಟೆಂಟ್ ಇಲ್ಲ’; ಅನುಪಮಾ ಪರಮೇಶ್ವರನ್ ನಟನೆಯ ಚಿತ್ರಕ್ಕೆ ಸಿಕ್ತು ಸ್ಪಷ್ಟನೆ
ಅನುಪಮಾ
Follow us
ರಾಜೇಶ್ ದುಗ್ಗುಮನೆ
|

Updated on: Mar 19, 2024 | 6:59 AM

‘ಟಿಲ್ಲು ಸ್ಕ್ವೇರ್’ ಸಿನಿಮಾ (Tillu SquareMovie) ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಮಾರ್ಚ್ 29ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ‘ಡಿಜೆ ಟಿಲ್ಲು’ ಚಿತ್ರದ ಸೀಕ್ವೆಲ್ ಆಗಿ ಈ ಸಿನಿಮಾ ಮೂಡಿ ಬರುತ್ತಿದೆ. ಅನುಪಮಾ ಪರಮೇಶ್ವರನ್ ಹಾಗೂ ಸಿದ್ದು ಜೊನ್ನಲಗಡ್ಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಖತ್ ಬೋಲ್ಡ್ ಕಂಟೆಂಟ್ ಇದೆ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಕಾರಣ ಆಗಿರೋದು ಬೋಲ್ಡ್ ದೃಶ್ಯಗಳು ಹಾಗೂ ಕಿಸ್ಸಿಂಗ್ ದೃಶ್ಯಗಳು. ಇತ್ತೀಚೆಗೆ ಸಿನಿಮಾದ ‘ಓ ಮೈ ಲಿಲ್ಲಿ..’ ಹಾಡು ರಿಲೀಸ್ ಆಗಿದೆ. ಈ ವೇಳೆ ಇಡೀ ತಂಡ ಫ್ಯಾನ್ಸ್ ಜೊತೆ ಚರ್ಚೆ ನಡೆಸಿದೆ.

ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಅವರು ‘ಡಿಜೆ ಟಿಲ್ಲು’ಗೆ ಸೀಕ್ವೆಲ್ ಮಾಡಬಹುದು ಎಂದು ಹೇಳಿದ್ದರು. ಈ ಪ್ಲ್ಯಾನ್ ನಿರ್ಮಾಪಕರಿಗೂ ಇಷ್ಟ ಆಗಿತ್ತು. ಮೊದಲು ‘ಟಿಲ್ಲು ರಿಟರ್ನ್​’, ‘ಟಿಲ್ಲು 2’ ಎಂದೆಲ್ಲ ಟೈಟಲ್ ಇಡಲಾಗಿತ್ತು. ತ್ರಿವಿಕ್ರಮ್ ಅವರು ‘ಟಿಲ್ಲು ಸ್ಕ್ವೇರ್’ ಟೈಟಲ್ ಫಿಕ್ಸ್ ಮಾಡಿದ್ದರು.

ಕಿಸ್ಸಿಂಗ್ ದೃಶ್ಯಗಳು ಇದ್ದರೆ ಇಡೀ ಕುಟುಂಬದವರು ಹೋಗಿ ಸಿನಿಮಾ ನೋಡಲು ಮುಜುಗರ ಆಗುತ್ತದೆ. ಈ ಕಾರಣಕ್ಕೆ ಇದು ಫ್ಯಾಮಿಲಿ ಸಿನಿಮಾ ಆಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ನಟ ಸಿದ್ದು ಜೊನ್ನಲಗಡ್ಡ ಅವರು ಸ್ಪಷ್ಟನೆ ನೀಡಿದ್ದಾರೆ. ‘ಈ ಚಿತ್ರದಲ್ಲಿ ಯಾವುದೇ ಅಡಲ್ಟ್ ಕಂಟೆಂಟ್ ಇಲ್ಲ’ ಎಂದು ಅವರು ಹೇಳಿದ್ದಾರೆ. ನಿರ್ಮಾಪಕ ನಾಗ ವಂಶಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ಡಿಜೆ ಟಿಲ್ಲು ಚಿತ್ರವನ್ನು ಜನರು ನೋಡಿ ಇಷ್ಟಪಟ್ಟಿದ್ದಾರೆ. ಟಿಲ್ಲು ಸ್ಕ್ವೇರ್ ಕೂಡ ಜನರಿಗೆ ಇಷ್ಟ ಆಗಲಿದೆ’ ಎಂದಿದ್ದಾರೆ ಅವರು.

ಅನುಪಮಾ ಪರಮೇಶ್ವರನ್ ಹಾಗೂ ಸಿದ್ದು ಅವರ ಕೆಮಿಸ್ಟ್ರಿಯನ್ನು ಜನರು ಇಷ್ಟಪಟ್ಟಿದ್ದಾರೆ. ಅವರು ಪ್ಯಾಷನೇಟ್ ಆಗಿ ಕಿಸ್ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದಕ್ಕೆ ಅವರು ಖುಷಿಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನುಪಮಾ ಅವರು ಈ ರೀತಿಯ ದೃಶ್ಯಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಟಿಲ್ಲು ಸ್ಕ್ವೇರ್’ ಚಿತ್ರದಲ್ಲಿ ಸಖತ್ ಬೋಲ್ಡ್ ಅವತಾರ ತಾಳಿದ ಅನುಪಮಾ ಪರಮೇಶ್ವರನ್

ಮಲ್ಲಿಕ್ ರಾಮ್ ಅವರು ‘ಟಿಲ್ಲು ಸ್ಕ್ವೇರ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಿಂದ ಅನುಪಮಾಗೆ ದೊಡ್ಡ ಗೆಲುವು ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು